ಬೆಳಗಾವಿ: ನನಗೆ ಮೊದಲು ಡ್ಯಾನ್ಸ್ ಬಗ್ಗೆ ಬಹಳ ಆಸಕ್ತಿ ಇತ್ತು. ಆದ್ರೆ ಈಗ ಬೇರೆಯವರನ್ನ ಕುಣಿಸುತ್ತೇನೆ, ನಾನು ಕುಣಿಯಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾರ್ಮಿಕವಾಗಿ ಹೇಳಿದ್ದಾರೆ. ತನ್ಮೂಲಕ, ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಮರಾಠಿ ಕಾಮಿಡಿ ಶೋ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನು ಹೇಳಿದ್ದಾರೆ.
ಬೆಳಗಾವಿಯ ಕಲಾವಿದ ರಾಜು ಪವಾರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್, 25 ವರ್ಷಗಳ ಹಿಂದೆ ನಾನು ಖಾನಾಪುರದಲ್ಲಿ ವಾಸವಿದ್ದೆ. ಖಾನಾಪುರದಿಂದ ಬೆಳಗಾವಿಗೆ ನನ್ನ ಮಗನಿಗೆ ಡ್ಯಾನ್ಸ್ ಕ್ಲಾಸ್‌ಗೆ ಕರೆದುಕೊಂಡು ಬರ್ತಿದ್ದೆ ಎಂದು ತಮ್ಮ ಮಗನನ್ನ ಡ್ಯಾನ್ಸ್ ಕ್ಲಾಸ್ ಸಲುವಾಗಿ ಬೆಳಗಾವಿಗೆ ಕರೆದುಕೊಂಡು ಬರ್ತಿದ್ದರ ಬಗ್ಗೆ ಜ್ಞಾಪಿಸಿಕೊಂಡರು. ಅದರರೊಂದಿಗೆ, ಪರೋಕ್ಷವಾಗಿ ವಿರೋಧಿಗಳಿಗೂ ಡ್ಯಾನ್ಸ್ ಮುಖಾಂತರವೇ ತಿರುಗೇಟು ನೀಡಿದರು.