AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟಿಬಿ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು -ಸಿದ್ದರಾಮಯ್ಯ

ಬೆಂಗಳೂರು ಗ್ರಾಮಾಂತರ: ಎಂಟಿಬಿ ನಾಗರಾಜ್​ ಒಂಥರಾ ಗೋಸುಂಬೆ, ಊಸರವಳ್ಳಿ. ಪ್ರಜಾಪ್ರಭುತ್ವದಲ್ಲಿ ಬಟ್ಟೆ ಬದಲಿಸಿದಂತೆ ಪಕ್ಷ ಬದಲಿಸಬಾರದು. ಪಕ್ಷಾಂತರ ಮಾಡಿದವರು ರಾಜಕೀಯದಲ್ಲಿ ಇರಬಾರದು ಎಂದು ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಆರ್ಥಿಕ ತಜ್ಞ ಎಂದು ಮಂತ್ರಿ ಮಾಡಿರಲಿಲ್ಲ:  ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಪ್ರಚಾರದ ವೇಳೆ ಎಂಟಿಬಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಪಿಳ್ಳಪ್ಪನಂತಹ ಅಣ್ಣನಿಗೇ ನಾಗರಾಜ್​ ಮೋಸ ಮಾಡಿದ್ದಾರೆ. ಎಂಟಿಬಿ ನಾಗರಾಜ್ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು. ಎಂಟಿಬಿ ದೊಡ್ಡ […]

ಎಂಟಿಬಿ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು -ಸಿದ್ದರಾಮಯ್ಯ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 25, 2019 | 12:29 PM

Share

ಬೆಂಗಳೂರು ಗ್ರಾಮಾಂತರ: ಎಂಟಿಬಿ ನಾಗರಾಜ್​ ಒಂಥರಾ ಗೋಸುಂಬೆ, ಊಸರವಳ್ಳಿ. ಪ್ರಜಾಪ್ರಭುತ್ವದಲ್ಲಿ ಬಟ್ಟೆ ಬದಲಿಸಿದಂತೆ ಪಕ್ಷ ಬದಲಿಸಬಾರದು. ಪಕ್ಷಾಂತರ ಮಾಡಿದವರು ರಾಜಕೀಯದಲ್ಲಿ ಇರಬಾರದು ಎಂದು ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಆರ್ಥಿಕ ತಜ್ಞ ಎಂದು ಮಂತ್ರಿ ಮಾಡಿರಲಿಲ್ಲ:  ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಪದ್ಮಾವತಿ ಪರ ಪ್ರಚಾರದ ವೇಳೆ ಎಂಟಿಬಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಪಿಳ್ಳಪ್ಪನಂತಹ ಅಣ್ಣನಿಗೇ ನಾಗರಾಜ್​ ಮೋಸ ಮಾಡಿದ್ದಾರೆ. ಎಂಟಿಬಿ ನಾಗರಾಜ್ ನಾಗರ ಹಾವಿನಂತಾಗಬಾರದು, ಮನುಷ್ಯನಾಗಬೇಕು. ಎಂಟಿಬಿ ದೊಡ್ಡ ಆರ್ಥಿಕ ತಜ್ಞ ಎಂದು ನಾವು ಮಂತ್ರಿ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Published On - 8:09 pm, Sun, 24 November 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು