ಹುಬ್ಬಳ್ಳಿ: ‘ಸರಳವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು (Chandrashekhar Guruji Murder) ಚಾಕುವಿನಿಂದ ಇರಿದು ಮಂಗಳವಾರ (ಜುಲೈ 5) ಹತ್ಯೆ ಮಾಡಲಾಗಿದೆ. ನಗರದ ಖಾಸಗಿ ಹೊಟೆಲ್ನಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಕಿಮ್ಸ್ಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಲಾಬೂರಾಮ್ ಭೇಟಿ ನೀಡಿದ್ದರು. ವ್ಯಾಪಾರದ ಬಗ್ಗೆ ಚರ್ಚಿಸಲು ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಗೆ ಬಂದಿದ್ದರು. ಕೊಲೆಗೆ ಕಾರಣ ಮತ್ತು ಆರೋಪಿಯ ಬಗ್ಗೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದರು. ನಂತರ ರಕ್ತಸ್ರಾವದಿಂದ ಮೃತಪಟ್ಟರು.
ಕಾಲಿಗೆ ಬೀಳುವ ನೆಪದಲ್ಲಿ ಚೂರಿ ಇರಿತ
ಭೇಟಿಯಾಗಬೇಕು ಎಂದು ಕೋರಿ ಚಂದ್ರಶೇಖರ ಸ್ವಾಮೀಜಿಯನ್ನು ಹೊಟೆಲ್ಗೆ ಕರೆಸಿಕೊಂಡಿದ್ದ ದುಷ್ಕರ್ಮಿಗಳು ಸ್ವಾಮೀಜಿ ಕಾಲಿಗೆ ಬೀಳುವ ನೆಪದಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಒಬ್ಬ ಕಾಲಿಗೆ ಬಿದ್ದರೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ. ಚಾಕುವಿನಿಂದ 60ಕ್ಕೂ ಹೆಚ್ಚು ಬಾರಿ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸರಳವಾಸ್ತು ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೆಲವರು ಅವರ ಭೇಟಿಗಾಗಿ ಬಂದಿದ್ದರು. ಗ್ರಾಹಕರ ಭೇಟಿಗಾಗಿ ಗುರೂಜಿ ರೂಮ್ ಬುಕ್ ಮಾಡಿದ್ದರು. ನಗರದ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಮಧ್ಯಾಹ್ನ 12.23ಕ್ಕೆ ಚಂದ್ರಶೇಖರ್ ಗುರೂಜಿ ಹತ್ಯೆಯಾಗಿದೆ.
Published On - 1:49 pm, Tue, 5 July 22