ನೇಹಾ ಕೊಲೆ ಪ್ರಕರಣ: ಫಯಾಜ್ ನನ್ನು ವಶಕ್ಕೆ ಪಡೆದು ಅರೋಗ್ಯ ತಪಾಸಣೆಗೆ ಕರೆದೊಯ್ದ ಸಿಐಡಿ ಅಧಿಕಾರಿಗಳು

ನೇಹಾ ಕೊಲೆ ಪ್ರಕರಣ: ಫಯಾಜ್ ನನ್ನು ವಶಕ್ಕೆ ಪಡೆದು ಅರೋಗ್ಯ ತಪಾಸಣೆಗೆ ಕರೆದೊಯ್ದ ಸಿಐಡಿ ಅಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2024 | 4:31 PM

ಟೀ ಶರ್ಟ್ ಧರಿಸಿರುವ ಫಯಾಜ್ ಮುಖಕ್ಕೆ ಮುಖವಾಡ ಹಾಕಿ ಆಸ್ಪತ್ರೆಗೆ ತರಲಾಯಿತು. ಫಯಾಜ್ ನ ಹೇಳಿಕೆಗಳು ಇದುವರೆಗೆ ಎಲ್ಲೂ ದಾಖಲಾಗಿಲ್ಲ. ನೇಹಾಳನ್ನು ಕೊಲ್ಲುವ ಉದ್ದೇಶ ಏನಾಗಿತ್ತು ಅನ್ನೋದನ್ನು ಅವನು ಇನ್ನೂ ಬಾಯಿ ಬಿಟ್ಟಿಲ್ಲ. ಚುನಾವಣಾ ಸಮಯದಲ್ಲಿ ನೇಹಾ ಹತ್ಯೆ ನಡೆದಿರುವುದರಿಂದ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ.

ಧಾರವಾಡ: ನೇಹಾ ಹಿರೇಮಠ (Neha Hiremath) ಕೊಲೆ ನಡೆದು ಒಂದು ವಾರ ಗತಿಸಿದೆ. ಪ್ರಕರಣವನ್ನು ಸಿಐಡಿ ತನಿಖೆ ರಾಜ್ಯ ಸರ್ಕಾರ ಒಪ್ಪಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ತನಿಖೆಯನ್ನು ಅರಂಭಿಸಿರುವ ಸಿಐಡಿ ಅಧಿಕಾರಿಗಳು ಇಂದು ಹುಬ್ಬಳ್ಳಿಯ ಜೈಲಿನಲ್ಲಿದ್ದ ಹತ್ಯೆ ಆರೋಪಿ ಫಯಾಜ್ ನನ್ನು (accused Fayaz) ತಮ್ಮ ವಶಕ್ಕ ಪಡೆದು ವೈದ್ಯಕೀಯ ಪರೀಕ್ಷೆಗೆ (medical test) ಕರೆದೊಯ್ದರು. ಫಯಾಜ್ ನನ್ನು ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಧಿಕಾರಿಗಳು ಕರೆತರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಟೀ ಶರ್ಟ್ ಧರಿಸಿರುವ ಫಯಾಜ್ ಮುಖಕ್ಕೆ ಮುಖವಾಡ ಹಾಕಿ ಆಸ್ಪತ್ರೆಗೆ ತರಲಾಯಿತು. ಫಯಾಜ್ ನ ಹೇಳಿಕೆಗಳು ಇದುವರೆಗೆ ಎಲ್ಲೂ ದಾಖಲಾಗಿಲ್ಲ. ನೇಹಾಳನ್ನು ಕೊಲ್ಲುವ ಉದ್ದೇಶ ಏನಾಗಿತ್ತು ಅನ್ನೋದನ್ನು ಅವನು ಇನ್ನೂ ಬಾಯಿ ಬಿಟ್ಟಿಲ್ಲ. ಚುನಾವಣಾ ಸಮಯದಲ್ಲಿ ನೇಹಾ ಹತ್ಯೆ ನಡೆದಿರುವುದರಿಂದ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಒಬ್ಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಕೊಂದಿರುವ ಹಿನ್ನೆಲೆಯಲ್ಲಿ ಇದು ಬಹಳ ಸೂಕ್ಷ್ಮ ಪ್ರಕರಣವಾಗಿದೆ. ಏತನ್ಮಧ್ಯೆ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರು ನೇಹಾ ಹಿರೇಮಠ ಮನೆಗೆ ಹೋಗಿ ಕುಟುಂಬದ ಸದಸ್ಯರನ್ನು ಮಾತಾಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹುಬ್ಬಳ್ಳಿ: ನೇಹಾ ಹಿರೇಮಠ ಸಾವಿಗೆ ನ್ಯಾಯ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಸಮುದಾಯದವರಿಂದ ಪ್ರತಿಭಟನಾ ರ‍್ಯಾಲಿ