ಪ್ರಜ್ವಲ್ ಡಿಕೆ ಶಿವಕುಮಾರ ಕೇಳಿ ವಿಡಿಯೋ ರೆಕಾರ್ಡ್​​ ಮಾಡಿಕೊಂಡ್ರಾ: ಸಚಿವ ದರ್ಶನಾಪುರ ಪ್ರಶ್ನೆ

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಇದ್ದ ಪೆನ್​ಡ್ರೈವ್​ ಬಿಡುಗಡೆಯಾಗುವದರ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಅಂತ ವಿಪಕ್ಷ ನಾಯಕರು ಆರೋಪಕ್ಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಟಾಂಗ್​ ಕೊಡುವ ಬರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ಡಿಕೆ ಶಿವಕುಮಾರ ಕೇಳಿ ವಿಡಿಯೋ ರೆಕಾರ್ಡ್​​ ಮಾಡಿಕೊಂಡ್ರಾ: ಸಚಿವ ದರ್ಶನಾಪುರ ಪ್ರಶ್ನೆ
ಸಚಿವ ಶರಣಬಸಪ್ಪ ದರ್ಶನಾಪುರ
Follow us
| Updated By: ವಿವೇಕ ಬಿರಾದಾರ

Updated on: May 15, 2024 | 2:16 PM

ಯಾದಗಿರಿ, ಮೇ 15: ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಇದ್ದ ಪೆನ್​ಡ್ರೈವ್​ ಬಿಡುಗಡೆಯಾಗುವದರ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಅಂತ ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ “ಪ್ರಜ್ವಲ್ ರೇವಣ್ಣ ಅವರು ಡಿಕೆ ಶಿವಕುಮಾರ್ (DK Shivakumar) ಅವರ ಮಾತು ಕೇಳಿ ಸೆಕ್ಸ್​​ ವಿಡಿಯೋ ಮಾಡಿಕೊಂಡ್ರಾ? ಅಥವಾ ಡಿಕೆ ಶಿವಕುಮಾರ್ ಏನು ಎಲ್ಲ ಹೆಣ್ಣು ಮಕ್ಕಳ ಸೆಕ್ಸ್ ವಿಡಿಯೋ ಮಾಡಿಕೊ ಅಂತ ಹೇಳಿದ್ರಾ? ಅಥವಾ ಡಿಕೆ ಶಿವಕುಮಾರ್ ವಿಡಿಯೋ ಮಾಡಿದ್ರಾ?” ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆಸುವ ಭರದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ (Minister Sharanbasappa Darshanapura) ಹೆಣ್ಣಮಕ್ಕಳ ಬಗ್ಗೆ ಕೀಳು ಭಾಷೆ ಪ್ರಯೋಗಿಸಿ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಡಿಯೋ ರೆಕಾರ್ಡ್​​ ಮಾಡಿಕೊಂಡು ಈಗ ಬೇರೆಯವರ ಮೇಲೆ ಹಾಕುತ್ತಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿದವರು ಯಾರು? ಎಷ್ಟು ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ದಾರೆ? ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿ ಮತ್ತು ಜೆಡಿಎಸ್​ನವರು ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಅಂದರು. ಈಗ ಬಿಜೆಪಿ, ಜೆಡಿಎಸ್​ನವರು ಎಲ್ಲಿದ್ದಾರೆ? ಪ್ರಜ್ವಲ್​ನನ್ನು ಎನ್ಕೌಂಟರ್ ಮಾಡಿ ಅಂತ ಯಾಕೆ ಹೇಳುತ್ತಿಲ್ಲ? ಸಾಮಾನ್ಯ ಜನರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಆಫರೇಷನ್​ ನಾಥ್​ ನಡೆಯಲಿದೆ, ಸರ್ಕಾರ ಪಥನವಾಗಲಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆಗೆ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ “ಆತ ಗಂಡಸು ಇದ್ದರೇ ರಾಜ್ಯದಲ್ಲಿ ಸರಕಾರ ರಚಿಸಲಿ. ಅವನು ಏನಾದರೂ ಗಂಡಸು ಇದ್ದರೆ ರಾಜ್ಯಕ್ಕೆ ಬಂದು, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಲಿ. ಮಹಾರಾಷ್ಟ್ರದಲ್ಲಿ ಅಲ್ಲಿ ಏನು ಕಡಿಯಲು ಆಗುತ್ತಿಲ್ಲ. ಆತ ನಮ್ಮ ರಾಜ್ಯದಲ್ಲಿ ಏನು ಕಡಿತಾನ. ಮಹಾರಾಷ್ಟ್ರದಲ್ಲಿ ಮೊದಲು ತಮ್ಮ ಸರಕಾರ ಉಳಿಸಿಕೊಳ್ಳಲಿ. ಅವರ ಸರಕಾರ ಅಲಗಾಡುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸಂತ್ರಸ್ತೆ ವಿಡಿಯೋ ಬಿಡುಗಡೆ ವಿಚಾರ: ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ, ಜಸ್ಟ್ ಎಕ್ಸಿಬಿಟರ್​​; ಡಿಕೆ ಶಿವಕುಮಾರ್​

ಶಾಸಕರ ಹತ್ತಿರ ಹೋಗಿ ಕುರ್ಚಿ ಉಳಿಸಿಕೊಳ್ಳಲು ಕೈ ಕಾಲು ಹಿಡಿಯುತ್ತಿದ್ದಾರೆ. ಶಿಂಧೆ ಪರಿಸ್ಥಿತಿ ನಾಯಿಪಾಡು ಆಗಿದೆ. ಒಂದು ಕಡೆ ಬಿಜೆಪಿ, ಮತ್ತೊಂದು ಕಡೆ ಶಾಸಕರು ಗುಮ್ಮುತ್ತಿದ್ದಾರೆ. ಮೊದಲು ತಮ್ಮ ಸೀಟು ಉಳಿಸಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ನಾಚಿಕೆ ಮಾರಿಕೊಂಡು ಕುಂತಿದ್ದಾರೆ. ಜನರು ಯಾರಿಗೆ ಮತ ಹಾಕುತ್ತಾರೆ, ಅವರು ಅಧಿಕಾರ ಹಿಡಿಯುತ್ತಾರೆ. ಜನ ಅವರನ್ನು ಮೂಲೆಗೆ ತಳ್ಳಿದ್ದಾರೆ, ನಾಲ್ಕು ವರ್ಷ ಸುಮ್ಮನೆ ಕೂಡಲು ಹೇಳಿ. ಈಗಾಗಲೇ ವಿಧಾನಸಭೆಯಲ್ಲಿ 130 ಇದ್ದ ಶಾಸಕರ ಬಲ 66ಕ್ಕೆ ಇಳಿದಿದೆ. ಈಗ ಲೋಕಸಭೆಯಲ್ಲಿ 28 ಇದ್ದದ್ದು, ಜನ ಎಷ್ಟಕ್ಕೆ ಇಳಿಸುತ್ತಾರೆ ಗೊತ್ತಿಲ್ಲ. ಸ್ವಲ್ಪ ಬಾಯಿ ಮುಚ್ಚಿಕೊಂಡು ಸುಮ್ನೆ ಕೂಡಲು ಹೇಳಿ ಎಂದರು.

ಬಿಜೆಪಿಯವರಿಗೆ ಗೊತ್ತಿದೆ ಯಾವ ರಾಜ್ಯದಲ್ಲೂ ನಮಗೆ ಸಂಪೂರ್ಣ ಬಹುಮತ ಕೊಡಲ್ಲ ಅಂತ. ಅದಕ್ಕೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಬೇಕು ಅಂದುಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಮ್ಮತನಾ? ಮೋದಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ, ಭ್ರಷ್ಟಾಚಾರ ರಹಿತ ಅಂತ ಹೇಳುತ್ತಾರೆ, ಮತ್ತೆ ರಾಜ್ಯದಲ್ಲಿ ಇವರ ನಾಯಕರು ಏನು ಮಾಡುತ್ತಿದ್ದಾರೆ. ಇವರು ಮಾಡುತ್ತಿರುವುದು ಸರಿನಾ ಎಂದು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್