Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Exit Poll 2022 ಗುಜರಾತ್‌ನಲ್ಲಿ ಮತ್ತೆ ಕೇಸರಿ ಬಾವುಟ ಹಾರಾಡೋದು ಫಿಕ್ಸ್, ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಗುಜರಾತ್​ನಲ್ಲಿ ಬರೋಬ್ಬರಿ 27 ವರ್ಷದಿಂದ ಅಧಿಕಾರದ ಗುದ್ದುಗೆ ಹಿಡಿದು ಕೂಳಿತಿರುವ ಬಿಜೆಪಿ, ಈ ಬಾರಿಯೂ ಅಧಿಪತ್ಯ ಮುಂದುವರಿಸಿದೆ. ಮತ್ತೆ ಐದು ವರ್ಷ ಗುಜರಾತ್‌ನಲ್ಲಿ ಕೇಸರಿ ಬಾವುಟ ಹಾರಾಡೋದು ಫಿಕ್ಸ್ ಆಗಿದೆ. ಎಕ್ಸಿಟ್‌ಪೋಲ್‌ನ ಪ್ರಕಾರ, ಮುಂದಿನ ಐದು ವರ್ಷವೂ ಬಿಜೆಪಿಯ ನಾಗಲೋಟ ಮುಂದುವರಿಯಲಿದೆ.

Gujarat Exit Poll 2022 ಗುಜರಾತ್‌ನಲ್ಲಿ ಮತ್ತೆ ಕೇಸರಿ ಬಾವುಟ ಹಾರಾಡೋದು ಫಿಕ್ಸ್, ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬಿಜೆಪಿ ಚಿಹ್ನೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 05, 2022 | 7:52 PM

ನವದೆಹಲಿ: ಒನ್‌ ಮ್ಯಾನ್ ಆರ್ಮಿಯಂತೆ ಗುಜರಾತ್ ವಿಧಾನಸಭೆ ಚುನಾವಣಾ((Gujarat Assembly Poll)) ಅಖಾಡದಲ್ಲಿ ಎದೆ ಕೊಟ್ಟು ನಿಂತ ಮಾಸ್ ಲೀಡರ್, ತವರೂರಲ್ಲಿ ಮತ್ತೆ ಗರ್ಜಿಸಿದ್ದಾರೆ. ಮೋದಿ ಗರ್ಜನೆಯಿಂದ ಸತತ ಗೆಲುವು ಸಾಧಿಸಿರೋ, ಸಾಧಿಸುತ್ತಿರೋ ಬಿಜೆಪಿ ಈ ಬಾರಿಯೂ ಗೆಲುವಿನ ಕೇಕೆ ಹಾಕಲು ರೆಡಿಯಾಗಿದೆ. ಗುಜರಾತ್‌ನಲ್ಲಿ ಕಮಲ ಅರಳಿ, ಕೇಸರಿ ಬಾವುಟ ರಾರಾಜಿಸಲಿದೆ. ಇದನ್ನ ನಾವು ಹೇಳ್ತಿಲ್ಲ. ಸದ್ಯ ಹೊರಬಿದ್ದಿರೋ ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶದ (Gujarat Assembly Election Exit Poll Results 2022 ) ಪ್ರಕಾರ ಗುಜರಾತ್ ಗದ್ದುಗೆ ಉಳಿಸಿಕೊಳ್ಳವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಹಾಗಾದ್ರೆ, ಯಾವೆಲ್ಲ ಎಕ್ಸಿಟ್‌ ಪೋಲ್​ಗಳಲ್ಲಿ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನುವುದು ಈ ಕೆಳಗಿನಂತಿದೆ ನೋಡಿ.

ರಿಪಬ್ಲಿಕ್‌ ಟಿವಿ ಚುನಾವಣೆ ಸಮೀಕ್ಷೆ

ರಿಪಬ್ಲಿಕ್‌ ಗುಜರಾತ್‌ ಚುನವಣೆ ಸಮೀಕ್ಷೆಯ ಪ್ರಕಾರ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದೆ. ಬಿಜೆಪಿಗೆ 128 ರಿಂದ 148 ಸ್ಥಾನಗಳು ದೊರೆಯಲಿವೆ ಎಂದು ರಿಪಬ್ಲಿಕ್‌ ಟಿವಿ ಭವಿಷ್ಯ ನುಡಿದೆ. ಇನ್ನು ಕಾಂಗ್ರೆಸ್ 30 ರಿಂದ 42 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ. ಇನ್ನು ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಕೇಜ್ರಿವಾಲ್ ನೇತೃತ್ವದ ಎಎಪಿ ಕೇವಲ 2 ರಿಂದ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ರಿಪಬ್ಲಿಕ್‌ ಚುನಾವಣೆ ಸಮೀಕ್ಷೆಯಲ್ಲಿ ಹೇಳಿದೆ.

ಜನ್‌ ಕೀ ಬಾತ್‌ ಚುನಾವಣೋತ್ತರ ಸಮೀಕ್ಷೆ

ಜನ್‌ ಕೀ ಬಾತ್‌ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ 117 – 140 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿದಿದೆ. ಈ ಮೂಲಕ ಬಿಜೆಪಿಗೆ 2022ರ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಬಹುಮತ ಲಭಿಸಲಿದೆ ಎಂದು ಹೇಳಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷಕ್ಕೆ 34 – 51 ಹಾಗೂ ಎಎಪಿಗೆ ಕೇವಲ 6 ರಿಂದ 13 ಸ್ಥಾನಗಳು ಸಿಗಲಿದೆ. ಹಾಗೂ, ಇತರರಿಗೆ ಶೂನ್ಯ ಸ್ಥಾನ ಎಂದು ಜನ್‌ ಕೀ ಬಾತ್‌ ಚುನಾವಣೋತ್ತರ ಸಮೀಕ್ಷೆ ಹೇಳುತ್ತದೆ.

ಟಿವಿ9 ಭಾರತ್‌ವರ್ಷ್‌ ಮತಗಟ್ಟೆ ಸಮೀಕ್ಷೆ

ಗುಜರಾತ್‌ನಲ್ಲಿ ಟಿವಿ9 ಭಾರತ್‌ವರ್ಷ್‌ ಹಿಂದಿ ಚಾನೆಲ್‌ ಮತಗಟ್ಟೆ ಸಮೀಕ್ಷೆ ಪ್ರಕಾರ ತ್ತೆ BJPಗೇ ಅಧಿಕಾರವೆಂದು ಭವಿಷ್ಯ ನುಡಿದಿದೆ. ಗುಜರಾತ್‌ ಎಲೆಕ್ಷನಲ್ಲಿ ಶೇಕಡಾ 47ರಷ್ಟು ಮತದಾರರು ಬಿಜೆಪಿಗೆ ಜೈ ಎಂದಿದ್ದಾರೆ ಎಂದು ಟಿವಿ9 ಭಾರತ್‌ವರ್ಷ್‌ ಹಿಂದಿ ಚಾನೆಲ್‌ ಮತಗಟ್ಟೆ ಸಮೀಕ್ಷೆ ಹೇಳಿದೆ.

ನ್ಯೂಸ್‌ ಎಕ್ಸ್‌ನಿಂದ ಚುನಾವಣೋತ್ತರ ಸಮೀಕ್ಷೆ

ನ್ಯೂಸ್‌ ಎಕ್ಸ್‌ನಿಂದ ಚುನಾವಣೋತ್ತರ ಸಮೀಕ್ಷೆ ಬಿಡುಗಡೆಯಾಗಿದ್ದು, ಇದರಲ್ಲಿ ಬಿಜೆಪಿಗೆ ಒಟ್ಟಾರೆ 182 ವಿಧಾನಸಭಾ ಸ್ಥಾನಗಳಲ್ಲಿ 117ರಿಂದ 140 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ತಿಳಿಸಿದೆ. ಇದೇ ಕಾಂಗ್ರೆಸ್‌ಗೆ 34ರಿಂದ 51 ಸ್ಥಾನಗಳಲ್ಲಿ ಗೆಲ್ಲಲಿದೆ. ಇನ್ನು ಆಮ್ ಆದ್ಮಿ ಪಕ್ಷಕ್ಕೆ 6ರಿಂದ 13 ಸ್ಥಾನಗಳಲ್ಲಿ ಗೆಲುವು ಸಿಗಲಿದೆ ಎಂದು ನ್ಯೂಸ್‌ ಎಕ್ಸ್‌ ತನ್ನ ಚುನಾವಣೆ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದೆ.

ಎನ್​ಡಿ ಟಿವಿ ಎಕ್ಸಿಟ್ ಪೋಲ್ ಎನ್​ಡಿ ಟಿವಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜೆಪಿಪಿ 128 ರಿಂದ 148 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬಹುದು ಎಂದು ಅಂದಾಜಿಸಿದೆ. ಕಾಂಗ್ರೆಸ್ 30 ರಿಂದ 42 ಸ್ಥಾನಗಳಲ್ಲಿ ಗೆಲ್ಲಬಹುದು. ಇನ್ನು ಆಮ್ ಆದ್ಮಿ 2 ರಿಂದ 4 ಸ್ಥಾನಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಎನ್​ಡಿ ಡಿವಿ ತನ್ನ ಚುನಾವಣೆ ಸಮೀಕ್ಷೆಯಲ್ಲಿ ತಿಳಿಸಿದೆ.

Published On - 7:26 pm, Mon, 5 December 22

ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ