ಇವರೇ ನೋಡಿ ಚಂದ್ರಶೇಖರ್ ಗುರೂಜಿಯನ್ನು ಕೊಲೆ ಮಾಡಿದ ಹಂತಕರು
ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಕೊಲೆ ಬಳಿಕ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹುಬ್ಬಳ್ಳಿ ನಗರದ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಇಂದು (ಜುಲೈ 5) ಮಧ್ಯಾಹ್ನ 12.23ಕ್ಕೆ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಕೊಲೆ ಆಗಿದೆ. ಚಾಕುವಿನಿಂದ ಇರಿದು ಹಂತಕರು ಕೊಲೆ ಮಾಡಿದ್ದಾರೆ. ಸ್ವಾಮೀಜಿಗೆ ಕಾಲಿಗೆ ಬೀಳುವ ನೆಪದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಸರಳವಾಸ್ತು ವ್ಯವಹಾರದ ಹಿನ್ನೆಲೆ ಗುರೂಜಿ ಹುಬ್ಬಳ್ಳಿಗೆ ಆಗಮಿಸಿದ್ದರು. ಗ್ರಾಹಕರ ಭೇಟಿಗಾಗಿ ರೂಂ ಬುಕ್ ಮಾಡಿದ್ದರು. ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದ ಹಂತಕರು ಹತ್ಯೆಗೈದಿದ್ದಾರೆ. ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಕೊಲೆ ಬಳಿಕ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕೊಂಕಣಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದ ರಣವೀರ್ ಸಿಂಗ್; ವಿಚಿತ್ರ ಕಾರಣ ವಿವರಿಸಿದ ದೀಪಿಕಾ ಪಡುಕೋಣೆ