AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಚಲ ಪ್ರದೇಶ-ಗುಜರಾತ್ ಎಕ್ಸಿಟ್ ಪೋಲ್ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರುತ್ತೆ: ಸಿಎಂ ಬೊಮ್ಮಾಯಿ ವಿಶ್ವಾಸ

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಹುತೇಕ ಮತದಾನೋತ್ತರ ಸರ್ವೆಯಲ್ಲಿ ಬಿಜೆಪಿಯೇ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಅನ್ನೋ ಲೆಕ್ಕ ಹೊರಬಿದ್ದಿದೆ. ಇನ್ನು ಎಕ್ಸಿಟ್ ಪೋಲ್ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಿಮಾಚಲ ಪ್ರದೇಶ-ಗುಜರಾತ್ ಎಕ್ಸಿಟ್ ಪೋಲ್ ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರುತ್ತೆ: ಸಿಎಂ ಬೊಮ್ಮಾಯಿ ವಿಶ್ವಾಸ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Dec 06, 2022 | 3:06 PM

Share

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಎಕ್ಸಿಟ್‌ ಪೋಲ್ ರಿಪೋರ್ಟ್‌ನ (Gujarat Exit polls 2022 ) ಪ್ರಕಾರ ಬಿಜೆಪಿ ಗೆಲುವಿನ ಹಿಂಟ್ ಸಿಕ್ಕಿದೆ. ಮೋದಿ ಹವಾ, ಮೋದಿ ಇಮೇಜ್ ಎಲ್ಲವೂ ವರ್ಕೌಟ್ ಆಗಿದೆ. ಎದುರಾಳಿಗಳನ್ನ ನೆಲಸಮ ಮಾಡಿ ಮತ್ತೆ ಗುಜರಾತ್ ಮತ್ತು ಹಿಮಾಚಲ ಪ್ರದೇಶವನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಗುಜರಾತ್‌ನಲ್ಲಿ ಮತಬುಟ್ಟಿಯನ್ನ ಸೆಳೆದು ತರುವಂತಹ ಹವಾ ಇಟ್ಟಿರೋ ಮೋದಿ ಈ ಬಾರಿಯೂ ಕಮಲ ಅರಳಿಸುವಲ್ಲಿ ಸಕ್ಸಸ್ ಆಗಿದ್ದಾರೆ.  ಇನ್ನು ಎಕ್ಸಿಟ್ ಪೋಲ್ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗುಜರಾತ್, ಹಿಮಾಚಲ್ ಆಯ್ತು ಈಗ ಕರ್ನಾಟಕದಲ್ಲಿ ಗೆಲುವಿನ ಕುದುರೆ ಓಡಿಸಲು ಮೋದಿ-ಶಾ ತಂತ್ರ, ಕಟೀಲ್ ಜತೆ ಮಹತ್ವದ ಚರ್ಚೆ

ವಿಧಾನಸೌಧದಲ್ಲಿ ಇಂದು(ಡಿಸೆಂಬರ್ 06) ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ 66ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಿನ್ನೆ(ಡಿ.05) ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಸಂಬಂಧ ವಿವಿಧ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶ ಬಿಜೆಪಿ ಗೆ ಗೆಲುವು ಎನ್ನುವುದನ್ನು ಸೂಚಿಸಿದೆ. ಎಕ್ಸಿಟ್ ಪೋಲ್ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಜನ ಸುಳ್ಳು ಆರೋಪಗಳಿಗೆ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲ ಕೊಡುವುದಿಲ್ಲ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಗುಜರಾತ್ ನಲ್ಲಿ ಇದು 7ನೇ ಬಾರಿಯ ಗೆಲುವಾಗಲಿದೆ. ಮುಂಬರುವ‌ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಒಳ್ಳೆಯ ಪರಿಣಾಮ ಆಗಲಿದೆ. ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ. ಅಂದರೆ ಜನ ಅಭಿವೃದ್ಧಿ ಕಾರ್ಯವನ್ನ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Gujarat Exit Poll 2022 ಗುಜರಾತ್‌ನಲ್ಲಿ ಮತ್ತೆ ಕೇಸರಿ ಬಾವುಟ ಹಾರಾಡೋದು ಫಿಕ್ಸ್, ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಗುಜರಾತ್ ಮತದಾನೋತ್ತರ ಸಮೀಕ್ಷೆ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತ್‌ ವರ್ಷ್ ನಡೆಸಿದ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ. ಬಿಜೆಪಿಗೆ 125ರಿಂದ 130 ಸ್ಥಾನ ಬರಬಹುದು ಅಂತಾ ಅಂದಾಜಿಸಿದೆ. ಕಾಂಗ್ರೆಸ್‌ಗೆ 40ರಿಂದ 50, ಆಮ್‌ ಆದ್ಮಿಗೆ 3ರಿಂದ 5 ಸ್ಥಾನ ಬಂದ್ರೆ, ಇತರರು 3ರಿಂದ 7 ಕ್ಷೇತ್ರಗಳಲ್ಲಿ ಗೆಲ್ಲಬಹುದು ಅಂತಾ ಲೆಕ್ಕಾಚಾರ ಹಾಕಲಾಗಿದೆ. ಹಾಗೆಯೇ ಎಬಿಪಿ ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 134 ಸ್ಥಾನ, ಕಾಂಗ್ರೆಸ್ 37, ಆಪ್‌ 7, ಇತರರು 4 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಅಂತಾ ಗೊತ್ತಾಗಿದೆ. ಇನ್ನೂ ರಿಪಬ್ಲಿಕ್ ಮತ್ತು ಪಿ ಮಾರ್ಕ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 128ರಿಂದ 148, ಕಾಂಗ್ರೆಸ್‌ಗೆ 30ರಿಂದ 42, ಆಪ್‌ಗೆ 2ರಿಂದ 10 ಸ್ಥಾನ ಸಿಗಲಿದೆ ಅಂತಾ ಅಂದಾಜಿಸಲಾಗಿದೆ

ಇನ್ನೂ ನ್ಯೂಸ್ ಎಕ್ಸ್‌ ಜನ್‌ ಕಿ ಬಾತ್ ಸರ್ವೆ ಪ್ರಕಾರ ಬಿಜೆಪಿ 117ರಿಂದ 140 ಸ್ಥಾನಗಳು, ಕಾಂಗ್ರೆಸ್‌ಗೆ 34ರಿಂದ 51 ಸ್ಥಾನಗಳು, ಆಪ್‌ಗೆ 6ರಿಂದ 13 ಸ್ಥಾನ ಹಾಗು ಇತರರು 1 ಕ್ಷೇತ್ರದಲ್ಲಿ ಜಯಗಳಿಸೋ ಸಾಧ್ಯತೆ ಇದೆ. ಅಲ್ಲದೇ ಆಜ್‌ ತಕ್, ಇಂಡಿಯಾ ಟುಡೇ ಮತ್ತು ಎಕ್ಸಿಮ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಬಿಜೆಪಿ 129ರಿಂದ 151 ಸ್ಥಾನ ಗಳಿಸಲಿದೆ ಅಂತಾ ಅಂದಾಜಿಸಲಾಗಿದೆ. ಹಾಗೆಯೇ ಕಾಂಗ್ರೆಸ್ 16ರಿಂದ 30, ಆಪ್ 09ರಿಂದ 21, ಇತರರು 2 ಕ್ಷೇತ್ರಗಳಲ್ಲಿ ಗೆಲ್ಲೋ ಸಾಧ್ಯತೆ ಇದೆ ಅಂತಾ ಆಜ್‌ ತಕ್ ಸಮೀಕ್ಷೆ ಹೇಳಿದೆ. ಹಾಗೆಯೇ ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಜೆಪಿ 139 ಸ್ಥಾನ, ಕಾಂಗ್ರೆಸ್ 30, ಆಪ್ 11, ಇತರರು 2 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ

ಒಟ್ಟಿನಲ್ಲಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಹುತೇಕ ಸರ್ವೆಯಲ್ಲಿ ಬಿಜೆಪಿಯೇ ಈ ಬಾರಿ ಅಧಿಕಾರದ ಗದ್ದುಗೆ ಏರಲಿದೆ ಅನ್ನೋ ಲೆಕ್ಕ ಹೊರಬಿದ್ದಿದೆ. ಡಿಸೆಂಬರ್ 8ರಂದು ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಾರಿಗೆ ಗೆಲುವು ಎನ್ನುವುದು ಸ್ಪಷ್ಟ ಚಿತ್ರಣ ಸಿಗಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ