ನೇಹಾ ಹಿರೇಮಠ ಹತ್ಯೆ ಪ್ರಕರಣ: ಮಹಜರ್​ಗಾಗಿ ಫಯಾಜ್​ನನ್ನು ಬಿವಿಬಿ ಕಾಲೇಜು ಆವರಣಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು

ನೇಹಾ ಹಿರೇಮಠ ಹತ್ಯೆ ಪ್ರಕರಣ: ಮಹಜರ್​ಗಾಗಿ ಫಯಾಜ್​ನನ್ನು ಬಿವಿಬಿ ಕಾಲೇಜು ಆವರಣಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 24, 2024 | 6:49 PM

ಆವರಣದ ಒಳಗೆ ಮಹಜರ್ ನಡೆಯುತ್ತಿದ್ದರೆ ಹೊರಗಡೆ ಎಬಿವಿಪಿ ಸದಸ್ಯರು ಗುಂಪುಗೂಡಿ ಗಲ್ಲಿಗೇರಿಸಿ ಗಲ್ಲಿಗೇರಿಸಿ ಫಯಾಜ್ ನ್ನು ಗಲ್ಲಿಗೇರಿಸಿ, ನೇಹಾ ಹಿರೇಮಠಗೆ ನ್ಯಾಯ ದೊರಕಿಸಿ ಅಂತ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರಕರಣವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸುವ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ನೀಡಿದೆ.

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ನನ್ನು (Fayaz) ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು (CID sleuths) ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ (inquest) ಕರೆತಂದರು. ಜೈಲಿಂದ ಹೊರತಂದಾಗ ಅವನ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಆದರೆ, ಕಾಲೇಜು ಆವರಣಕ್ಕೆ ತಂದಾಗ ಮಾಸ್ಕ್ ಇರಲಿಲ್ಲ. ಅವನ ಮುಖವನ್ನು ಇಲ್ಲಿ ನೋಡಬಹುದು. ನೇಹಾ ಮೇಲೆ ಆಕ್ರಮಣ ಸ್ಥಳದಲ್ಲಿ ಫಯಾಜ್ ನ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡರು. ನಂತರ ಆವರಣದ ಮತ್ತೊಂದು ಭಾಗದಲ್ಲೂ ಅಧಿಕಾರಿಗಳು ಅವನ ವಿಚಾರಣೆ ನಡೆಸಿದರು. ಆವರಣದ ಒಳಗೆ ಮಹಜರ್ ನಡೆಯುತ್ತಿದ್ದರೆ ಹೊರಗಡೆ ಎಬಿವಿಪಿ ಸದಸ್ಯರು ಗುಂಪುಗೂಡಿ ಗಲ್ಲಿಗೇರಿಸಿ ಗಲ್ಲಿಗೇರಿಸಿ ಫಯಾಜ್ ನ್ನು ಗಲ್ಲಿಗೇರಿಸಿ, ನೇಹಾ ಹಿರೇಮಠಗೆ ನ್ಯಾಯ ದೊರಕಿಸಿ ಅಂತ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರಕರಣವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸುವ ಭರವಸೆಯನ್ನು ಸಿದ್ದರಾಮಯ್ಯ ಸರ್ಕಾರ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ನೀಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಅಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನೇಹಾ ಕೊಲೆ ಪ್ರಕರಣ: ಫಯಾಜ್​ನೇಹಾ ಹೆಸರಿನಲ್ಲಿ ಇನ್​ಸ್ಟಾಗ್ರಾಮ್​ ಅಕೌಂಟ್​​ ತೆರೆದು ಫೋಟೋ ಹರಿಬಿಟ್ಟ ಕಿಡಿಗೇಡಿಗಳು