ಕೈ ನಾಯಕರ ಹಳೇ ಕೇಸ್ ಕೆದಕಿದ ಬಿಜೆಪಿ, ಈ 16 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್ಗೆ ಸವಾಲ್
ರೌಡಿ ವಿಚಾರವನ್ನ ಅಸ್ತ್ರವನ್ನಾಗಿ ಬಳಸಿಕೊಂಡಿರೋ ಕೈ ಪಡೆ, ಬಿಜೆಪಿಯತ್ತ ರೌಡಿ ಆಯುಧವನ್ನ ಬಾಣದಂತೆ ಬಿಡುತ್ತಿದೆ. ಇದರಿಂದ ರೊಚ್ಚಿದ್ದಿರುವ ಬಿಜೆಪಿ ಕೈ ನಾಯಕರ ಹಳೇ ಕೇಸ್ ಕೆದಕಿ ಪಟ್ಟಿ ಮಾಡಿದ್ದು, ಈ 16 ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್ಗೆ ಸವಾಲ್ ಹಾಕಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯ (Karnataka Politics) ಅಖಾಡದಲ್ಲಿ ರೌಡಿ ಪಾಲಿಟಿಕ್ಸ್ ತಾರಕಕ್ಕೇರಿದೆ. ರೌಡಿಶೀಟರ್‌ಗಳಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿಗೆ (BJP), ಕಾಂಗ್ರೆಸ್ ಗುನ್ನಾ ಕೊಡುತ್ತಿದೆ. ರೌಡಿ ವಿಚಾರವನ್ನ ಅಸ್ತ್ರವನ್ನಾಗಿ ಬಳಸಿಕೊಂಡಿರೋ ಕೈ ಪಡೆ, ಬಿಜೆಪಿಯತ್ತ ರೌಡಿ ಆಯುಧವನ್ನ ಬಾಣದಂತೆ ಬಿಡುತ್ತಿದೆ. ಬಿಜೆಪಿಯೂ ಇದಕ್ಕೆ ಟಕ್ಕರ್ ಕೊಡುತ್ತಿದ್ದು, 16 ಪ್ರಶ್ನೆಗಳಿಗೆ ಉತ್ತರಿಸುವಂತೆ ಬಿಜೆಪಿ, ಮಾಧ್ಯಮ ಪ್ರಕಟಣೆ ಮೂಲಕ ಕಾಂಗ್ರೆಸ್ಗೆ Congress) ಸವಾಲು ಹಾಕಿದೆ. ಕಂಗ್ರೆಸ್ಗೆ ಬಿಜೆಪಿ ಕೇಳಿರುವ 16 ಪ್ರಶ್ನೆಗಳ ಈ ಕೆಗಳಗಿನಂತಿವೆ.
ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಯಾಗುತ್ತಿರುವ 60 ರೌಡಿಗಳು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
1. ದೇವರಾಜ್ ಅರಸು ಕಾಲದಲ್ಲಿ ಅವತ್ತಿನ ಭೂಗತ ರೌಡಿಗಳೊಂದಿಗೆ ಪವಿತ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತುಕೊಂಡು ಪೊಲೀಸರಿಂದ ಎಳನೀರು ತರಿಸಿ ಕೊಡುತ್ತಿದ್ದವರು ಯಾವ ಪಕ್ಷದಲ್ಲಿದ್ದರು ಎಂದು ಹೇಳಬಹುದೇ ಸಿದ್ದರಾಮಯ್ಯ ಅವರೇ…?
2. ಯಲಹಂಕದ ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಅವರನ್ನು ಸೋಲಿಸಲು ಆಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಮನೆಯಲ್ಲೇ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಬಿಡುಗಡೆ ಆಗಿದ್ದರ ಬಗ್ಗೆ ಏನು ಹೇಳುತ್ತೀರಿ ಸಿದ್ದರಾಮಯ್ಯ ಅವರೇ..?
3. ಯಾರೋ ಕೆಲವರು ಕಾಂಗ್ರೆಸ್ ಪಕ್ಷದ ಬ್ಯಾನರ್ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ತಾವು ಆವಾಜ್ ಹಾಕಿದ್ದು ಯಾವ ಸಂಸ್ಕೃತಿ ಡಿ.ಕೆ. ಶಿವಕುಮಾರ್ ಅವರೇ..?
4. ಟಿಪ್ಪು ಕುರಿತು ನಿಮ್ಮ ಕುರುಡು ಪ್ರೇಮವನ್ನು ಖಂಡಿಸಿ ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ತಾವು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣ ಅಲ್ಲವೇ ಸಿದ್ದರಾಮಯ್ಯ ಅವರೇ…?
5. ಕರ್ನಾಟಕ ಕಾಂಗ್ರೆಸ್ನ ಯುವ ಘಟಕದ ಈಗಿನ ಅಧ್ಯಕ್ಷರು ತಮ್ಮ ಗ್ಯಾಂಗ್ ಜತೆ ಸೇರಿಕೊಂಡು ಒಬ್ಬ ಪಾಪದ ಹುಡುಗನಿಗೆ ಹಿಗ್ಗಾ ಮುಗ್ಗಾ ಬಡಿದಿದ್ದನ್ನು ಇಡೀ ರಾಜ್ಯ ನೋಡಿರುವುದು ಸುಳ್ಳು ಎನ್ನುತ್ತೀರೇ ಡಿ.ಕೆ. ಶಿವಕುಮಾರ್ ಅವರೇ…?
6. ಪ್ರತಿಭಟನೆ ಮಾಡೋಕೆ ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ನಿಮ್ಮ ಪರಮಾಪ್ತ ಶಾಸಕ ರಮೇಶ್ ಕುಮಾರ್ ಹೇಳಿದ್ದು ತಾವು ಓದಿದ ಪ್ರಜಾಪ್ರಭುತ್ವದ ಯಾವ ಪುಸ್ತಕದ ಯಾವ ಹಾಲೆಯಲ್ಲಿದೆ ತಿಳಿಸಬಹುದೇ ಸಿದ್ದರಾಮಯ್ಯ ಅವರೇ?
7. ಅಖಿಲ ಭಾರತ ಕಾಂಗ್ರೆಸ್ ಘಟಕದ ಅಧ್ಯಕ್ಷರು ದೆಹಲಿಗೆ ಓಡಿಹೋಗಿ ಅವಿತುಕೊಳ್ಳುವುದಕ್ಕೂ ಮೊದಲು ಆದ್ಯಾವ್ಯಾಯ ಸಾಮಾಜಿಕ ಸೇವೆಗಳಲ್ಲಿ ತೊಗಿಸಿಕೊಂಡಿದ್ದರು ಎನ್ನುವುದು ತಮಗೆ ತಿಳಿದಿಲ್ಲವೇ ಡಿ.ಕೆ. ಶಿವಕುಮಾರ್ ಅವರೇ?
8. ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ಪ ಕುಖ್ಯಾತ ರೌಡಿ ಇಲ್ಯಾಸ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಅಷ್ಟೇ ಅಲ್ಲದೆ ಶಾಸಕ ಯು ಟಿ ಖಾದರ್ ಆಪ್ತ ಹೌದೋ ಅಲ್ಲವೋ ಉತ್ತರಿಸಬಹುದೇ ಸಿದ್ದರಾಮಯ್ಯ ಅವರೇ?
9. ಮೂಡುಬಿದರೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮ್ಮ ಶಿಷ್ಯ ಮಿಥುನ್ ರೈ
ಹಿನ್ನೆಲೆ ಏನು ಎಂದು ತಿಳಿಸಬಹುದೇ ಡಿ.ಕೆ. ಶಿವಕುಮಾರ್ ಅವರೇ?
10. ‘ಬಿಜೆಪಿಯವರು ಯಾರೂ ಕ್ಷೇತ್ರದಲ್ಲಿ ಓಡಾಡದ ಹಾಗೆ ಮಾಡ್ತೀನಿ’ ಎಂದು ತಮ್ಮ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿರುವುದು ಭಗವಾನ್ ಬುದ್ಧರ ಅದ್ಯಾವ ಉಪದೇಶದಲ್ಲಿ ಇದೆ ಹೇಳು ಎಂದು ಪ್ರಶ್ನೆ ಮಾಡಿದ್ದೀರ ಸಿದ್ದರಾಮಯ್ಯ ಅವರೇ?
II. ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಕಾರ್ಪೊರೇಟರ್ ಮಾಡಿದ್ದ ಕೆ. ಎಸ್. ಸಮಿವುಲ್ಲಾ ಹಿನ್ನೆಲೆ ಏನು ಎಂದು ಸ್ವಲ್ಪ ತಮ್ಮ ಬಾಯಿಂದಲೇ ಹೇಳಬಹುದೇ ಡಿ.ಕೆ. ಶಿವಕುಮಾರ್ ಆವರೇ?
12. ಸ್ವತಃ ತಾವೇ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಮಾಜಿ ಕಾರ್ಪೊರೆ 2 ಸೀಮಾ ಅವರ ಗಂಡ ಹಾಗೂ ಕೆಪಿಸಿಸಿ ಲೇಬರ್ ಸೆಲ್ ಸದಸ್ಯ ಅಲ್ತಾಫ್ ಖಾನ್ ಒಬ್ಬ – ಶೀಟರ್ ಅಷ್ಟೇ ಅಲ್ಲದೇ ತಮ್ಮ ಶಿಷ್ಯ ಜಮೀರ್ ಅಹಮ್ಮದ್ ಖಾನ್ ಅವರ ಅತ್ಯಾಪ್ತ ಎನ್ನುವುದು ಗೊತ್ತಿಲ್ಲವೇ ಸಿದ್ದರಾಮಯ್ಯ ಅವರೇ?
13, ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ಜತೆ ರೌಡಿ ಶೀಟರ್ಗಳು ಪೋಸ್ ಕೊಟ್ಟು ಏರಿಯಾದಲ್ಲೆಲ್ಲ ಪೋಸ್ಟರ್ ಅಂಟಿಸಿಕೊಳ್ಳುತ್ತಾರಲ್ಲ, ಅದು ಯಾವ ಜನಸೇವೆ ಎನ್ನುವುದನ್ನು ತಿಳಿಸಿ..?
14. ತಾವು ಟಿ. ನರಸೀಪುರ ಶಾಸಕನನ್ನಾಗಿ ಮಾಡಲು ಹೊರಟಿರುವ ಸುನಿಲ್ ಬೋಸ್ ಎಂಬ ಕಾಂಗ್ರೆಸ್ ನಾಯಕನ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಬುಕ್ ಆಗಿತ್ತು ಎನ್ನುವುದು ಮರೆತು ಹೋಗಿದೆಯೇ ಸಿದ್ದರಾಮಯ್ಯ ಅವರೇ?
15. ಕಾಂಗ್ರೆಸ್ ಮಾಜಿ ಮಂತ್ರಿ ಮತ್ತು ಶಾಸಕ ವಿನಯ್ ಕುಲಕರ್ಣಿ ಇನ್ನು ಯಾವ ಕಾರಣಕ್ಕಾಗಿ ಕೋರ್ಟಿಗೆ ಅಲೆಯುತ್ತಿದ್ದಾರೆ? ಯಾವ ಸಮಾಜ ಸೇವೆಯನ್ನು ಮಾಡಿದ ಘನಾಂಧಾರಿ ಕೆಲಸಕ್ಕಾಗಿ ಧಾರವಾಡ ಜಿಲ್ಲೆಗೆ ನಿಬರ್ಂಧ ಹೇರಲಾಗಿದೆ ಎಂದು ತಿಳಿಸಬಹುದೇ ಡಿ.ಕೆ. ಶಿವಕುಮಾರ್ ಅವರೇ?
16. ತಮ್ಮ ಆಪ್ತ ಮಾಜಿ ಸಚಿವ ಕೆ.ಜೆ. ಜಾರ್ಜ್ ಜತೆಯಾಗಿ ಬೆಂಗಳೂರು ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡಿದ್ದ ಕುಖ್ಯಾತ ರೌಡಿ ‘ಬ್ರಿಗೇಡ್ ಆಝಮ್’ ಕುರಿತು ತಮಗೆ ಮಾಹಿತಿ ಇರಲಿಲ್ಲವೇ ಸಿದ್ದರಾಮಯ್ಯ ಅವರೇ.?
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ