ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗನ ಇಂಟ್ರಾಗೇಷನ್ ರಿಪೋರ್ಟ್ನಲ್ಲಿ ನನ್ನ ಹೆಸರು ಬಂದಿದ್ದು ಹೇಗೆ? ಇದಕ್ಕೆ ಕಾರಣವಾದ ಪೊಲೀಸ್ ಸಿಬ್ಬಂದಿ ಯಾರು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ರಾಮಲಿಂಗಾರೆಡ್ಡಿ ಆಗ್ರಹ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಗೌಪ್ಯ ದಾಖಲೆಗಳಲ್ಲಿ ಒಂದಾದ ಪೊಲೀಸ್ ಇಂಟ್ರಾಗೇಷನ್ ರಿಪೋರ್ಟ್ ಸುದ್ದಿ ವಾಹಿನಿಗಳಿಗೆ ಹೇಗೆ ಲಭ್ಯವಾಯಿತು? ಗೌಪ್ಯವಾಗಿ ಇರಬೇಕಾದ ರಿಪೋರ್ಟ್ ಹೊರಗೆ ಬಂದಿದ್ದು ಹೇಗೆ.? ಈ ಆಧಾರ ರಹಿತ ದಾಖಲೆಯನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಕ್ಕೆ ನೀಡಲು ಕಾರಣರಾದ ಸಿಬ್ಬಂದಿಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ನನಗೂ ಈ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸಹ ನನ್ನ ಹೆಸರು ಈತನ ಫೋನ್ ಇಂಟ್ರಾಗೇಷನ್ ರಿಪೋರ್ಟ್ನಲ್ಲಿ ನಮೂದಿಸಲು ಕಾರಣಗಳೇನು, ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಇಂಟ್ರಾಗೇಷನ್ ರಿಪೋರ್ಟ್ ಅಸಲಿಯೋ ಅಥವಾ ನಕಲಿಯೋ, ಇದು ನನ್ನ ತೇಜೋವಧೆ ಮಾಡುವ ಹುನ್ನಾರವೇ ಈ ಎಲ್ಲಾ ವಿಚಾರಗಳನ್ನು ಪರಿಶೀಲನೆ ನಡೆಸಿ ಪೊಲೀಸ್ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಜರುಗಿಸಿ ಎಂದು ರಾಮಲಿಂಗಾರೆಡ್ಡಿಯವರು ಪತ್ರದಲ್ಲಿ ಬರೆದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ