ಏಕಪತ್ನಿ ವ್ರತಸ್ಥ ಪ್ರಶ್ನೆ: ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಕೊಂಡಿದ್ದೇನೆ: ಹೆಚ್‌ಡಿ ಕುಮಾರಸ್ವಾಮಿ

|

Updated on: Mar 24, 2021 | 1:15 PM

ಎಲ್ಲಾರ ಮನೆ ದೋಸೆ ತೂತು. ನಾನು ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಪಿಕೊಡ್ಡಿದ್ದೇನೆ. ನನ್ನ ಬಗ್ಗೆ ಯಾಕೆ ಹೆಸರು ಪ್ರಸ್ತಾಪ ಮಾಡಿದ್ರು ಅಂತ ಗೊತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಏಕಪತ್ನಿ ವ್ರತಸ್ಥ ಪ್ರಶ್ನೆ: ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಕೊಂಡಿದ್ದೇನೆ: ಹೆಚ್‌ಡಿ ಕುಮಾರಸ್ವಾಮಿ
ಎಚ್​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ, ರಮೇಶ್​ ಕುಮಾರ್ ಏಕ ಪತ್ನಿ ವ್ರತಸ್ಥರ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ವಿಚಾರ ವಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿ ಯಾರೂ ಸತ್ಯಹರಿಶ್ಚಂದ್ರರು ಅಲ್ಲ. ನನ್ನ ಹೆಸರನ್ನು ಅವ್ರು ಯಾಕೆ ತಂದ್ರು? ನಾನು ಧೈರ್ಯವಾಗಿ ಹೇಳಿದ್ದೇನೆ. ಭೂಮಿ ಮೇಲೆ ಇರೋ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ. ಇದ್ರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ. ರಾಜ್ಯದ ಜನರ ಮೇಲೆ ಒಂದು ದೃಷ್ಟಿ ಇರಲಿ. ಎಲ್ಲಾರ ಮನೆ ದೋಸೆ ತೂತು. ನಾನು ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಪಿಕೊಂಡಿದ್ದೇನೆ. ನನ್ನ ಬಗ್ಗೆ ಯಾಕೆ ಹೆಸರು ಪ್ರಸ್ತಾಪ ಮಾಡಿದ್ರು ಅಂತ ಗೊತ್ತಿಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ:  ಸಿದ್ದರಾಮಯ್ಯ, ಡಿಕೆಶಿ, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಸಚಿವ ಸುಧಾಕರ್ ಪ್ರಶ್ನೆ

Published On - 12:47 pm, Wed, 24 March 21