ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇನ್ನು ಎದುರಾಗದು: ಕೋವಿಡ್ ಸೋಂಕಿತರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ
ಪ್ರತಿದಿನದ ಪೂರೈಕೆ ಆಯಾ ದಿನಕ್ಕೆ ಸರಿಯಾಗಿ ಲಭ್ಯವಾಗುತ್ತಿದೆ ಮತ್ತು ಮಂಗಳವಾರದಂದು ಭಾರತ ಸರ್ಕಾರವು ರಿಲಯನ್ಸ್ ಫೌಂಡೇಶನ್ ಮೂಲಕ ಪೂರೈಸಿರುವ 114 ಮೆಟ್ರಿಕ್ ಟನ್ ಈಗಾಗಲೇ ತಲುಪಿದ್ದು ಅದನ್ನು ಎಲ್ಲರಿಗೂ ವಿತರಿಸಲಾಗುತ್ತಿದೆ. ಇನ್ನು ಹೆಚ್ಚುವರಿ 112 ಮೆಟ್ರಿಕ್ ಟನ್ ಮಂಗಳವಾರ ಮಧ್ಯರಾತ್ರಿ ಆಗಮಿಸಲಿದೆ.

ರಾಜ್ಯದ ಜನತೆಗೆ ಗೊತ್ತಿರುವ ಹಾಗೆ ಪ್ರಸಕ್ತ ಕೊವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚು ಕಡಿಮೆ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ಪೂರೈಕೆಯ ತೀವ್ರ ಸಮಸ್ಯೆ ಎದುರಾಯಿತು. ಅನೇಕ ಸೋಂಕಿತರು ಸಮಯಕ್ಕೆ ಸರಿಯಾಗಿ ಆಮ್ಲಜನಕ ಸಿಗದ ಕಾರಣ ಪ್ರಾಣ ಕಳೆದುಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯೊಂದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿಗೆ ನಮಗೆ ಮೊದಲು ಆಕ್ಸಿಜನ್ ಪೂರೈಕೆ ಮಾಡುವ ವ್ಯವಸ್ಥೆ ಮಾಡಿ ಎಂದು ಖಾರವಾಗೇ ಹೇಳಿದ್ದರು. ಅವರ ಹತಾಷೆಯನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಂಡು ಅದನ್ನು ಪೂರೈಸುವ ಭರವಸೆ ನೀಡಿದರು. ಏತನ್ಮಧ್ಯೆ ರಾಜ್ಯದಲ್ಲಿ ಲಭ್ಯವಿರುವ ಮೂಲಗಳಿಂದ ಆಕ್ಸಿಜನ್ ತಯಾರಿಕೆ ಹಾಗೂ ಪೂರೈಕೆಯನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿತು. ಅದರ ವಿವರವನ್ನು ಆಕ್ಸಿಜನ್ ನೋಡಲ್ ಅಧಿಕಾರಿ ಮನೀಶ್ ಮೌದ್ಗೀಲ್ ನೀಡಿದ್ದಾರೆ.
-ಪ್ರಾಕ್ಸ್ಏರ್ ಮತ್ತು ಏರ್ ವಾಟರ್ ಆಕ್ಸಿಜನ ಘಟಕಗಳನ್ನು ಟ್ರಿಪ್ ಮಾಡಲಾಗಿ ಶೇಕಡಾ 20 ರಷ್ಟು ಕೊರತೆಯನ್ನು ನಿರೀಕ್ಷಿಸಲಾಗಿತ್ತು.
-ಪ್ರಸಕ್ತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಆಮ್ಲಜನಕ ಉತ್ಪಾದಿಸುವ ಸಂಸ್ಥೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ, ಉತ್ಪಾದನೆಯನ್ನು ಹೆಚ್ಚಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಯಿತು. ಬೇರೆ ಪ್ಲಾಂಟ್ಗಳಲ್ಲೂ ಆಮ್ಲಜನಕ ಉತ್ಪಾದನೆಗೆ ಒತ್ತು ನೀಡಲಾಯಿತು.
-ಭಾರತ ಸರ್ಕಾರವು ಮೇ 20 ರಿಂದ 22ರವರೆಗೆ ಕರ್ನಾಟಕಕ್ಕೆ ವಿಶೇಷ ಹಂಚಿಕೆಯನ್ನು ಒದಗಿಸಿದೆ. 68 ಮೆಟ್ರಿಕ್ ಟನ್ ಮತ್ತು 107 ಮೆಟ್ರಿಕ್ ಟನ್ ಆಕ್ಸಿಜನ್ ಕರ್ನಾಟಕ್ಕೆ ಲಭ್ಯವಾಗಿದ್ದು ಅದನ್ನು ಬಫರ್ (ಮೀಸಲು ದಾಸ್ತಾನು) ಸೃಷ್ಟಿಸಲು ವಿನಿಯೋಗಿಸಲಾಗಿದೆ.
-ಎಲ್ಲಾ ಜಿಲ್ಲೆಗಳಲ್ಲೂ ಒಂದೊಂದು ಬಗೆಯ ಬಫರ್ಗಳನ್ನು ಸೃಷ್ಟಿಸಲಾಯಿತು ಮತ್ತು 110 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯವಾಗುವ ಸ್ಥಿತಿ ನಿರ್ಮಾಣಗೊಂಡಿತು.
-ಪ್ರಾಕ್ಸ್ಏರ್ ಸಂಸ್ಥೆಯು ಮೇ 24ರಂದು 150 ಮೆಟ್ರಿಕ್ ಟನ್ಗಳಷ್ಟು ಹೆಚ್ಚುವರಿ ಆಮ್ಲಜನಕವನ್ನು ಹೊರಭಾಗದಿಂದ ಖರೀದಿ ಮಾಡಿತು.
-ಮೇ 26ರಂದು ಉತ್ಪಾದನೆ ಮಾಮೂಲು ಸ್ಥಿತಿಗೆ ವಾಪಸ್ಸಾಗುವ ನಿರೀಕ್ಷೆಯಿದೆ. ಪ್ರತಿದಿನದ ಪೂರೈಕೆ ಆಯಾ ದಿನಕ್ಕೆ ಸರಿಯಾಗಿ ಲಭ್ಯವಾಗುತ್ತಿದೆ ಮತ್ತು ಮಂಗಳವಾರದಂದು ಭಾರತ ಸರ್ಕಾರವು ರಿಲಯನ್ಸ್ ಫೌಂಡೇಶನ್ ಮೂಲಕ ಪೂರೈಸಿರುವ 114 ಮೆಟ್ರಿಕ್ ಟನ್ ಈಗಾಗಲೇ ತಲುಪಿದ್ದು ಅದನ್ನು ಎಲ್ಲರಿಗೂ ವಿತರಿಸಲಾಗುತ್ತಿದೆ. ಇನ್ನು ಹೆಚ್ಚುವರಿ 112 ಮೆಟ್ರಿಕ್ ಟನ್ ಮಂಗಳವಾರ ಮಧ್ಯರಾತ್ರಿ ಆಗಮಿಸಲಿದೆ.
-ಎಲ್ಲ ಜಿಲ್ಲೆಗಳು ಮತ್ತು ರಾಜ್ಯ ಹೆಡ್ಕ್ವಾರ್ಟರ್ಗಳೊಂದಿಗೆ ನಿರಂತರ ಸಂಪರ್ಕ ಜಾರಿಯಲ್ಲಿದ್ದು ಆಮ್ಲಜನಕ ಲಭ್ಯತೆಯನ್ನು ಸತತವಾಗಿ ಮಾನಿಟರ್ ಮಾಡಲಾಗುತ್ತಿದೆ.
-ಈ ವ್ಯವಸ್ಥೆಯು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ ಮತ್ತು 25ನೇ ಮೇ ಹೊತ್ತಿಗೆ ಸ್ಥಿತಿ ಮಾಮೂಲುಗೊಳ್ಳಲಿದೆ, ಎಂದು ಮನೀಶ್ ತಿಳಿಸಿದ್ದಾರೆ
– ಇದರ ಹೊರತಾಗಿ ರಾಜ್ಯ ಮತ್ತು ಹೊರರಾಜ್ಯದ ಸಂಸ್ಥೆಗಳಿಂದ ಆಕ್ಸಿಜನ್ ಹಂಚಿಕೆ 1015 ಮೆಟ್ರಿಕ್ ಟನ್ಗಳಿಂದ 1200 ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗುತ್ತಿದೆ.
ಇದನ್ನೂ ಓದಿ: Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು