ಪ್ರಜ್ವಲ್​ ರೇವಣ್ಣ ಬಗ್ಗೆ ಮಾತನಾಡುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ

ನಯನಾ ರಾಜೀವ್
|

Updated on: May 05, 2024 | 9:25 AM

ಪ್ರಜ್ವಲ್ ರೇವಣ್ಣ ಕುರಿತು ಮಾತನಾಡಲು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹಿಂದೇಟು ಹಾಕಿದ್ದಾರೆ. ಇನ್ನು ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಎಚ್​ಡಿ ರೇವಣ್ಣ ಬಂಧನ ಕುರಿತು ಮಾತನಾಡಿದ ಖರ್ಗೆ, ಎಸ್​ಐಟಿ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಯಾರು ಇಂತಹ ಕೆಲಸ ಮಾಡುತ್ತಾರೆ ಅವರಿಗೆ ಬುದ್ಧಿ ಬರಬೇಕು. ಆ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದರು.

ಕಾನೂನಿನಿಂದ ಯಾರಿಗೂ ಬಿಡುಗಡೆ ಇಲ್ಲ, ಕಾನೂನು ಕಠಿಣ ಇದೆ, ಇದು ಹತ್ತಾರು ವರ್ಷಗಳಿಂದ ನಡೆಯತ್ತಿದೆ ಎಂದು ಹೇಳುತ್ತಿದ್ದಾರೆ. ಈ ಪ್ರಕರಣವನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಪ್ರಜ್ವಲ್ ಬಗ್ಗೆ ನಾನು ಮಾತನಾಡಲಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ