ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ 371 ಜೆ ವಿಧಿ ಜಾರಿಗೊಳ್ಳಲು ಮಲ್ಲಿಕಾರ್ಜುನ ಖರ್ಗೆ ಕಾರಣ: ಸಿದ್ದರಾಮಯ್ಯ

ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ 371 ಜೆ ವಿಧಿ ಜಾರಿಗೊಳ್ಳಲು ಮಲ್ಲಿಕಾರ್ಜುನ ಖರ್ಗೆ ಕಾರಣ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2024 | 6:01 PM

ಕಳೆದ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖರ್ಗೆ ಅವರನ್ನು ಜನ ಸೋಲಿಸಿದರು, ಅದರೆ ಅದರಿಂದ ನಷ್ಟವಾಗಿದ್ದು ಜನತೆ ಮತ್ತು ಕರ್ನಾಟಕಕ್ಕೆ ಹೊರತು ಅವರಿಗಲ್ಲ. ತಮ್ಮ ಸುದೀರ್ಘ ರಾಜಕಕೀಯ ಬದುಕಿನಲ್ಲಿ ಅವರು ಎಡೆಬಿಡದೆ ಬಡವರು. ದಲಿತರು, ಹಿಂದುಳಿದ ವರ್ಗಗಗಳ ಜನ, ರೈತರು, ಅಲ್ಪಸಂಖ್ಯಾತರು ಮೊದಲಾದವರಿಗೆ ನ್ಯಾಯ ಕೊಡಿಸಲು ಅವರು ಅಪಾರವಾದ ಹೋರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕಲಬುರಗಿ: ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ (Radhakrishna Doddamani) ಪರ ಮತಯಾಚಿಸುವುದರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಮನಸಾರೆ ಹೊಗಳಿದರು. ಕಳೆದ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖರ್ಗೆ ಅವರನ್ನು ಜನ ಸೋಲಿಸಿದರು, ಅದರೆ ಅದರಿಂದ ನಷ್ಟವಾಗಿದ್ದು ಜನತೆ ಮತ್ತು ಕರ್ನಾಟಕಕ್ಕೆ ಹೊರತು ಅವರಿಗಲ್ಲ. ತಮ್ಮ ಸುದೀರ್ಘ ರಾಜಕಕೀಯ ಬದುಕಿನಲ್ಲಿ ಅವರು ಎಡೆಬಿಡದೆ ಬಡವರು. ದಲಿತರು, ಹಿಂದುಳಿದ ವರ್ಗಗಗಳ ಜನ, ರೈತರು, ಅಲ್ಪಸಂಖ್ಯಾತರು ಮೊದಲಾದವರಿಗೆ ನ್ಯಾಯ ಕೊಡಿಸಲು ಅವರು ಅಪಾರವಾದ ಹೋರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಭಾಗದ ಜನರ ಕಲ್ಯಾಣಕ್ಕಾಗಿ ಅನುಚ್ಚೇದ 371 ಜೆ ಜಾರಿಗೊಳಿಸುವಂತೆ ಎಸ್ ಎಂ ಕೃಷ್ಣ ಅಗ ಪ್ರಧಾನಿಯಾಗಿದ್ದ ಅಟಲ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಾಗ ಉಪ ಪ್ರಧಾನಿಯಾಗಿದ್ದ ಎಲ್ ಕೆ ಅಡ್ವಾಣಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ನಂತರ ಮನಮೋಹನ ಸಿಂಗ್ ಪ್ರಧಾನ ಮಂತ್ರಿಯಾದಾಗ ಖರ್ಗೆ ಅವರು 371 ಜೆ ವಿಧಿ ಜಾರಿಗೊಳ್ಳುವಂತೆ ಮಾಡದದ್ದರು, ಅವರ ಪ್ರಯತ್ನದಿಂದ ಈ ಭಾಗದ ಜನ ಇವತ್ತು ಉನ್ನತ ಹುದ್ದೆಗಳಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಅವರು ಮಾಡಿರುವ ಕೆಲಸಗಳಿಗೆ ಕೃತಜ್ಞತೆ ಸಲ್ಲಿಸುವ ಹಾಗೆ ಅವರ ಅಳಿಯನಾಗಿರುವ ರಾಧಾಕೃಷ್ಣ ಅವರನ್ನು ಜನ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬಿಜೆಪಿ ನಾಯಕರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ