ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಸಿಸಿ ಕ್ಯಾಮರಾದಲ್ಲಿ ಎದೆ ಝಲ್ ಎನಿಸುವ ದೃಶ್ಯ ಸೆರೆ
ಉಡುಪಿ ತಾಲೂಕಿನ ಮಣಿಪಾಲದ ಸಮೀಪದ ಹಿರಿಯಡ್ಕದಲ್ಲಿ ಭೀಕರ ಅಪಘಾತ ನಡೆದಿದೆ. ಘಟನೆಯಲ್ಲಿ ಸ್ಕೂಟರ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ವೇಗವಾಗಿ ಬಂದ ಕಾರು ಸ್ಕೂಟರ್ ಮತ್ತು ಆಟೋಗೆ ಗುದ್ದಿದ್ದು, ಸ್ಕೂಟರ್ ಮತ್ತೊಂದು ಬೈಕ್ಗೆ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನಿಸುವಂತಿದೆ.
ಉಡುಪಿ, ಫೆಬ್ರವರಿ 03: ತಾಲೂಕಿನ ಹಿರಿಯಡ್ಕ ಪೇಟೆಯಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ವೇಗವಾಗಿ ಬಂದ ಇನ್ನೋವಾ ಕಾರೊಂದು ಎದುರಿಗೆ ತೆರಳುತ್ತಿದ್ದ ಸ್ಕೂಟರ್ಗೆ ಮೊದಲು ಡಿಕ್ಕಿಯಾಗಿ ಬಳಿಕ ಆಟೋಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಮತ್ತೊಂದು ಬೈಕ್ಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟರ್ ಸವಾರ ರಸ್ತೆಗೆ ಹಾರಿ ಬಿದ್ದಿದ್ದು, ಪವಾಡ ಸದೃಶರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us