ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ

ಇಂದು ಅಕ್ಷಯ ತೃತೀಯ ಇರುವ ಕಾರಣ ಚಿನ್ನದ ಮಾರಾಟಕ್ಕೆ ಅನುಮತಿ ನೀಡುವಂತೆ ಜ್ಯುವೆಲರಿ ಫೌಂಡೇಶನ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.

ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ
Follow us
Skanda
|

Updated on: May 14, 2021 | 8:08 AM

ಬೆಂಗಳೂರು: ಕೊರೊನಾ ಎರಡನೇ ಅಲೆ ದೆಸೆಯಿಂದ ಈ ಬಾರಿಯೂ ಹಬ್ಬ, ಹರಿದಿನ, ಸಂಭ್ರಮಾಚರಣೆಗಳೆಲ್ಲಾ ಸೊರಗಿ ಹೋಗಿವೆ. ಪ್ರತಿವರ್ಷ ಅಕ್ಷಯ ತೃತೀಯ ಬಂತೆಂದರೆ ಬಂಗಾರ ಖರೀದಿಸಲು ಮುಗಿಬೀಳುತ್ತಿದ್ದ ಜನರಿಗೆ ಕಳೆದ ವರ್ಷದಿಂದ ಹಬ್ಬದ ನೆಪದಲ್ಲಿ ಚಿನ್ನ ಕೊಳ್ಳುವುದು ದೂರದ ಮಾತಾಗಿದೆ. ಇಂದು ಅಕ್ಷಯ ತೃತೀಯ ಇರುವ ಕಾರಣ ಚಿನ್ನದ ಮಾರಾಟಕ್ಕೆ ಅನುಮತಿ ನೀಡುವಂತೆ ಜ್ಯುವೆಲರಿ ಫೌಂಡೇಶನ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.

ಅಕ್ಷಯ ತೃತೀಯ ಸಂಭ್ರಮಕ್ಕೆ ಲಾಕ್‌ಡೌನ್‌ ಅಡ್ಡಿಯಾಗಿದ್ದು, ಇಂದು 2 ಗಂಟೆಗಳ ಕಾಲ ಚಿನ್ನದ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಬಳಿ ಕರ್ನಾಟಕ ಜ್ಯುವೆಲ್ಲರಿ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಮನವಿ ಮಾಡಿದ್ದರು. ಅಕ್ಷಯ ತೃತೀಯ ಹಿನ್ನೆಲೆ ಅವರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಲಾಗಿತ್ತು. ಆದರೆ, ಮನವಿಗೆ ಒಪ್ಪದ ಪಿ.ರವಿಕುಮಾರ್ ನಿಮ್ಮದು ಅಗತ್ಯ ಸೇವೆಯಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟಿವಿ9ಗೆ ಕರ್ನಾಟಕ ಜ್ಯುವೆಲ್ಲರಿ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಪ್ರತಿಕ್ರಿಯಿಸಿದ್ದು, ಜನರ ಜೀವ ರಕ್ಷಣೆ ದೃಷ್ಟಿಯಿಂದ ಮನವಿ ತಿರಸ್ಕಾರ ಮಾಡಲಾಗಿದೆ ಎಂದಿದ್ದಾರೆ. ಬಂಗಾರದ ಹಬ್ಬಕ್ಕೆ ಕೊರೊನಾ ಕರಿ ನೆರಳು ಬಿದ್ದಿದೆ. ಅಕ್ಷಯ ತೃತೀಯದಂದೇ ಕರ್ನಾಟಕದಲ್ಲಿ 2 ಸಾವಿರ ಕೆ.ಜಿ ಚಿನ್ನ ಮಾರಾಟವಾಗ್ತಿತ್ತು. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಬರೋಬ್ಬರಿ 500 ರಿಂದ 700 ಕೋಟಿ ರೂ. ವಹಿವಾಟು ಆಗ್ತಿತ್ತು. ರಾಜ್ಯದಲ್ಲಿ 1.20 ಲಕ್ಷ ಚಿನ್ನಾಭರಣ ಮಾರಾಟಗಾರರು ಅದೇ ಕೆಲಸವನ್ನ ನಂಬಿ ಬದುಕುತ್ತಿದ್ದಾರೆ. ಈ ವರ್ಷ ತುಂಬಾ ನಷ್ಟವಾಗ್ತಿದೆ ಎಂದು ಆಭರಣ ವ್ಯಾಪಾರಿಗಳ ಕಷ್ಟವನ್ನು ವಿವರಿಸಿದ್ದಾರೆ.

(Karnataka Government Chief Secretary denies to open jewellery shops for Akshaya Tritiya 2021 amid Lockdown)

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ 

Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್