ರೇಷ್ಮೆ ಸೀರೆ ತಯಾರಿಸುವುದು ಹೇಗೆ? ಒಂದು ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳ ಪರಿಶ್ರಮ ಬೇಕಾಗುತ್ತೆ ಗೊತ್ತಾ?

|

Updated on: May 15, 2024 | 2:42 PM

ರೇಷ್ಮೆ ಸೀರೆ ಎಂದರೆ ಹೆಣ್ಮಕ್ಕಳ ಮುಖ ಅರಳುತ್ತೆ. ರೇಷ್ಮೆ ಸೀರೆ ಇಲ್ಲದೆ ಯಾವುದೇ ಶುಭ ಕಾರ್ಯಕ್ರಮಗಳು ಸಂಪನ್ನ ಎನಿಸುವುದಿಲ್ಲ. ಆದರೆ ನಿಮಗೆ ಗೊತ್ತಾ ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಸಾಯಬೇಕೆಂದು. ಅರ್ಧ ಕಿಲೋ ರೇಷ್ಮೆ ಮಾಡಲು ಎಷ್ಟು ಹುಳುಗಳು ತಮ್ಮ ಪರಿಶ್ರಮ ಹಾಕಬೇಕೆಂದು? ಜೊತೆಗೆ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದೇಕೆ ಎಂಬ ವಿಚಾರದ ಬಗ್ಗೆ ಈ ಆರ್ಟಿಕಲ್​ನಲ್ಲಿದೆ ಮಾಹಿತಿ.

ರೇಷ್ಮೆ ಸೀರೆ ತಯಾರಿಸುವುದು ಹೇಗೆ? ಒಂದು ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳ ಪರಿಶ್ರಮ ಬೇಕಾಗುತ್ತೆ ಗೊತ್ತಾ?
ರೇಷ್ಮೆ ಸೀರೆ
Follow us on

ರೇಷ್ಮೆ ಸೀರೆ ಅಂದ್ರೆ ಸಾಕು ಹೆಣ್ಮಕ್ಕಳಿಗೆ ಅದೇನೋ ಒಂದು ರೀತಿಯ ಸೆಂಟಿಮೆಂಟ್. ಹಳೆಯ ಅಮ್ಮನ ರೇಷ್ಮೆ ಸೀರೆಗಳನ್ನು ಕಂಡರಂತೋ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಗಳು ಬಹಳ ಕಾಸ್ಟಲಿ ಆದರೂ ಕೂಡ ಅಲ್ಪ ಸ್ವಲ್ಪ ಹಣ ಹೊಂದಿಸಿ ಅದನ್ನು ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ, ಮುಂಜಿ ಹೀಗೆ ಯಾವುದೇ ಸಮಾರಂಭಕ್ಕಾದರೂ ರೇಷ್ಮೆ ಸೀರೆ ಇರಲೇ ಬೇಕು. ಅದರಲ್ಲೂ ರೇಷ್ಮೆ ಸೀರೆಗಳಲ್ಲಿ ಸಿಂಪಲ್, ಗ್ರ್ಯಾಂಡ್ ಅಂತ ವಿಭಿನ್ನವಾದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸೂಕ್ತ ಎನಿಸುವ ರೀತಿಯಲ್ಲಿ ಲಭ್ಯವಿರುವುದರಿಂದ ಎಲ್ಲ ಕಾಲಕ್ಕೂ ಈ ಸೀರೆ ಸರಿ ಹೊಂದುತ್ತೆ. ಇನ್ನು ಮಹಿಳೆಯರ ಅಚ್ಚುಮೆಚ್ಚಿನ ರೇಷ್ಮೆ ಸೀರೆಗಳು ಸಾಮಾನ್ಯವಾಗಿ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಪರಿಶ್ರಮಬೇಕಾಗುತ್ತೆ. ಬನ್ನಿ ನಾವು ಈ ಆರ್ಟಿಕಲ್​ನಲ್ಲಿ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸಲಾಗುತ್ತೆ ಎಂಬ ಬಗ್ಗೆ ತಿಳಿದುಕೊಳ್ಳೋಣ. ಭಾರತೀಯ ನಾರಿ ಅಂದಾಕ್ಷಣ ನಮ್ಮ ಕಣ್ಮುಂದೆ ಬರೋದೆ ಸೀರೆಯುಟ್ಟ ಸ್ತ್ರೀಯ ಚಿತ್ರ. ಜೊತೆಗೆ ನಮ್ಮ ದೇವತೆಗಳ ಉಡುಪು ಕೂಡ ಸೀರೆಯೇ. ಭಾವನಾತ್ಮಕ ಸಂಬಂಧಗಳ ಬೆಸುಗೆಗೂ ಸೀರೆ ಬೇಕು. ಅಷ್ಟರಮಟ್ಟಿಗೆ ಈ ರೇಷ್ಮೆ ಸೀರೆಗಳು ನಮ್ಮ ಬದುಕಿನಲ್ಲಿ ಉಳಿದುಕೊಂಡಿವೆ. ಮೈಸೂರು ರೇಷ್ಮೆ, ಬನಾರಸ್, ಕಾಂಜೀವರಂ, ಇಳಕಲ್ ಹೀಗೆ ಸಾಕಷ್ಟು ಜನಪ್ರಿಯ ಸೀರೆಗಳು ಭಾರತದಲ್ಲಿ ಸಿಗುತ್ತವೆ. ಅದರಲ್ಲೂ ಸಾಧಾರಣ ರೇಷ್ಮೆ ಸೀರೆಗಳು, ಪ್ಯೂರ್ ರೇಷ್ಮೆ ಸೀರೆ, ಆರ್ಟ್ಸೆಂಟ್ ಸ್ಯಾರೀಸ್, ತ್ರಿಡಿ ಸ್ಯಾರೀಸ್ ಹೀಗೆ ಎಲ್ಲ ಕಾಲಕ್ಕೂ ತನ್ನದೇ ಆದ ವಿಶಿಷ್ಟ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ