ಹುಬ್ಬಳ್ಳಿ, ನ.30: ಎಸ್‌ಎಸ್‌ಎಸ್ ಹುಬ್ಬಳ್ಳಿ (SSS Hubli) ಮತ್ತು ಕೊಟ್ಟಾಯಂ ರೈಲು ನಿಲ್ದಾಣಗಳ ನಡುವೆ ಬೇಡಿಕೆಯ ಹೆಚ್ಚಳವನ್ನು ಪೂರೈಸಲು ನೈಋತ್ಯ ರೈಲ್ವೇ (SWR) ಡಿಸೆಂಬರ್ 2 ರಿಂದ ಜನವರಿ 20ರ ವರೆಗೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಅದಾಗ್ಯೂ, ಕಾರ್ಯಾಚರಣೆ ನಿರ್ಬಂಧಗಳಿಂದಾಗಿ ಈ ವಿಶೇಷ ರೈಲುಗಳ ಟ್ರಿಪ್ಗಳಲ್ಲಿ ಒಂದು ಟ್ರಿಪ್ ಅನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ ನೈಋತ್ಯ ರೈಲ್ವೆ, ರೈಲು ಸಂಖ್ಯೆ 07305/07306 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಟ್ಟಾಯಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ನ ಒಂದು ಟ್ರಿಪ್ ಅನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಹಿಂದಿನ ವೇಳಾಪಟ್ಟಿಯಂತೆ, ರೈಲು ಸಂಖ್ಯೆ 07305/07306 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಟ್ಟಾಯಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಎಂಟು ಟ್ರಿಪ್‌ಗಳನ್ನು ಓಡಿಸಬೇಕಿತ್ತು. ಆದರೆ, ಈಗ ಅದನ್ನು ಏಳು ಟ್ರಿಪ್‌ಗಳಿಗೆ ಇಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿವರೆಗೂ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಹಿಂದಿನ ಅಧಿಸೂಚನೆಯ ಪ್ರಕಾರ, ವಿಶೇಷ ರೈಲು ಹುಬ್ಬಳ್ಳಿಯಿಂದ ಡಿಸೆಂಬರ್ 2 ರಿಂದ ಜನವರಿ 20, 2024 ರವರೆಗೆ ಮತ್ತು ಕೊಟ್ಟಾಯಂನಿಂದ ಡಿಸೆಂಬರ್ 3 ರಿಂದ ಜನವರಿ 20, 2024 ರವರೆಗೆ ಚಲಿಸಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ, ರೈಲು ಸಂಖ್ಯೆ 07305 SSS ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಇರುತ್ತದೆ. ಡಿಸೆಂಬರ್ 2 ರಿಂದ ಜನವರಿ 13, 2024 ರವರೆಗೆ ಶನಿವಾರದಂದು ಬೆಳಿಗ್ಗೆ 10.30 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 8.15 ಕ್ಕೆ ಕೊಟ್ಟಾಯಂಗೆ ತಲುಪಲಿದೆ.
ರೈಲು ಸಂಖ್ಯೆ 07306 ಕೊಟ್ಟಾಯಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಡಿಸೆಂಬರ್ 3 ರಿಂದ ಜನವರಿ 14, 2024 ರವರೆಗೆ ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಕೊಟ್ಟಾಯಂನಿಂದ ಹೊರಟು ಮರುದಿನ ಬೆಳಿಗ್ಗೆ 9.50 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:25 am, Thu, 30 November 23