ಹಾವೇರಿ: ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯ ಪಕ್ಕದಲ್ಲಿರುವ ಸಭಾಭವನವನ್ನು ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಬಸವರಾಜ ಬೊಮ್ಮಾಯಿ ನಿವಾಸದ ಪಕ್ಕದಲ್ಲೇ ಈ ಸಭಾಭವನ ಇದ್ದು, ಅದರಲ್ಲಿ ಕೊರೊನಾ ರೋಗಿಗಳಿಗಾಗಿ 50 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿರುವ ಕೊವಿಡ್ ಸೋಂಕಿತರಿಗಾಗಿ ಬಸವರಾಜ ಬೊಮ್ಮಾಯಿಯವರು ಈ ವ್ಯವಸ್ಥೆ ಮಾಡಿದ್ದು, ಈ ಕೇರ್ ಸೆಂಟರ್ನಲ್ಲಿ ರೋಗಿಗಳಿ ಚಿಕಿತ್ಸೆ ನೀಡಲು ವೈದ್ಯರು ಮತ್ತು ಸಿಬ್ಬಂದಿಯ ನೇಮಕ ಮಾಡಲಾಗಿದೆ. ಶಿಗ್ಗಾಂವಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಗೃಹಸಚಿವರು ತಮ್ಮ ಮನೆಯ ಆವರಣವನ್ನೇ ಕೊವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಶಿಗ್ಗಾಂವಿಯಲ್ಲಿ ಸದ್ಯ 374 ಕೊರೊನಾ ಸಕ್ರಿಯ ಪ್ರಕರಣಗಳು ಇವೆ.
ಇದನ್ನೂ ಓದಿ:ಕೊವಿಡ್ ಲಸಿಕೆಯ 1ನೇ ಡೋಸ್ ಕೊಟ್ಟು 2ನೇ ಡೋಸ್ ಕೊಡದಿರುವುದು ಸಂವಿಧಾನದ ಆರ್ಟಿಕಲ್ 21ರ ಉಲ್ಲಂಘನೆ: ಹೈಕೋರ್ಟ್
ಎರಡು ಜಿಲ್ಲೆಗಳ ಗಡಿಯ ಗುಡ್ಡದಲ್ಲಿ 18 ಕಾಡಾನೆಗಳ ಸಾವು; ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು
ರಾಜ್ಯದಲ್ಲಿಂದು 35,297 ಕೊರೊನಾ ಕೇಸ್ಗಳು ದಾಖಲು; ರಾಜ್ಯ ರಾಜಧಾನಿಯಲ್ಲೇ ಹೆಚ್ಚು, ಹಾವೇರಿಯಲ್ಲಿ ಕಡಿಮೆ