ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲೂ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆದೇಶ: ರಾಜ್ಯ ಸರ್ಕಾರದ ಸಿಎಸ್ ರವಿಕುಮಾರ್
ಬ್ಲ್ಯಾಕ್ ಫಂಗಸ್‌ಗೆ ಔಷಧ ಬಂದಿದೆ, ಅದನ್ನು ಹಂಚುತ್ತಿದ್ದೇವೆ. ರಾಜ್ಯಕ್ಕೆ ಬಂದಿರುವ ಎಲ್ಲ ಔಷಧವನ್ನು ಸರಿಯಾಗಿ ಪೂರೈಕೆ ಮಾಡಲಾಗುವುದು. ಜತೆಗೆ ಮೆಡಿಕಲ್ ಕಾಲೇಜು ಇರುವ ಕಡೆ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಬೇರೆಡೆಗೆ ಕಳಿಸುವ ಹಾಗಿಲ್ಲ ಎನ್ನುವ ಆದೇಶವನ್ನು ಜಾರಿಗೊಳಿಸಿದ್ದೇವೆ ಎಂದು ಹಾಸನದಲ್ಲಿ ಅಧಿಕಾರಿಗಳ ಸಭೆ ಬಳಿಕ ಸಿಎಸ್ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಹಾಸನ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಕಾಯಿಲೆ ರಾಜ್ಯದಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವಿಚಾರವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿ ನೀಡಿದ್ದು, ರಾಜ್ಯದ ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ಔಷಧ ಬಂದಿದೆ, ಅದನ್ನು ಹಂಚುತ್ತಿದ್ದೇವೆ. ರಾಜ್ಯಕ್ಕೆ ಬಂದಿರುವ ಎಲ್ಲ ಔಷಧವನ್ನು ಸರಿಯಾಗಿ ಪೂರೈಕೆ ಮಾಡಲಾಗುವುದು. ಜತೆಗೆ ಮೆಡಿಕಲ್ ಕಾಲೇಜು ಇರುವ ಕಡೆ ಬ್ಲ್ಯಾಕ್ ಫಂಗಸ್ ರೋಗಿಗಳನ್ನು ಬೇರೆಡೆಗೆ ಕಳಿಸುವ ಹಾಗಿಲ್ಲ ಎನ್ನುವ ಆದೇಶವನ್ನು ಜಾರಿಗೊಳಿಸಿದ್ದೇವೆ ಎಂದು ಹಾಸನದಲ್ಲಿ ಅಧಿಕಾರಿಗಳ ಸಭೆ ಬಳಿಕ ಸಿಎಸ್ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಬಳಿಕ ಕೊರೊನಾ ಲಸಿಕೆ ವಿಚಾರವಾಗಿ ಮಾತನಾಡಿದ ಸಿಎಸ್ ರವಿಕುಮಾರ್ ರಾಜ್ಯದಲ್ಲಿ ಇನ್ನೂ ಬೇಕಾದಷ್ಟು ವ್ಯಾಕ್ಸಿನ್ ಬಂದಿಲ್ಲ. 45 ವರ್ಷ ಮೇಲಿನವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. 18 ವರ್ಷ ಮೇಲಿನವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿ ಮಾಡಿ ಕೊಡುತ್ತಿದೆ. ಮೊದಲು ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಸದ್ಯಕ್ಕೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಆಗಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಇನ್ನು ಕೊರೊನಾ ಮೂರನೇ ಅಲೆ ವಿಚಾರವಾಗಿ ಇರುವ ಗೊಂದಲದ ಬಗ್ಗೆ ಮಾತನಾಡಿದ ಅವರು ಕೊರೊನಾ ಮೂರನೇ ಅಲೆ ಬಗ್ಗೆ ಕ್ರಮ ವಹಿಸಲು ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಅವರು ಸಲಹೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಆಕ್ಸಿಜನ್ ಕೊರತೆ ವಿಚಾರವಾಗಿ ಮಾತನಾಡಿ ರವಿಕುಮಾರ್ ರಾಜ್ಯದಲ್ಲಿ ಒಂದು ಘಟಕ ಸ್ಥಗಿತ ಆಗಿದ್ದರಿಂದ ಸಮಸ್ಯೆ ಆಗಿತ್ತು. ಆದರೂ ಹೆಚ್ಚಿನ ಸಮಸ್ಯೆ ಆಗದಂತೆ ನಾವು ನಿರ್ವಹಣೆ ಮಾಡಿದ್ದೇವೆ. ಹಾಸನಕ್ಕೂ ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲ. ಆಕ್ಸಿಜನ್ ಬಂದಹಾಗೆ ಎಲ್ಲರಿಗೂ ನೀಡುತ್ತೇವೆ. ಹಾಸನಕ್ಕೆ ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಘಟಕ ಮಂಜೂರಾಗಿದೆ ಡಿಆರ್ಡಿಓ ದಿಂದ ಶೀಘ್ರವೇ ಅದು ಕಾರ್ಯಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಸನದಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಗರದಲ್ಲಿ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಈಗ ನಮ್ಮ ಗಮನ ಹಳ್ಳಿಗಳ ಕಡೆಗಿದೆ. ಹಳ್ಳಿಯಲ್ಲೂ ಸೋಂಕು ನಿಯಂತ್ರಣ ಮಾಡಬೇಕಿದೆ. ಹಳ್ಳಿಗೆ ಹೋಗಿ ಹೆಚ್ಚು ಪರೀಕ್ಷೆ ಮಾಡಿ, ಐಸೊಲೇಷನ್ ಮಾಡಿ ಅಲ್ಲಿ ಹರಡದಂತೆ ಮಾಡಬೇಕಿದೆ. ಜೂನ್ 15 ರ ವೇಳೆಗೆ ಎರಡನೆ ಅಲೆ ಮುಗಿಯುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ಹಾಸನದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
Published On - 3:43 pm, Tue, 25 May 21