Devanahalli: ಮೊಬೈಲ್ ಸ್ಟೇಟಸ್ ವಿಚಾರಕ್ಕೆ ಕಾಂಗ್ರೆಸ್ ಮುಖಂಡರ ನಡುವೆ ಅವಾಚ್ಯ ಶಬ್ದಗಳ ಟಾಕ್ವಾರ್; ಆಡಿಯೋ ವೈರಲ್
ದೇವನಹಳ್ಳಿಯ ಪ್ರಬಲ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಶಾಂತ್ಕುಮಾರ್ ಮತ್ತು ಯುವ ಮುಖಂಡ ಸಂದೀಪ್ ನಡುವೆ ಟಾಕ್ವಾರ್ ನಡೆದಿದ್ದು. ಮೊಬೈಲ್‌ನಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ಪಟ್ಟಣದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಾಂತ್ಕುಮಾರ್ ಮತ್ತು ಯುವ ಮುಖಂಡ ಸಂದೀಪ್ ಇಬ್ಬರು ಪೋನ್ನಲ್ಲಿ ಬೈದಾಡಿಕೊಂಡಿರುವ ಆಡಿಯೋ ಇದೀಗ ಪುಲ್ ವೈರಲ್ ಆಗಿದೆ. 2023 ರ ಚುನಾವಣೆಗೆ ದೇವನಹಳ್ಳಿ ಟಿಕೆಟ್ ಪಡೆಯಲು ಪ್ರಬಲ ಪೈಟ್ ನೀಡುತ್ತಿರುವ ಶಾಂತ್ಕುಮಾರ್. ಈ ವಿಚಾರವಾಗಿ ಕ್ಷೇತ್ರದ ಕಾಂಗ್ರೇಸ್ನಲ್ಲಿ ನಡೆಯುತಿದೆ ಶೀತಲ ಸಮರ. ಈ ಮಧ್ಯೆ ಟಿಕೆಟ್ ಆಕಾಂಕ್ಷಿ ಶಾಂತ್ ಕುಮಾರ್ ಬಗ್ಗೆ ಯುವ ಮುಖಂಡ ಸಂದೀಪ್ ಅವಹೇಳನವಾಗಿ ಸ್ಟೇಟಸ್ ಹಾಕಿದ್ದಾನೆ ಎನ್ನುವ ವಿಚಾರಕ್ಕೆ ಕಿರಿಕ್ ಆಗಿದ್ದು, ಇದೇ ವಿಚಾರವಾಗಿ ಇಬ್ಬರು ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೋನ್ನಲ್ಲಿ ಅವಾಚ್ಯ ಶಬ್ದಗಳಿಂದ ಕೈ ಮುಖಂಡರ ಟಾಕ್ ವಾರ್
ಮೊಬೈಲ್‌ನಲ್ಲಿ ತನ್ನ ವಿರುದ್ದ ಅವಹೇಳನಕಾರಿ ಸ್ಟೇಟಸ್ ಹಾಕಿದ್ದ ಎನ್ನುವ ವಿಚಾರಕ್ಕೆ ಕೈ ನಾಯಕರಿಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿರುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಶಾಂತ್ ಕುಮಾರ್ ಮತ್ತು ಯುವ ಮುಖಂಡ ಸಂದೀಪ್ ನಡುವೆ ನಡೆದಿರುವ ಸಂಬಾಷಣೆ ಎನ್ನಲಾಗಿದ್ದು, ಕೈ ನಾಯಕರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗ್ತಿದೆ. ಯುವ ಮುಖಂಡ ಸಂದೀಪ್ ದೇವನಹಳ್ಳಿ ಕ್ಷೇತ್ರದ ಸಮಾಜ ಸೇವಕ ಮತ್ತು ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶಾಂತಕುಮಾರ್ ವಿರುದ್ದ ಪೋನ್ನಲ್ಲಿ ಅಪಮಾನ ಮಾಡುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದ ಎನ್ನುವ ವಿಚಾರಕ್ಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಕರೆ ಮಾಡಿದ ವೇಳೆ ಇಬ್ಬರು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿರುವ ಆಡಿಯೋ ಇದಾಗಿದ್ದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ನಲ್ಲಿ ಒಳಜಗಳ ನಡೆಯುತ್ತಿದೆ,
ಇದನ್ನೂ ಓದಿ:ಬೆಳಗಾವಿ: ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಜಿದ್ದಿಗೆ ಬಿದ್ದ ಸಾಹುಕಾರ್
ನಮ್ಮ ವಿರುದ್ದ ಮಿಮಿಕ್ರಿ ಆಡಿಯೋ ಪಿತೂರಿ ಆಡಿಯೋ ಬಗ್ಗೆ ದೂರು ನೀಡಿ ತನಿಖೆಗೆ ಒತ್ತಾಯ
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಬಗ್ಗೆ ಸ್ವತಃ ಟಿಕೆಟ್ ಆಕಾಂಕ್ಷಿ ಶಾಂತ್ ಕುಮಾರ್ ಮತ್ತು ಸಂದೀಪ್ ಒಂದಾಗಿ ಬಂದು ಆರೋಪವನ್ನ ತಳ್ಳಿ ಹಾಕಿದ್ದಾರೆ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿ ಉತ್ತಮ ಜನ ಸಂಪರ್ಕಗಳಿಸಿದ್ದೇನೆ ಜತೆಗೆ ಪ್ರಬಲ ಟಿಕೆಟ್ ಆಕಾಂಕ್ಷಿ, ಈ ರೀತಿ ನಮ್ಮ ವಿರುದ್ದ ಪಿತೂರಿ ಮಾಡಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಶಾಂತ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಇದರಲ್ಲಿರುವ ಧ್ವನಿ ನಮ್ಮದಲ್ಲ ಮಿಮಿಕ್ರಿ ಮಾಡಿ ಈ ರೀತಿ ಹರಿಬಿಟ್ಟಿದ್ದು, ಈ ಬಗ್ಗೆ ದೂರು ನೀಡಿ ಹರಿಬಿಟ್ಟಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ. ಇನ್ನು ಇದೇ ವೇಳೆ ಸಂದೀಪ್ ಸಹ ನಾವಿಬ್ಬರು ಚೆನ್ನಾಗಿದ್ದೇವೆ. ನಮ್ಮ ಪಕ್ಷ ಮುಂದೆ ಗೆಲ್ಲುತ್ತೆ. ಈ ರೀತಿ ಡ್ಯಾಮೇಜ್ ಮಾಡಲು ಆಡಿಯೋ ಹರಿಬಿಟ್ಟಿದ್ದಾರೆ ಎಂದು ಇಬ್ಬರು ಸಹ ಆಡಿಯೋವನ್ನ ಅಲ್ಲಗೆಳೆದಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Tue, 6 December 22