ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳು.. ಮಾಜಿ ಸಚಿವ, ಹಿಂದೂಪರ ಸಂಘಟನೆಗಳಿಂದ ಆಕ್ರೋಶ

ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನವನ್ನು ಪಾಲಿಕೆ ಅಧಿಕಾರಿಗಳು ಕೆಡವಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಬೆಂಬಲಿಗರು ಅಡ್ಡಿ ಪಡಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಬರುತ್ತಿದ್ದಂತೆ ದೇಗುಲ ತೆರವು ಸ್ಥಗಿತಗೊಳಿಸಿ ಪಾಲಿಕೆ ಅಧಿಕಾರಿಗಳು ವಾಪಸ್ ಹೋಗಿದ್ದಾರೆ...

ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳು.. ಮಾಜಿ ಸಚಿವ, ಹಿಂದೂಪರ ಸಂಘಟನೆಗಳಿಂದ ಆಕ್ರೋಶ
ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳು
Edited By:

Updated on: Jun 20, 2021 | 8:49 AM

ತುಮಕೂರು: ಜಿಲ್ಲೆಯಲ್ಲಿ ರಾತ್ರೋರಾತ್ರಿ ಗಣಪತಿ ದೇಗುಲ ತೆರವುಗೊಳಿಸಲಾಗಿದೆ. ಪಾಲಿಕೆ ಅಧಿಕಾರಿಗಳು ತುಮಕೂರಿನ ವಿನಾಯಕ ನಗರದ ಹಳೇ ಮಾರುಕಟ್ಟೆಯಲ್ಲಿದ್ದ ಗಣಪತಿ ದೇವಸ್ಥಾನದ ಗೋಪುರವನ್ನು ಕೆಡವಿದ್ದಾರೆ. ತರಕಾರಿ ಮಾರುಕಟ್ಟೆ ವ್ಯಾಪಾರಿಗಳು ಈ ದೇಗುಲವನ್ನು ನಿರ್ಮಿಸಿದ್ದರು.

ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನವನ್ನು ಪಾಲಿಕೆ ಅಧಿಕಾರಿಗಳು ಕೆಡವಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಬೆಂಬಲಿಗರು ಅಡ್ಡಿ ಪಡಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಹಿಂದೂಪರ ಸಂಘಟನೆಗಳು ಬರುತ್ತಿದ್ದಂತೆ ದೇಗುಲ ತೆರವು ಸ್ಥಗಿತಗೊಳಿಸಿ ಪಾಲಿಕೆ ಅಧಿಕಾರಿಗಳು ವಾಪಸ್ ಹೋಗಿದ್ದಾರೆ. ಸದ್ಯ ದೇವಾಲಯದ ಗರ್ಭಗುಡಿ, ವಿಗ್ರಹ ಮಾತ್ರ ಇದೆ.

ಇನ್ನು ಹಾಸನದಲ್ಲಿ ನಿಧಿ ಆಸೆಗೆ ಪುರಾತನ ಕಾಲದ ದೇವಾಲಯದ ಗರ್ಭಗುಡಿಯನ್ನು ಅಗೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಆಲೂರು ಠಾಣೆ ಪೊಲೀಸರು ಸುಮಾರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನ ಸಹಕಾರಿ ಸಂಘಗಳ ಉಪ ನಿಬಂಧಕ ನಾರಾಯಣ್, ಅರ್ಚಕ ತಿಪ್ಪೇಸ್ವಾಮಿ, ಜ್ಯೋತಿಷಿ ಮಂಜುನಾಥ್, ಚನ್ನರಾಯಪಟ್ಟಣ ಮೂಲದ ಜಯರಾಮ್, ಚೇತನ್, ಮಂಜುನಾಥ್, ಹಾಸನ ಮೂಲದ ಕುಮಾರ್ ಬಂಧಿತ ಆರೋಪಿಗಳು.

ಜಿಲ್ಲೆಯ ಆಲೂರು ತಾಲೂಕಿನ ಕೆ.ಹೊಸಕೋಟೆ ಸಮೀಪದ ಪಾರ್ವತಮ್ಮನ ಬೆಟ್ಟದಲ್ಲಿರುವ ದೇಗುಲದಲ್ಲಿ ಬಂಧಿತರು ಕೃತ್ಯವೆಸಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನು ಅಗೆದಿರುವ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರನ್ನು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು. ತನಿಖೆ ವೇಳೆ ಆರೋಪಿಗಳು ನಾಲ್ಕು ದಿನಗಳ ಹಿಂದೆ ರಾತ್ರೊ ರಾತ್ರಿ ಬೆಟ್ಟದ ಮೇಲೆ ಶೋಧ ನಡೆಸಿರುವುದು ಬೆಳಕಿಗೆ ಬಂದಿದೆ.

ಏಕಾಏಕಿ ಜೆಸಿಬಿ ಬಳಸಿ ದೇವಸ್ಥಾನ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳು

ಇದನ್ನೂ ಓದಿ: Gold Rate Today: ವೀಕೆಂಡ್​ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ