ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮೌಢ್ಯದಾಚೆಗೂ ವಾತಾವರಣ ಶುದ್ಧೀಕರಣಕ್ಕೆ ಹೋಮ-ಹವನ ಮಾಡಿಸಿದ ಶಾಸಕ ಅಭಯ್ ಪಾಟೀಲ್
ಲಾಕ್ಡೌನ್ ನಡುವೆಯೂ ಬಿಜೆಪಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ-ಹವನ ಕಾರ್ಯ ನಡೆಯುತ್ತಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ ಮಾಡಿ ಅಗ್ನಿಕುಂಡದಲ್ಲಿ ಬೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಅಕ್ಕಿ, ಬೇವಿನ ಎಲೆ, ಕವಡಿ, ಧೂಪ, ಲವಂಗ ಹಾಕಿ ಹೋಮ ಮಾಡಲಾಗುತ್ತಿದೆ. ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೇತ್ರದ ಗಲ್ಲಿ ಗಲ್ಲಿಗಳಲ್ಲಿ ಹೋಮ ಮಾಡಿಸಲಾಗುತ್ತಿದೆ.
ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ-ಹವನಗಳ ಮೊರೆ ಹೋಗಿದ್ದಾರೆ. ಶಿವಾಜಿ ಗಾರ್ಡನ್ ಸುತ್ತಮುತ್ತ ನಿನ್ನೆ 50 ಕಡೆ ಹೋಮ ಮಾಡಿಸಿದ್ದರು. ಈಗ ಇದೇ ರೀತಿ ಜೂನ್ 15ರೊಳಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಎಲ್ಲ ಕಡೆ ಹೋಮ ಮಾಡಿಸುವುದಕ್ಕೆ ನಿರ್ಧರಿಸಿದ್ದಾರೆ.
ಲಾಕ್ಡೌನ್ ನಡುವೆಯೂ ಬಿಜೆಪಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ-ಹವನ ಕಾರ್ಯ ನಡೆಯುತ್ತಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಡಾವಣೆಗಳ ಮನೆಗಳ ಮುಂದೆ ಅಗ್ನಿಕುಂಡ ಸ್ಥಾಪನೆ ಮಾಡಿ ಅಗ್ನಿಕುಂಡದಲ್ಲಿ ಬೆರಣಿ, ಕರ್ಪೂರ, ತುಪ್ಪ, ಗುಗ್ಗಳ, ಅಕ್ಕಿ, ಬೇವಿನ ಎಲೆ, ಕವಡಿ, ಧೂಪ, ಲವಂಗ ಹಾಕಿ ಹೋಮ ಮಾಡಲಾಗುತ್ತಿದೆ. ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೇತ್ರದ ಗಲ್ಲಿ ಗಲ್ಲಿಗಳಲ್ಲಿ ಹೋಮ ಮಾಡಿಸಲಾಗುತ್ತಿದೆ.
ವಾತಾವರಣ ಶುದ್ಧೀಕರಣಕ್ಕೆ ಹೋಮ ಮಾಡಿಸಿದೆ ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಮೌಢ್ಯ ಎಂದು ತಿಳಿದುಕೊಳ್ಳುವವರಿಗೆ ಅದು ಮೌಢ್ಯ. ಈ ರೀತಿ ಮಾಡುವುದರಿಂದ ವಾತಾವರಣ ಶುದ್ಧವಾಗುತ್ತೆ. ಪರಿಸರ ಇಲಾಖೆಯ ಕೆಲವರಿಗೂ ಇದರ ಬಗ್ಗೆ ಹೇಳಿದ್ದೇನೆ. ಹೋಮ ಹವನ ಮಾಡಲು ಜನರೇ ಮುಂದೆ ಬರ್ತಿದ್ದಾರೆ. ಕ್ಷೇತ್ರದಲ್ಲಿ ಹೋಮ ಹವನ ಕಾರ್ಯ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.
ಮನೆಯಲ್ಲಿ ರೋಗಿಗಳಿದ್ದರೆ ಪರಿಣಾಮ ಏನಾಗುತ್ತೆ ಅಂತಾ ಅವಲೋಕನ ಮಾಡಿ ಹೋಮ ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ವಾತಾವರಣ ಕಲುಷಿತ ಆಗಿದೆ ಅನ್ನುವ ಕಾರಣಕ್ಕೆ ವಾತಾವರಣ ತಿಳಿ ಆಗಲಿ ಅಂತಾ ಮಾಡಿದ್ದೇವೆ. ಹೋಮ ಹವನ ಕಾರ್ಯಕ್ರಮ ಮಾಡಲು ಜನರೇ ಮುಂದೆ ಬರ್ತಿದ್ದಾರೆ. ಮಹಾನಗರ ಪಾಲಿಕೆ ಪರಿಸರ ಇಲಾಖೆ ಅಧಿಕಾರಿಗೆ ಹೇಳಿದ್ದೇನೆ. ಹೋಮ ಹವನ ಮಾಡುವುದರಿಂದ ಏನಾಗುತ್ತೆ ಅನ್ನುವುದನ್ನ ಚೆಕ್ ಮಡ್ತಾರಂತೆ. ಹೋಮ ಹವನ ಕಾರ್ಯ ಮುಂದುವರೆಯುತ್ತೆ ಕರೆದ್ರೇ ಕಾರ್ಯಕ್ರಮಕ್ಕೆ ನಾನು ಹೋಗ್ತೆನಿ ಎಂದು ತಿಳಿಸಿದ್ರು.
ಹೋಮ ಹವನ ಮಾಡಿದ ಕಾಲೋನಿಗಳಿಗೆ ಔಷಧಿ ಸಿಂಪಡಣೆ ವಾತಾವರಣ ಶುದ್ಧಿಯಾಗುತ್ತೆ ಎಂದು ಬೆಳಗಾವಿಯ ಶಿವಾಜಿ ಗಾರ್ಡನ್ ಸುತ್ತಮುತ್ತ ಶಾಸಕ ಅಭಯ್ ಪಾಟೀಲ್ ಹೋಮ ಮಾಡಿಸಿದ್ದಾರೆ. ಆದರೆ ಹೋಮ ಮಾಡಿದ ಸ್ಥಳದಲ್ಲಿಯೇ ಇಂದು ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಹೋಮ ನಡೆದ ಏರಿಯಾಗಳಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.
ಬೆಳಗಾವಿ ನಗರದ ಹೊಸೂರ, ಬಸವಣ್ಣ ಗಲ್ಲಿ, ಶಿವಾಜಿ ಗಾರ್ಡ್ ಸೇರಿದಂತೆ ಕೆಲವು ಕಡೆಗಳಲ್ಲಿ ವೀರ ಮದಕರಿ ಘರ್ಜನೆ ಸಂಘದ ಕಾರ್ಯಕರ್ತರಿಂದ ಸ್ಯಾನಿಟೈಸ್ ಮಾಡಲಾಗುತ್ತಿದೆ. ಒಂದೆಡೆ ಅಭಯ್ ಪಾಟೀಲ್‌ರಿಂದ ಹೋಮ ಹವನ ನಡೆದ್ರೆ ಮತ್ತೊಂದೆಡೆ ಅದೇ ಪ್ರದೇಶದಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಔಷಧಿ ಸಿಂಪಡಣೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಮಹಾಮಾರಿ ಕೊರೊನಾ ನಿವಾರಣೆಗಾಗಿ ದೇವಾಲಯದಲ್ಲಿ ಹೋಮ-ಹವನ