ಬೆಂಗಳೂರು: ಕಾಮಗಾರಿ ವೇಳೆ ಅಚಾತುರ್ಯದಿಂದ ಹುಳಿಮಾವು ಕೆರೆಯ ಏರಿ ಒಡೆದು 500ಕ್ಕೂ ಮನೆಗಳಿಗೆ ನೀರು ನುಗ್ಗಿ, ಅಪಾರ ಪ್ರಮಾಣದ ಹಾನಿಯಾಗಿದೆ. ಕೆರೆ ಬಳಿ ಲೇಔಟ್ಗಳ ಜನರನ್ನು ಬಿಬಿಎಂಪಿ ಸಿಬ್ಬಂದಿ ಖಾಲಿ ಮಾಡಿಸಿದ್ದಾರೆ. ನಿರಾಶ್ರಿತರಿಗೆ ರಾತ್ರಿ ಉಳಿಯಲು ಬಿಬಿಎಂಪಿಯಿಂದಲೇ ವ್ಯವಸ್ಥೆ ಮಾಡಲಾಗಿದೆ.
ಹುಳಿಮಾವು ಸಂಪರ್ಕ ಕಲ್ಪಿಸುವ ರಸ್ತೆ ಬಂದ್:
ಹುಳಿಮಾವು ಕೆರೆ ಸುಮಾರು 140 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯ ನೀರನ್ನು ಬೇರೆಡೆಗೆ ಹರಿಸಲು ಕಾಮಗಾರಿ ನಡೆಯುತ್ತಿತ್ತು. ಪೈಪ್ಲೈನ್ ಅಳವಡಿಸಲು ಜೆಸಿಬಿ ಬಳಸಿ ಕಾಮಗಾರಿ ಕೆಲಸ ನಡೆಸುತ್ತಿದ್ದರು. ಈ ವೇಳೆ ಅಚಾತುರ್ಯದಿಂದ ಕೆರೆ ಏರಿಗೆ ಡ್ಯಾಮೇಜ್ ಆಗಿದೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಭೇಟಿ ನೀಡಿದ್ದು, ಹುಳಿಮಾವು ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ನ್ಯಾನೋ ಆಸ್ಪತ್ರೆಗೆ ನುಗ್ಗಿದ ನೀರು:
ಹುಳಿಮಾವು ಕೆರೆ ಕೋಡಿ ಒಡೆದು ವಸತಿ ಪ್ರದೇಶಗಳು ಜಲಾವೃತವಾಗಿವೆ. ಬಿಳೇಕಹಳ್ಳಿಯಲ್ಲಿರೋ ನ್ಯಾನೋ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೂ ಕೆರೆ ನೀರು ನುಗ್ಗಿದ್ದು, ರೋಗಿಗಳ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿರುವ ರೋಗಿಗಳನ್ನ ಹೊರ ತರಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
Published On - 6:30 pm, Sun, 24 November 19