ತುಮಕೂರು: ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇರಬಾರದು. ಮುಸುರೆ ಎಂಜಲು ತಿನ್ನುವುದಕ್ಕಾಗಿ ಇಲ್ಲಿ ಬರಬಾರದು, ಬಾಕ್ಸ್ ಕೊಂಡೊಯ್ಯುವುದು ಸದುದ್ದೇಶದ, ಉತ್ತಮ ವ್ಯವಸ್ಥೆಗೆ ಮಾರಕ ಎಂದು ತುಮಕೂರು ವಿಶ್ವವಿದ್ಯಾಲಯದ ಪಿಜಿ ಹಾಸ್ಟೆಲ್ ವಾರ್ಡನ್ ಜಯಶಂಕರ್ ಅವರು ನೋಟಿಸ್ ಅಂಟಿಸಿದ್ದಾರೆ. ಕಾಲೇಜಿನಲ್ಲಿ ಕೋರ್ಸ್ ಮುಗಿದಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದನ್ನು ತಡೆಯುವುದಕ್ಕೆ ವಾರ್ಡನ್ ಈ ರೀತಿಯಾಗಿ ಅನಿವಾರ್ಯವಾಗಿ, ನೋಟಿಸ್ ಅಂಟಿಸಿದ್ದಾರೆ!
ಸೀನಿಯರ್ ವಿದ್ಯಾರ್ಥಿಗಳ ಹಾಸ್ಟೆಲ್ ಅವಧಿ ಹಾಗೂ ಕೋರ್ಸ್ ಮುಗಿದಿದ್ದರೂ, ಪ್ರತಿದಿನ ಹಾಸ್ಟೆಲ್ಗೆ ಬಂದು ಊಟ ತಿನ್ನುವುದು ಹಾಗೂ ಬಾಕ್ಸ್ಗಳಿಗೆ ಹಾಕಿಕೊಂಡು ಹೋಗುತ್ತಿದ್ದರು. ಈ ಕುರಿತಾಗಿ, ಮುಸುರೆ ಮತ್ತು ಎಂಜಲು ತಿನ್ನಲು ಬರಬೇಡಿ. ಈ ಮೂಲಕ ಎಲ್ಲಾ ಸೀನಿಯರ್ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ, ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ ಇರಬಾರದು. ಮುಸುರೆ ಮತ್ತು ಎಂಜಲು ತಿನ್ನಲು ಬರಬಾರದು. ಅನವಶ್ಯಕವಾಗಿ ಬಾಕ್ಸ್ ತೆಗೆದುಕೊಂಡೊಯ್ಯುವುದು ಉತ್ತಮ ವ್ಯವಸ್ಥೆಗೆ ಮಾರಕವಾಗಿದೆ. ವಿದ್ಯಾರ್ಥಿಗಳು ಇದನ್ನ ನಿಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ಜಯಶಂಕರ್ ಸೂಚನಾ ಫಲಕ ಅಂಟಿಸಿದ್ದಾರೆ.
ವಿವಿ ಉಪಕುಲಪತಿ ಪ್ರೊ.ಸಿದ್ದೇಗೌಡ ಈ ಕುರಿತು ಸ್ಪಷ್ಟನೆ ನೀಡಿದ್ದು, ವಾರ್ಡನ್, ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲು ನೋಟಿಸ್ ಹಾಕಿದ್ದಾರೆ. ಆದ್ರೆ ನೋಟಿಸ್ ಬೋರ್ಡ್‌ನಲ್ಲಿ ಹಾಕುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಇದನ್ನ ಹೇಳಬಹುದಿತ್ತು. ಈ ಬಗ್ಗೆ ವಾರ್ಡನ್ ಜತೆ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ಹಾಸ್ಟೆಲ್ನ ನೀರಿನ ಟ್ಯಾಂಕ್ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ
ಇದನ್ನೂ ಓದಿ: ಬೆಂಗಳೂರು ವಿವಿ ಹಾಸ್ಟೆಲ್ ಅವ್ಯವಸ್ಥೆಯ ಆಗರ: ವಿದ್ಯಾರ್ಥಿನಿಯರ ಗೋಳು ಕೇಳೋರು ಯಾರು?
Published On - 11:02 am, Thu, 4 March 21