ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಮಾಜಿ ಶಾಸಕ ಎಂ.ವಿ.ನಾಗರಾಜ್, ಈ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ತಾನಲ್ಲ ಎಂದು ನನ್ನ ಬಳಿ ಹೇಳಿದ್ದರು ಅದನ್ನೇ ನಾನು ಮಾಧ್ಯಮಗಳ ಮುಂದೆ ಹೇಳಿದ್ದೆ. ಈಗ ಮತ್ತೆ ಅವರು ಏನು ಹೇಳಿಕೆ ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ಪ್ರಕರಣದ ತನಿಖೆ ಬಳಿಕ ಎಲ್ಲ ಸತ್ಯಾಂಶ ಬಯಲಾಗಲಿದೆ ಎಂದು ನೆಲಮಂಗಲದಲ್ಲಿ ತಿಳಿಸಿದರು.
ವಿಡಿಯೋ ಬಗ್ಗೆ ಅವರನ್ನು ಕೇಳಿದಾಗ, ಅವರು ಅದು ನಾನಲ್ಲಪ್ಪ, ಆತರದ್ದು ಯಾವುದು ಇಲ್ಲ, ನಾನ್ಯಾವ ಅಂತ ಕೆಟ್ಟ ಕೆಲಸ ಮಾಡಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಅವರ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ರೂಪಿಸಿ ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ವಿಷಯ ತನಿಖೆಯಲ್ಲಿ ಗೊತ್ತಾಗಿದೆ. ಸುಧಾಕರ್, ಕುಮಟಳ್ಳಿ ಸೇರಿದಂತೆ ಎಲ್ಲರನ್ನೂ ಪಕ್ಷಕ್ಕೆ ಕರೆತರುವ ಕೆಲಸ ನಾನು ಮಾಡಿದ್ದೇನೆ. ಜಾರಕಿಹೊಳಿ ನಮ್ಮತ್ರ ಏನು ಹೇಳಿದ್ರೋ ಅದನ್ನ ಮಾಧ್ಯಮದ ಮುಂದೆ ಹೇಳಿದ್ದೆ. ಅವರ ವೈಯಕ್ತಿಕ ವಿಚಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ಹೇಳಿದರು.
ರಾಜಕೀಯವಾಗಿ ಆತ್ಮೀಯತೆಯಿಂದ ಜೊತೆಗಿದ್ದೆವು. ಬಿಟ್ಟರೆ ಅವರ ವೈಯಕ್ತಿಕ ವಿಚಾರ ಏನೆಂದು ನನಗೆ ತಿಳಿದಿಲ್ಲ. ಈ ವಿಷಯವಾಗಿ ನಾವು ಹತ್ತಿರ ಇರುತ್ತಿರಲಿಲ್ಲ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜ್ ತಿಳಿಸಿದರು.
ಪ್ರಕರಣಕ್ಕೆ ಸಿಕ್ಕಿದೆಯೇ ರೋಚಕ ತಿರುವು?
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಇದುವರೆಗೂ ಸಿಡಿಯಲ್ಲಿ ಇರುವುದು ತಾನಲ್ಲ ಎಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗ ಉಲ್ಟಾ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಿಡಿಯಲ್ಲಿರೋದು ನಾನೇ ಎಂದು ಅಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗೆಂದು ತನಿಖಾಧಿಕಾರಿ ಎದುರು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತನಿಖೆ ವೇಳೆ, ಯುವತಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸಹಮತದಿಂದ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಹೇಳಿದ್ದಾರೆ. ಪ್ರಾಜೆಕ್ಟ್ ವಿಚಾರವಾಗಿ ಯುವತಿ ತಮ್ಮನ್ನು ಭೇಟಿಯಾಗಿದ್ದರು ಎಂದು ತಿಳಿಸಿರುವ ಬಗ್ಗೆ ಮಾಹಿತಿ ದೊರಕಿದೆ.
ರಮೇಶ್ ಜಾರಕಿಹೊಳಿ, ಇಲ್ಲಿಯವರೆಗೂ ವಿಡಿಯೋದಲ್ಲಿರುವುದು ನಾನಲ್ಲ ಎಂದಿದ್ದರು. ಗೊತ್ತಿಲ್ಲದೇ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದ್ದರು. ವಿಡಿಯೋ ಎಡಿಟ್ ಮಾಡಲಾಗಿದೆ ಎಂಬ ಇತ್ಯಾದಿ ವಿಚಾರಗಳನ್ನು ತಿಳಿಸಿದ್ದರು. ಅವರ ಸಹೋದರರು ಕೂಡ ಇದೇ ರೀತಿ ಹೇಳುತ್ತಾ ಬಂದಿದ್ದರು. ಆದರೆ ಈಗ, ಶಾಸಕರು ಉಲ್ಟಾ ಹೊಡೆದಂತಿದೆ. ಇದರಿಂದ, ಸಿಡಿ ಬಹಿರಂಗ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ.
ನ್ಯಾಯಲಯಕ್ಕೂ ತನಿಖಾ ಪ್ರಗತಿ ವರದಿ ಸಲ್ಲಿಸಬೇಕಿತ್ತು. ಪೊಲೀಸರಿಗೂ ರಮೇಶ್ ಹೇಳಿಕೆ ಪಡೆಯಲೇಬೇಕಿತ್ತು. ಸಮರ್ಪಕ ತನಿಖೆ ದೃಷ್ಟಿಯಿಂದ ಹೇಳಿಕೆ ಪಡೆಯಬೇಕಿತ್ತು. ರಮೇಶ್ ಹೇಳಿಕೆಗೂ, ಸಾಕ್ಷ್ಯಕ್ಕೂ ಪೂರಕ ಸಂಬಂಧವಿರಬೇಕು. ಇಲ್ಲವಾದಲ್ಲಿ ರಮೇಶ್ ಜಾರಕಿಹೊಳಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಈ ದೃಷ್ಟಿಯಿಂದ ಜಾರಕಿಹೊಳಿ ಇಂದು ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Black Fungus ಕೊವಿಡ್ ರೋಗ ಇಲ್ಲದವರಿಗೂ ಬ್ಲಾಕ್ ಫಂಗಸ್ ರೋಗ ಬರುತ್ತದೆಯೇ; ತಜ್ಞರು ಏನಂತಾರೆ?
(I dont know Ramesh Jarkiholi personal matter says his friend former MLA M V Nagaraj)