AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Fungus Vaccine: ಇದು ಕನ್ನಡಿಗರು ಹೆಮ್ಮೆಪಡುವ ಸುದ್ದಿ; ಬ್ಲ್ಯಾಕ್ ಫಂಗಸ್ ಔಷಧ ಅಭಿವೃದ್ಧಿ ಹಿಂದೆ ಕರಾವಳಿ ಕನ್ನಡಿಗ

Bandya Srikanth Pai: ಆ್ಯಂಪೋಟೆರಿಸಿನ್ ಬಿ ಎನ್ನುವ ಮದ್ದು, ಕಳೆದ 60 ವರ್ಷಗಳಿಂದ, ಅಂದರೆ ಅದರ ಬಳಕೆಯ ಆರಂಭದಿಂದಲೂ ಉಳಿದೆಲ್ಲ ಶಿಲೀಂಧ್ರ ಅಥವಾ ಫಂಗಸ್ ಸಮಸ್ಯೆ ನಿವಾರಣೆಗೆ ಮೂಲ ಮಾನದಂಡವಾಗಿ ಬಳಸುತ್ತಾರೆ. ಇನ್ನಿತರ ಅನೇಕ ರೋಗನಿರೋಧಕಗಳಂತೆ ಈ ಔಷಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳು ಇಲ್ಲ.

Black Fungus Vaccine: ಇದು ಕನ್ನಡಿಗರು ಹೆಮ್ಮೆಪಡುವ ಸುದ್ದಿ; ಬ್ಲ್ಯಾಕ್ ಫಂಗಸ್ ಔಷಧ ಅಭಿವೃದ್ಧಿ ಹಿಂದೆ ಕರಾವಳಿ ಕನ್ನಡಿಗ
ಬಾಂಡ್ಯ ಶ್ರೀಕಾಂತ ಪೈ
preethi shettigar
|

Updated on: May 25, 2021 | 2:57 PM

Share

ಉಡುಪಿ: ಇಡೀ ವಿಶ್ವವನ್ನು ಬಿಡದೇ ಕಾಡುತ್ತಿರುವ ಕೊರೊನಾ ಸೋಂಕು ರೂಪಾಂತರಗೊಳ್ಳುತ್ತಿದೆ. ಕೊರೊನಾ ರೋಗಿಗಳನ್ನು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಎಲ್ಲೋ ಫಂಗಸ್ ಹೀಗೆ ನಾನಾ ರೂಪಗಳಲ್ಲಿ ಕಾಡುತ್ತಿದೆ. ಕೊವಿಡ್ 2ನೇ ಅಲೆ ಧೃಡಪಟ್ಟು ಗುಣಮುಖರಾದವರಲ್ಲಿಯೇ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ ಎಂದು ಇತ್ತೀಚೆಗೆ ಅನೇಕ ವರದಿಗಳು ದಾಖಲಾಗಿದೆ. ಸದ್ಯ ಬ್ಲ್ಯಾಕ್ ಫಂಗಸ್ ತಡೆಗೆ ಲೊಫೋಸೊಮನ್ ಆ್ಯಂಪೊಟೆರಿಸಿನ್ ಬಿ ಎನ್ನುವ ಔಷಧಿಯನ್ನು ದೇಶವ್ಯಾಪಿ ಬಳಕೆ ಮಾಡಲಾಗುತ್ತಿದೆ.

ಲೊಫೋಸೊಮನ್ ಆ್ಯಂಪೊಟೆರಿಸಿನ್ ಬಿ ಎನ್ನುವ ಔಷಧಿಯ ಸಂಶೋಧನೆಯ ಅನ್ವೇಷಕ ಕರಾವಳಿ ಕನ್ನಡಿಗರಾಗಿದ್ದಾರೆ ಎನ್ನುವುದು ಸದ್ಯ ಹೆಮ್ಮೆಯ ವಿಚಾರ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬಾಂಡ್ಯ ಶ್ರೀಕಾಂತ ಪೈ ಈ ಔಷಧಿಯನ್ನು ಕಂಡು ಹಿಡಿಯಲು ಶ್ರಮ ಪಟ್ಟಿರುವ ಭಾರತ ಸೀರಮ್ಸ್ ಹಾಗೂ ಲಸಿಕೆ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಎಂಬುವುದು ಹೆಮ್ಮೆಯ ವಿಷಯ.

ಕುಂದಾಪುರ ಸಮೀಪದ ಗಂಗೊಳ್ಳಿಯ ಬಿ. ಶ್ರೀಕಾಂತ ಪೈ ಅವರು ದಿ. ಬಾಂಡ್ಯ ಅಣ್ಣಪ್ಪ ಪೈ ಅವರ ಪುತ್ರ. ಗಂಗೊಳ್ಳಿ ಹಾಗೂ ಕುಂದಾಪುರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಇವರು, ಬೆಂಗಳೂರಿನಲ್ಲಿ ಫಾರ್ಮೆಸಿ ಶಿಕ್ಷಣ ಪಡೆದುಕೊಂಡರು. ನಂತರ ಪೈಗಳು ಉದ್ಯೋಗಕ್ಕಾಗಿ ಭಾರತ್ ಸೀರಮ್ಸ್ ಕಂಪೆನಿ ಸೇರಿದ್ದರು.

ಆ್ಯಂಪೋಟೆರಿಸಿನ್ ಬಿ ಎನ್ನುವ ಮದ್ದು, ಕಳೆದ 60 ವರ್ಷಗಳಿಂದ, ಅಂದರೆ ಅದರ ಬಳಕೆಯ ಆರಂಭದಿಂದಲೂ ಉಳಿದೆಲ್ಲ ಶಿಲೀಂಧ್ರ ಅಥವಾ ಫಂಗಸ್ ಸಮಸ್ಯೆ ನಿವಾರಣೆಗೆ ಮೂಲ ಮಾನದಂಡವಾಗಿ ಬಳಸುತ್ತಾರೆ. ಇನ್ನಿತರ ಅನೇಕ ರೋಗನಿರೋಧಕಗಳಂತೆ ಈ ಔಷಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಡ್ಡ ಪರಿಣಾಮಗಳು ಇಲ್ಲ.

ಸಾಂಪ್ರದಾಯಿಕ ರೀತಿಯಲ್ಲಿ ನೀಡುತ್ತಿರುವ ಈ ಔಷಧಿಯ ಒಂದು ಭಾಧಕವೆಂದರೆ ಇದು ಮೂತ್ರಪಿಂಡದ ಮೇಲೆ ನೇರ ಪರಿಣಾಮವನ್ನು ಬೀರಿ, ವಿಷಕಾರಕವಾದ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ಇದರ ಬಳಕೆಯ ಸಮಯದಲ್ಲಿ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಕ್ರಿಟೆನಿನ್ ಅಂಶಗಳನ್ನು ನಿಖರವಾಗಿ ಗಮನಿಸುತ್ತಿರಬೇಕಾಗುತ್ತದೆ. ಅದನ್ನು ಗಮನಿಸಿಕೊಂಡು ಮುಂದಿನ ಚಿಕಿತ್ಸೆ ಮುಂದುವರೆಯಬೇಕಾಗುತ್ತದೆ.

ಈ ಔಷಧಿಯಲ್ಲಿ ಟಾಕ್ಸಿನ್ ದೋಷಗಳು ಕಂಡು ಬಂದದ್ದರಿಂದ, ಅದನ್ನು ಸರಿಪಡಿಸಿ, ಒಳ್ಳೆಯ ಗುಣಮಟ್ಟದ ಎರಡು ಬಗೆಯ ಮೇದಸ್ಸು ಆಧಾರಿತ ದ್ರಾವಣಗಳನ್ನು ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ‌ ಬಿಡುಗಡೆ ಮಾಡಲಾಯಿತು ಎಂದು ತಜ್ಞ ವೈದ್ಯರು ಮಾಹಿತಿ ನೀಡುತ್ತಾರೆ.

ಲಿಪೋಸೋಮಲ್ ಆ್ಯಂಫಿಸೆರಿಟಿನ್ ಬಿ ( ಅ್ಯಂಬಿಸೋಮ್ ) ಉತ್ಪನ್ನವು ಸಾಂಪ್ರಾದಾಯಿಕ ರೀತಿಯಲ್ಲಿ ನೀಡುತ್ತಿದ್ದ ಔಷಧಿಗಿಂತ‌ 50 ಪಟ್ಟು ಹೆಚ್ಚು ಸುರಕ್ಷತಾ ಪ್ರೊಫೈಲ್ ಹೊಂದಿರುವ ಔಷಧಿಯಾಗಿದೆ. 2008 ರಲ್ಲಿ ಆಂಬಿಸೋಮ್‌ನ ಪೇಟೆಂಟ್ ಮುಕ್ತಾಯಗೊಂಡಿತು. ಆದಾಗ್ಯೂ ಉತ್ಪನ್ನದ ಸಂಕೀರ್ಣತೆ ಮತ್ತು ಅದರ ಕ್ಲಿಷ್ಟಕರವಾದ ಉತ್ಪಾದನಾ ಪ್ರಕ್ರಿಯೆಯ ಕಾರಣದಿಂದಾಗಿ ಜೆನೆರಿಕ್ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಕ್ಷಣ ಪರಿಚಯಿಸಲಾಗಿಲ್ಲ.

ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಯ ದಕ್ಷತೆ ಹಾಗೂ ವಿಷತ್ವವನ್ನು ವ್ಯಾಪಕವಾಗಿ ಅಧ್ಯಯನ ಮಾಡಲಾಗಿರುವುದರಿಂದ ಕಪ್ಪು ಶಿಲೀಂಧ್ರ ಸೋಂಕುಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಈ ಔಷಧಿಯನ್ನು ಪ್ರಮುಖವಾಗಿ ಬಳಕೆ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 6000 ದಿಂದ7000ರೂಪಾಯಿ ಇದೆ.

ಸಾಂಪ್ರದಾಯಿಕ ಉತ್ಪನ್ನಕ್ಕೆ ಹೋಲಿಸಿದರೆ ಪ್ರಾಣಿಗಳ ಅಧ್ಯಯನದಲ್ಲಿ 20 ಕ್ಕೂ ಹೆಚ್ಚು ಬಾರಿ ಸುರಕ್ಷತಾ ಪ್ರೊಫೈಲ್ ಹೊಂದಿರುವ ಆಂಫೊಟೆರಿಸಿನ್ ಬಿ ಲಿಪಿಡ್ ಕಾಂಪ್ಲೆಕ್ಸ್ (ಅಬೆಲ್ಸೆಟ್) ಅನ್ನು ಸಹ ಅದೇ ತಂಡವು ಅಭಿವೃದ್ಧಿಪಡಿಸಿದೆ ಇದರ ಬೆಲೆ ಮಾರುಕಟ್ಟೆಯಲ್ಲಿ ಸುಮಾರು 3000-3500 ರೂಪಾಯಿ ಇದೆ. ಕೊಂಚ ದುಬಾರಿ ಚಿಕಿತ್ಸೆಯಾದರೂ ಸದ್ಯದ ಮಟ್ಟಿಗೆ ಸಂಜೀವಿನಿಯಾಗಿದೆ.

ಆಂಫೊಟೆರಿಸಿನ್ ಬಿ ಅನ್ನು ಅಗ್ಗದ ದರದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಸಾಂಪ್ರದಾಯಿಕ ಉತ್ಪನ್ನಗಳಿಗೆ ಹೋಲಿಸಿದಲ್ಲಿ ಇದು 10 ಪಟ್ಟು ಉತ್ತಮ ಸುರಕ್ಷತಾ ಪ್ರೊಫೈಲ್ ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 2000 ರೂಪಾಯಿಯಿದೆ.

ಭಾರತ್ ಸೀರಮ್ಸ್ ಮತ್ತು ಲಸಿಕೆ ತಯಾರಕ ಘಟಕದ ಒಂದೇ ತಂಡವು ವಿಭಿನ್ನ ಪರಿಣಾಮಕಾರಿತ್ವ, ಸುರಕ್ಷತೆ ಮತ್ತು ವಿಷತ್ವ ಪ್ರೊಫೈಲ್‌ಗಳನ್ನು ಹೊಂದಿರುವ 4 ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಶೀಲಿಂಧ್ರ ರೋಗಗಳಿಗೆ ಪರಿಣಾಮಕಾರಿಯಾಗಿರುವ ಈ ಔಷಧಿಗಳಲ್ಲಿ ಯಾವ ರೋಗಿಗೆ ಯಾವ ಉತ್ಪನ್ನ ಎನ್ನುವುದನ್ನು ವೈದ್ಯಕೀಯ ತಜ್ಞರೇ ನಿರ್ಧರಿಸುತ್ತಾರೆ. ನಿವೃತ್ತರಾದ ಬಳಿಕ ಬಿ. ಶ್ರೀಕಾಂತ ಪೈ ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ.

ಇದನ್ನೂ ಓದಿ:

ಕರ್ನಾಟಕಕ್ಕೆ ಕಾಲಿಟ್ಟ ಮ್ಯೂಕೋಮೈಕೋಸಿಸ್! ಸೋಂಕಿನ ಲಕ್ಷಣಗಳೇನು, ಚಿಕಿತ್ಸೆಯೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ