Karnataka Election: ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ ನಡೆ ಕ್ರಿಶ್ಚಿಯನ್ ಸಮುದಾಯದ ಶಾಲೆಯ ಕಡೆ
ಕರ್ನಾಟಕ ಚುನಾವಣೆ ಸಮೀಪಿಸುತ್ತಿದ್ದಂತೆ ಜನಾರ್ದನ ರೆಡ್ಡಿ ಅವರು ರಾಜಕೀಯವಾಗಿ ಸಕ್ರಿಯರಾಗಲು ಆರಂಭವಾಗಿದೆ. ಈ ಬಾರಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಮಾತುಗಳು ಕೂಡ ಕೇಳಿಬರುತ್ತಿದ್ದು, ಎಲ್ಲಾ ಸಮುದಾಯದ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ.
ಕೊಪ್ಪಳ: ಕರ್ನಾಟಕ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ಜನಾರ್ದನ ರೆಡ್ಡಿ (Gali Janardhan Reddy) ಅವರು ರಾಜಕೀಯವಾಗಿ ಸಕ್ರಿಯರಾಗಲು ಆರಂಭಿಸಿದ್ದಾರೆ. ಈ ಬಾರಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಮಾತುಗಳು ಕೂಡ ಕೇಳಿಬರುತ್ತಿವೆ. ಎಲ್ಲಾ ಸಮುದಾಯದ ವಿಶ್ವಾಸ ಗಳಿಸಲು ಯತ್ನಿಸುತ್ತಿರುವ ಅವರು ಶಾಲಾ ಕಾರ್ಯಕ್ರಮವನ್ನು ಬಿಡದೆ ಕ್ಷೇತ್ರ ಸಂಚಾರದಲ್ಲಿ ನಿರತರಾಗಿದ್ದಾರೆ. ಇಂದು ಜನಾರ್ದನ ರೆಡ್ಡಿಯವರು ಕ್ರಿಶ್ಚಿಯನ್ ಸಮುದಾಯದ ಶಾಲೆಯಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಲ್ಲದೆ, ಗಂಗಾವತಿ ನಗರಸಭೆ (Gangavathi Municipality) ಬಿಜೆಪಿ ಸದಸ್ಯರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದು ಹಾಲಿ ಶಾಸಕ ಪರಣ್ಣ ಮುನವಳ್ಳಿ (MLA Paranna Munavalli) ಅವರಿಗೆ ಬೆವರು ಇಳಿಸುವಂತೆ ಮಾಡಿದೆ. ಇನ್ನೊಂದೆಡೆ ರೆಡ್ಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಜನಾರ್ದನ ರೆಡ್ಡಿಯವರ ಈ ಎಲ್ಲಾ ನಡೆಗಳು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಭಾರೀ ಕುತೂಹಲ ಹುಟ್ಟುಹಾಕಿದೆ.
ರೆಡ್ಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮಾಹಿತಿ ಕೇಳಿಬಂದಿದ್ದು, ಡಿಸೆಂಬರ್ 18ರಂದು ಎಲ್ಲವೂ ಹೇಳುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಇದರ ಅಂಗವಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿನ ತಮ್ಮ ಪ್ರವಾಸವನ್ನು ಮುಂದುವರಿಸಿದ್ದಾರೆ. ಗಂಗಾವತಿ ನಗರಸಭೆ ಬಿಜೆಪಿ ಸದಸ್ಯರ ಮನೆಗೆ ಜನಾರ್ದನ ರೆಡ್ಡಿ ಭೇಟಿ ನೀಡಿದರು. ಗಂಗಾವತಿ ನಗರಸಭೆ ಬಿಜೆಪಿ ಸದಸ್ಯರಾದ ಸುಚೇತಾ ಸಿರಗೇರಿ, ನವೀನ್ ಪಾಟೀಲ್, ರಾಘವೇಂದ್ರ ಶ್ರೇಷ್ಠಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಿಜೆಪಿ ನಗರಸಭೆ ಸದಸ್ಯರಿಗೆ ಜನಾರ್ದನ ರೆಡ್ಡಿಯವರು ಗಾಳ ಹಾಕಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದ್ದು, ಬಿಜೆಪಿ ನಗರಸಭೆ ಸದಸ್ಯರ ಮನೆಗೆ ಜನಾರ್ದನ ರೆಡ್ಡಿ ಭೇಟಿಯು ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ಅಚ್ಚರಿ ತಂದಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ರಾ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್?
ಕ್ರಿಶ್ಚಿಯನ್ ಸಮೂದಾಯದ ಮತ ಸೆಳೆಯಲು ಮುಂದಾದ್ರಾ ರೆಡ್ಡಿ?
ಗಂಗಾವತಿಯಿಂದ ಜರ್ನಾರ್ದನ ರೆಡ್ಡಿಯವರು ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳ ನಡುವೆ ಅವರು ಕ್ರಿಶ್ಚಿಯನ್ ಸಮೂದಾಯದ ಮತ ಸೆಳೆಯಲು ಮುಂದಾದರೇ ಎನ್ನುವ ಪ್ರಶ್ನೆ ಇನ್ನಷ್ಟು ಕಾಡತೊಡಗಿದೆ. ಇದಕ್ಕೆ ಕ್ರಿಶ್ಚಿಯನ್ ಶಾಲೆಗೆ ಭೇಟಿ ನೀಡಿರುವುದು ಪುಷ್ಠಿ ಎಂಬಂತಿದೆ. ಗಂಗಾವತಿಯ ಜಯನಗರದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಶಾಲೆಯ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ಭಾಗಿಯಾದರು. ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ರೆಡ್ಡಿ, ಶಾಲೆಯಲ್ಲಿ ಆಯೋಜಿಸಿದ ವಿಜ್ಞಾನ, ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ಬಿಜೆಪಿ ಬಳ್ಳಾರಿ ಜಿಲ್ಲಾ ಸಹ ಪ್ರಭಾರಿ ವೀರುಪಾಕ್ಷಪ್ಪ ಸಿಂಗನಾಳ್, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಜೋಗದ ನಾರಾಯಣಪ್ಪ ನಾಯಕ್ ಭಾಗಿಯಾದರು. ಆದರೆ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರು ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ನಾವೆಲ್ಲರೂ ಸಹೋದರತ್ವದಿಂದ ಬಾಳಬೇಕು
ಗಂಗಾವತಿಯಲ್ಲಿ ಇದು ನನ್ನ ಮೊದಲ ಕಾರ್ಯಕ್ರಮವಾಗಿದೆ ಎಂದ ರೆಡ್ಡಿ, ಮೊದಲು ಸರತ್ವತಿ ಅರ್ಶಿವಾದ ಪಡೆಯಬೆಕೆಬೆಂದು ನನ್ನ ಆಶಯವಾಗಿತ್ತು. ಇಲ್ಲಿಂದ ನನ್ನ ಮುಂದಿನ ಕಾರ್ಯಕ್ರಮಗಲ್ಲಿ ಭಾಗಿಯಾಗುತ್ತೇನೆ ಎಂದರು. ಭಾಷಣದ ವೇಳೆ ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎನ್ನೋ ಬಸವಣ್ಣನ ವಚನ ಹೇಳಿದ ಅವರು, ನಾನು ಅಂದುಕೊಂಡಿರುವ ಕಾರ್ಯಕ್ರಮಗಳು ಇವತ್ತು ಕಾರ್ಯರಂಭವಾಗಿವೆ. ಹಿಂದೂ-ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯ ನಾವೆಲ್ಲರೂ ಸಹೋದರತ್ವದಿಂದ ಬಾಳಬೇಕು. ಹಾಗೇ ಬಾಳಿದರೆ ಖುಷಿಯಾಗಿರುತ್ತೇವೆ. ನನಗೆ ಗಂಗಾವತಿ ಬಹಳ ಇಷ್ಟವಾದ ಊರು. ಗಂಗಾವತಿ ಅಂದರೆ ಬಳ್ಳಾರಿಯ ಒಂದು ಭಾಗ ಅಂತ ಅಂದುಕೊಂಡಿದ್ದೇನೆ. ಹೀಗಾಗೇ ಇಲ್ಲಿ ಮನೆ ಮಾಡಿದ್ದೇನೆ. ನಿಮ್ಮೆಲ್ಲಾ ಸುಖಃ ದುಖಃಗಳಲ್ಲಿ ಭಾಗಿಯಾಗುತ್ತೇನೆ ಎಂದರು.
2ನೇ ದಿನವೂ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಟೆಂಪಲ್ ರನ್
ನಿನ್ನೆ ಗಂಗಾವತಿಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ್ದ ರೆಡ್ಡಿ, ಎರಡನೇ ದಿನವಾದ ಇಂದು ಮತ್ತೆ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಗಂಗಾವತಿಯ ಹಿರೇಜಂತಕಲ್ನಲ್ಲಿರುವ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಮಾಜಿ ಸಚಿವರಿಗೆ ಕೆಲವು ಬಿಜೆಪಿ ನಾಯಕರು ಕೂಡ ಸಾಥ್ ನೀಡಿದರು. ನಿನ್ನೆ ಹನುಮಮಾಲೆ ಧರಿಸಿ ಆಂಜನೇಯ ದರ್ಶನ ಪಡೆದಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Tue, 6 December 22