ಮೈಸೂರು: ತವರು ಮನೆ ಸೇರಿದ್ದ ಪತ್ನಿಯನ್ನು (Wife) ಪತಿ (Husband) ಭೀಕರವಾಗಿ ಕೊಲೆ ಮಾಡಿದ್ದು, ಈ ವೇಳೆ ತಡೆಯಲು ಬಂದ ಅತ್ತೆಯನ್ನೂ (Mother in Law) ಕೊಲೆ ಮಾಡಲು ಯತ್ನಿಸಿರುವ ಘಟನೆ ಮೈಸೂರಿನ (Mysore) ಕುಂಬಾರಕೊಪ್ಪಲಿದಲ್ಲಿ ನಡೆದಿದೆ. ಹರ್ಷಿತಾ (21) ಮೃತ ದುರ್ದೈವಿ. ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ ಮಾದೇಶ್ (30) ಕೊಲೆ ಆರೋಪಿ. ಒಂದು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ದಂಪತಿ ಪ್ರಾರಂಭದ ದಿನಗಳಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಈ ನಡುವೆ ಕ್ಷುಲ್ಲಕ ಕಾರಣಕ್ಕೆ ವಿರಸ ಉಂಟಾಗಿದೆ. ಮಾದೇಶ್ ಆಗಾಗ ಕಿರಿಕ್ ಮಾಡುತ್ತಿದ್ದು, ಹರ್ಷಿತಳನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದನು.
ಅಲ್ಲದೇ ಮಾದೇಶ್ ಪತ್ನಿಯ ಜೊತೆ ಮಲಗುವಾಗ ಪಕ್ಕದಲ್ಲಿ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದನು. ಇದರಿಂದ ಹೆದರಿದ್ದ ಪತ್ನಿ ಹರ್ಷಿತಾ ತವರು ಮನೆ ಸೇರಿದ್ದಳು. ಹೆದರಿ ತವರು ಮನೆ ಸೇರಿದ್ದ ಹರ್ಷಿತಾಳನ್ನು ವಾಪಸ್ ತನ್ನ ಮನೆಗೆ ಕರೆದುಕೊಂಡು ಬರಲು ಮಾದೇಶ್ ಅತ್ತೆ ಮನೆಗೆ ಹೋಗಿದ್ದನು.
ಇದನ್ನೂ ಓದಿ: Bengaluru News: ಕಾರು ಚಾಲನೆ ವೇಳೆ ಗಂಡ-ಹೆಂಡ್ತಿ ಜಗಳ; ದಿಢೀರ್ ಸ್ಟೇರಿಂಗ್ ಎಳೆದ ಪತ್ನಿ, ಕಾರು ಪಲ್ಟಿ
ಅಲ್ಲಿ ಹರ್ಷಿತಳ ಮೇಲೆ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಅತ್ತೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಸ್ಥಳಕ್ಕಾಗಿಮಿಸಿದ ಮೇಟಗಳ್ಳಿ ಪೋಲೀಸರು ಆರೋಪಿ ಮಾದೇಶ್ನನ್ನು ವಶಕ್ಕೆ ಪಡೆದಿದ್ದಾರೆ. ಮೇಟಗಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ