AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತ್ರಸ್ತೆ ವಿಡಿಯೋ ಬಿಡುಗಡೆ ವಿಚಾರ: ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ, ಜಸ್ಟ್ ಎಕ್ಸಿಬಿಟರ್​​; ಡಿಕೆ ಶಿವಕುಮಾರ್​

ಸದ್ಯ ರಾಜ್ಯದಲ್ಲಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಪರೋಕ್ಷವಾಗಿ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸಂತ್ರಸ್ತೆ ವಿಡಿಯೋ ಬಿಡುಗಡೆ ವಿಚಾರ: ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ, ಜಸ್ಟ್ ಎಕ್ಸಿಬಿಟರ್​​; ಡಿಕೆ ಶಿವಕುಮಾರ್​
ಡಿಸಿಎಂ ಡಿಕೆ ಶಿವಕುಮಾರ್​
Follow us
TV9 Web
| Updated By: ವಿವೇಕ ಬಿರಾದಾರ

Updated on:May 14, 2024 | 1:31 PM

ಬೆಂಗಳೂರು, ಮೇ 14: ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ಯದ ಮಹಾನಾಯಕ, ತಿಮಿಂಗಿಲಿನ ಕೈವಾಡವಿದೆ ಅಂತ ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumarswamy) ಆದಿಯಾಗಿ ವಿಪಕ್ಷದ ಹಲವು ನಾಯಕರು ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಡಿಕೆ ಶಿವಕುಮಾರ್, ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಹೆಸರು ಹೇಳಿದರೆ ಮೀಡಿಯಾದಲ್ಲಿ ಹಾಕುತ್ತಾರೆ ಅಂತ ಮಾತನಾಡುತ್ತಾರೆ. ಎಲ್ಲದಕ್ಕೂ ಕಾಲ ಉತ್ತರ ನೀಡುತ್ತದೆ. ನಾನು ಜಸ್ಟ್ ಎಕ್ಸಿಬಿಟರ್, ನಾನು ಪ್ರೊಡ್ಯುಸರೂ ಅಲ್ಲ, ಡೈರೆಕ್ಟರೂ ಅಲ್ಲ ಎಂದು ಹೇಳಿದರು.

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ನನಗೆ ನರೇಟಿವ್ ಬದಲಾಯಿಸುವ ಅವಶ್ಯಕತೆ ಕೂಡ ಇಲ್ಲ. ಅವರದ್ದು ದೊಡ್ಡ ಕುಟುಂಬ, ಹೀಗೆಲ್ಲ ಆಗಬಾರದಿತ್ತು ಅಂತ ನನಗೂ ಬೇಸರವಿದೆ, ನೋವಿದೆ. ಐ ಫೀಲ್ ಸಾರಿ ಫಾರ್ ಹಿಮ್ ಎಂದು ಹೆಚ್​ಡಿ ರೇವಣ್ಣ ಅವರ ಬಂಧನ ವಿಚಾರವಾಗಿ ಮಾತನಾಡಿದರು.

ಇದನ್ನೂ ಓದಿ: ರೇವಣ್ಣಗೆ ಜಾಮೀನು ಸಿಕ್ಕಿದ್ದಕ್ಕೆ ಸಂಭ್ರಮ ಬೇಡ, ನನಗೆ ಖುಷಿಯಾಗಿಲ್ಲ: ಹೆಚ್​ಡಿ ಕುಮಾಸ್ವಾಮಿ

ನಾನು ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ, ನನಗೆ ಸಂಬಂಧವೂ ಇಲ್ಲ. ನಾನೂ ಇದನ್ನೆಲ್ಲ ಅನುಭವಿಸಿಯೇ ಬಂದಿದ್ದೇನೆ. ನಾನು ಕಷ್ಟಪಟ್ಟರೂ, ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಅದಕ್ಕಾಗಿಯೇ ದೇವರು ನನ್ನ ರಕ್ಷಣೆಗೆ ಇದ್ದಾನೆ. ಇದೆಲ್ಲದಕ್ಕೂ ಸಮಯವೇ ಉತ್ತರ ಕೊಡುತ್ತದೆ. ಆದರೆ ನನ್ನ ಬ್ರದರ್ ಕುಮಾರಣ್ಣನಿಗೆ ಮಾತ್ರ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದರು.

ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಉತ್ತರ ಪ್ರದೇಶದ ರಾಯ್​ಬರೇಲಿಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ಇಂಡಿಯಾ ಮೈತ್ರಿಕೂಟ ಗೆದ್ದು ಸರ್ಕಾರ ರಚನೆ ಮಾಡುತ್ತದೆ. ಮಹಾರಾಷ್ಟ್ರದ ಸರ್ಕಾರವೇ ಬದಲಾವಣೆ ಆಗುತ್ತೆಂದು ಅನಿಸುತ್ತೆ ಎಂದು ಹೇಳಿದ್ದಾರೆ.

ಅಂಕಿತಾಗೆ ಸನ್ಮಾನ

ಸುದ್ದಿಗೋಷ್ಠಿಗೂ ಮುನ್ನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸರ್ಕಾರಿ ಶಾಲೆಯಲ್ಲಿ ಓದಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿ ಅಂಕಿತಾ ಅವರಿಗೆ ಸನ್ಮಾನಿಸಿದರು. ಅಲ್ಲದೆ ಐದು ಲಕ್ಷ ರೂ. ಬಹುಮಾನ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:31 pm, Tue, 14 May 24

ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು