Chandrashekhar Guruji Murder: ಹಂತಕರನ್ನು ಬಂಧಿಸಲು 5 ವಿಶೇಷ ತಂಡಗಳ ರಚನೆ, ಎಲ್ಲಾ ಕಡೆ ಹೈ ಅಲರ್ಟ್
ರಳವಾಸ್ತುವಿನಿಂದ ನೊಂದಿರುವ ಕೆಲ ಗ್ರಾಹಕರು ಹಲವು ಭಾರಿ ಗುರೂಜಿಗೆ ಧಮ್ಕಿ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ರೀತಿಯಲ್ಲೂ ಪೊಲೀಸರು ವಿಚಾರಕ್ಕೆ ನಡೆಸುತ್ತಿದ್ದಾರೆ. ಹಾಗೂ ಗುರೂಜಿ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ ನಗರದ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಇಂದು (ಜುಲೈ 5) ಮಧ್ಯಾಹ್ನ 12.23ಕ್ಕೆ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಕೊಲೆ ಆಗಿದೆ. ಚಾಕುವಿನಿಂದ ಇರಿದು ಹಂತಕರು ಕೊಲೆ ಮಾಡಿದ್ದಾರೆ. ಚಂದ್ರಶೇಖರ್ ಗುರೂಜಿ ಬಾಗಲಕೋಟೆಯಲ್ಲಿ ಆಸ್ತಿ ಹೊಂದಿದ್ದರು. ಹೀಗಾಗಿ ಕೊಲೆ ಮಾಡಿರುವುದು ಆಸ್ತಿಗಾಗಿ ಎಂಬ ಶಂಕೆ ವ್ಯಕ್ತವಾಗಿದೆ. ಜಾಗದ ಸಂಬಂಧ, ಹಣಕಾಸಿನ ಸಂಬಂಧ ಕೊಲೆ ನಡೆದಿರುವ ಅನುಮಾನ ಹೆಚ್ಚಾಗಿದೆ. ಅಲ್ಲದೆ ಹಣ ಪಡೆದು ವಂಚಿಸಿರುವ ಆರೋಪ ಸಹ ಕೇಳಿ ಬಂದಿತ್ತು. ಸದ್ಯ ಪೊಲೀಸ್ ಕಮಿಷನರ್ ಹಂತಕರನ್ನು ಹಿಡಿಯಲು 5 ವಿಶೇಷ ತಂಡಗಳನ್ನ ರಚನೆ ಮಾಡಿದ್ದಾರೆ. ಸರಳವಾಸ್ತುವಿನಿಂದ ನೊಂದಿರುವ ಕೆಲ ಗ್ರಾಹಕರು ಹಲವು ಭಾರಿ ಗುರೂಜಿಗೆ ಧಮ್ಕಿ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ಈ ಎಲ್ಲಾ ರೀತಿಯಲ್ಲೂ ಪೊಲೀಸರು ವಿಚಾರಕ್ಕೆ ನಡೆಸುತ್ತಿದ್ದಾರೆ. ಹಾಗೂ ಗುರೂಜಿ ಕೊಲೆ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿಕೆ ನೀಡಿದ್ದಾರೆ.

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್ಗೇನು ಗೊತ್ತು: ಕಾಶಪ್ಪನವರ್, ಶಾಸಕ

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್

ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
