ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಜ್ಞರ ಮಾಹಿತಿ ಕೇಳಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೆ ಕಂಗಾಲಾಗಿಸಿದೆ. ಈಗಾಗಲೇ ಅದೆಷ್ಟೋ ಬಡ ಜೀವಿಗಳನ್ನು ಬಲಿ ಪಡೆದಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಎಲ್ಲವೂ ಮೊದಲಿನಂತೆ ಆಗುತ್ತದೆ ಎಂದು ಯೋಚಿಸುವ ಹೊತ್ತಿಗೆ ಕೊರೊನಾ ಎರಡನೇ ಅಲೆಯ ಆರ್ಭಟ ಬಂದು ಅಪ್ಪಳಿಸಿದೆ. ಕೊರೊನಾ ಎರಡನೇ ಅಲೆಗೆ ಈಗಾಗಲೇ ಜನ ನೊಂದು ಬೆಂದಿದ್ದಾರೆ. ಆದರೆ ಕೊರೊನಾ ಮೂರನೇ ಅಲೆ ಬರುತ್ತದೆ ಎಂಬ ಸೂಚನೆಗಳಿವೆ. ಹೀಗಾಗಿ ಸರ್ಕಾರ ಮೂರನೆ ಅಲೆಯನ್ನು ಎದುರಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದೆಯಂತೆ.
ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನೆ ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಜ್ಞರ ಮಾಹಿತಿ ಕೇಳಿ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಕೊರೊನಾ ಮೂರನೇ ಅಲೆ ಎದುರಿಸುವುದಕ್ಕೆ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಸರ್ಕಾರ ಚರ್ಚೆ ನಡೆಸುತ್ತಿದೆ.
ದೊಡ್ಡ ದೊಡ್ಡ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತದೆ. ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿ ಆಕ್ಸಿಜನ್ ಉತ್ಪಾದನೆಯ ಜೊತೆಗೆ ಬಳಕೆ ಮಾಡಲಾಗುತ್ತದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಕ್ಸಿಜನ್ ಸಮಸ್ಯೆಯಾಗಬಹುದು. ಹೀಗಾಗಿ ಆಕ್ಸಿಜನ್ ಸಮಸ್ಯೆ ಎದುರಾಗಬಾರದೆಂಬ ಕಾರಣಕ್ಕೆ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಸರ್ಕಾರ ಆಸ್ಪತ್ರೆಗಳ ಹುಡುಕಾಟ ನಡೆಸುತ್ತಿದೆ. ಸದ್ಯ ಜನರಲ್ ಬೆಡ್ಗಳ ಅವಶ್ಯಕತೆ ಇಲ್ಲದಿರುವ ಕಾರಣ, ಜನರಲ್ ಬೆಡ್ಗಳನ್ನು ಐಸಿಯು ಬೆಡ್ಗಳಾಗಿ ಮಾರ್ಪಾಡು ಮಾಡಲಾಗುತ್ತದೆ. 3ನೇ ಅಲೆ ಆರಂಭವಾಗುವ ಮೊದಲೇ ಐಸಿಯು ಬೆಡ್ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಹೆಚ್ಚು ಮಕ್ಕಳ ಆಸ್ಪತ್ರೆ ತೆರೆಯುವ ಬಗ್ಗೆ ಯೋಚಿಸಿದ್ದು, ವಾರ್ಡ್ ಮಟ್ಟದಲ್ಲೂ ಮಕ್ಕಳ ಆಸ್ಪತ್ರೆ ಸ್ಥಾಪಿಸಲು ಪ್ಲ್ಯಾನ್ ಮಾಡುತ್ತಿದೆ. ಜೊತೆಗೆ ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಚರ್ಚೆ ಆಗುತ್ತಿದೆ. ಮೂರನೇ ಅಲೆಯಿಂದ ಮಕ್ಕಳನ್ನು ತಪ್ಪಿಸಲು 8-12 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಕೇಂದ್ರದ ಆದೇಶಕ್ಕಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.
ಇದನ್ನೂ ಓದಿ
ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮೌಢ್ಯದಾಚೆಗೂ ವಾತಾವರಣ ಶುದ್ಧೀಕರಣಕ್ಕೆ ಹೋಮ-ಹವನ ಮಾಡಿಸಿದ ಶಾಸಕ ಅಭಯ್ ಪಾಟೀಲ್
(Karnataka Government is preparing to face Corona 3rd wave and discuss to open an oxygen plant in hospitals)
Published On - 2:11 pm, Tue, 25 May 21