ಬಿಜೆಪಿಗೆ ಸೇರ್ಪಡೆಯಾಗುತ್ತಿರುವ 60 ರೌಡಿಗಳು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್

ಕಾಂಗ್ರೆಸ್ ಪಕ್ಷವು ಮೊದಲ ಕಂತಿನ ರೌಡಿಶೀಟರ್ ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 60 ರೌಡಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದು 10 ಮಂದಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಖಚಿತವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗುತ್ತಿರುವ 60 ರೌಡಿಗಳು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
ಬಿಜೆಪಿಗೆ ಸೇರ್ಪಡೆಯಾಗುತ್ತಿರುವ 60 ರೌಡಿಗಳು: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
Follow us
TV9 Web
| Updated By: Rakesh Nayak Manchi

Updated on:Dec 06, 2022 | 2:09 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರೌಡಿಗಳು (Rowdies) ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳುತ್ತಿರುವ ಬಗ್ಗೆ ಭಾರೀ ಚರ್ಚೆ ಹಾಗೂ ಟೀಕೆಗಳಿಗೆ ಕಾರಣವಾಗುತ್ತಿದೆ. ಬಿಜೆಪಿಗೆ ಹಾಲಿ, ಮಾಜಿ ರೌಡಿಗಳು ಸೇರಿಕೊಳ್ಳುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷವು ಮೇಲಿಂದ ಮೇಲೆ ಬಿಜೆಪಿಯ ಕಾಲೆಳೆಯುವ ಯತ್ನ ಮಾಡುತ್ತಲೇ ಇದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಟಕ್ಕರ್ ಕೊಡುತ್ತಿದ್ದಾರೆ. ಇದೀಗ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ (M.Lakshman) ಅವರು ಬಿಜೆಪಿ ಸೇರುತ್ತಿರುವ ರೌಡಿಗಳ ಪಟ್ಟಿ (List of rowdies)ಯನ್ನು ಬಿಡುಗಡೆ ಮಾಡಿದ್ದಾರೆ. ಮೊದಲ ಕಂತಿನ ರೌಡಿಶೀಟರ್​ಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 60 ಮಂದಿ ರೌಡಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಈ ಪೈಕಿ 10 ಮಂದಿಗೆ ಎಂಎಲ್​ಎ ಟಿಕೆಟ್ (BJP MLA Tickets) ಕೊಡುವುದು ಖಚಿತವಾಗಿದೆ ಎಂದು ಆರೋಪಿಸಿದ್ದಾರೆ.

2018ರಲ್ಲಿ ರಾಜ್ಯಾದ್ಯಂತ ರೌಡಿಗಳ ಸಂಖ್ಯೆ 22 ಸಾವಿರ ಇತ್ತು. ಈ ಪೈಕಿ ಬೆಂಗಳೂರಿನಲ್ಲೇ 3 ಸಾವಿರ ರೌಡಿಗಳಿದ್ದರು. ಈಗ ರೌಡಿಗಳ ಸಂಖ್ಯೆ 6620 ಇದ್ದು ಇದರಲ್ಲಿ ಸಕ್ರಿಯರಾಗಿರುವ ರೌಡಿಗಳ ಸಂಖ್ಯೆ 1ಸಾವಿರ ಆಗಿದೆ. ರಾಜ್ಯದಲ್ಲಿ ಸಕ್ರಿಯರಾಗಿರುವ ರೌಡಿಗಳ ಸಂಖ್ಯೆ 8 ಸಾವಿರ ಆಗಿದೆ. ಇದು ರಾಜ್ಯದ 188 ಠಾಣೆಗಳಲ್ಲಿನ ರೌಡಿಶೀಟರ್​ಗಳ ವಿವರವಾಗಿದೆ ಎಂದು ಎಂ ಲಕ್ಷ್ಮಣ್ ಹೇಳಿದರು.

ಇದನ್ನೂ ಓದಿ: Karnataka Election: ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ ನಡೆ ಕ್ರಿಶ್ಚಿಯನ್ ಸಮುದಾಯದ ಶಾಲೆಯ ಕಡೆ

ರಾಜ್ಯದಲ್ಲಿ ಸುಮಾರು 150 ರೌಡಿಗಳ ಸೇರ್ಪಡೆ

ಬಿಜೆಪಿಯವರು ಈಗ ರೌಡಿಮೋರ್ಚಾ ಮಾಡಿಕೊಳ್ಳುತ್ತಿದ್ದಾರೆ. ಸದ್ಯ 26 ರೌಡಿಗಳು ಈಗಾಗಲೇ ಬಿಜೆಪಿ ಸೇರಿಕೊಂಡಿದ್ದು, ರಾಜ್ಯದಲ್ಲಿ ಸುಮಾರು 150 ರೌಡಿಗಳ ಸೇರ್ಪಡೆ ಆಗಿದೆ. ಸೈಲೆಂಟ್ ಸುನಿಲ ಹಾಗೂ 9 ಮಂದಿ ಇತರ ಸಹಚರರು, ವಿಲ್ಸನ್ ಗಾರ್ಡನ್ ನಾಗ ಮತ್ತು ಇತರ 6 ಮಂದಿ, ಫೈಟರ್ ರವಿ ಜೊತೆಗೆ 5 ಮಂದಿ, ಬೆತ್ತನಗೆರೆ ಶಂಕರ್ ಜೊತೆಗೆ 8 ಮಂದಿ ಸಹಚರರು ಸೇರ್ಪಡೆಯಾಗಿದ್ದಾರೆ. ನಲ್ಲೂರು ಶಂಕರೇಗೌಡ ಅಂತ ಹೆಸರು ಬದಲಾಯಿಸಿದ್ದಾರೆ ಎಂದು ಹೇಳಿದರು.

ಒಂಟೆ ರೋಹಿತ್ ಮತ್ತು ಸಹಚರರು, ಕುಣಿಗಲ್ ಗಿರಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ ಆನೇಕಲ್ ನಾಮನಿರ್ದೇಶಿತ ಸದಸ್ಯ, ಸೈತಾನ್ ರವಿ ಚಿಕ್ಕಮಗಳೂರು, ಪ್ರತಾಪ್ ಸಿಂಹ ರನ್ನು ಪೇಟೆ ರೌಡಿ ಅಂತ ಸುಮಲತಾ ಕರೆದಿದ್ದಾರೆ. ಕಿರಣ್ ಗೌಡ ಪ್ರತಾಪ್ ಸಿಂಹ ಹಿಂಬಾಲಕ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದಾರೆ.

ಮುಂದಿನ 26 ಮಂದಿಯ ಪಟ್ಟಿ ಮತ್ತೆ ಬಿಡುಗಡೆ

ಇದು ಇವತ್ತಿನ ಪಟ್ಟಿ, ಮುಂದಿನ 26 ಮಂದಿಯ ಪಟ್ಟಿ ಮತ್ತೆ ಬಿಡುಗಡೆ ಮಾಡುತ್ತೇವೆ. ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಆರ್​​ಎಸ್​ಎಸ್ ಕಡೆಯಿಂದ ಸೂಚನೆ ಇದೆ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ. ಗುಜರಾತ್ ಹಾಗೂ ಬೇರೆ ಕಡೆ ಇದೆ ಪ್ರಯೋಗ ಮಾಡಿದ್ದರು. ಬಿಜೆಪಿ ನಾಯಕರು ಹೋಗದೇ ಇರುವ ಕಡೆ ರೌಡಿಗಳನ್ನು ಕಳಿಸುತ್ತೇವೆ ಅಂತ ಬಿಜೆಪಿಯ ಸ್ನೇಹಿತರು ಹೇಳುತ್ತಿದ್ದಾರೆ ಎಂದು ಎಂ. ಲಕ್ಷ್ಮಣ್ ಹೇಳಿದರು.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ರಾ ಹಳ್ಳಿಹಕ್ಕಿ ಹೆಚ್‌.ವಿಶ್ವನಾಥ್?

ರೌಡಿಗಳಿಂದ ರೌಡಿಗಳಿಗಾಗಿ ರೌಡಿಗಳಿಗೋಸ್ಕರ ಎಂಬುದೇ ಬಿಜೆಪಿಯ ಘೋಷಾವಾಕ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿರುವುದು ಕೇವಲ ಮೇಲ್ನೋಟಕ್ಕೆ ಮಾತ್ರ. ಸಿಟಿ ರವಿ ಹತಾಶರಾಗಿ ದಿನಬೆಳಗೆದ್ದು ಹೇಳಿಕೆ ಕೊಡುತ್ತಿದ್ದಾರೆ. 60 ಮಂದಿ ರೌಡಿಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯ 10 ಮಂದಿ ರೌಡಿಗಳಿಗೆ ಟಿಕೆಟ್ ಕೊಡುವ ಬಗ್ಗೆ ಬಿಜೆಪಿ ಖಚಿತಪಡಿಸಿದೆ. ರೌಡಿಗಳಿಂದ ರೌಡಿಗಳಿಗಾಗಿ ರೌಡಿಗಳಿಗೋಸ್ಕರ ಎಂಬುದೇ ಬಿಜೆಪಿಯ ಘೋಷವಾಕ್ಯವಾಗಿದೆ ಎಂದು ಆರೋಪಿಸಿದರು.

ನಳಿನ್ ಕುಮಾರ್ ಕಟೀಲ್ ಏನು ಹೇಳುತ್ತಾರೆಯೋ ಅದರ ವಿರುದ್ಧ ನಾವು ಅರ್ಥ ಮಾಡಿಕೊಳ್ಳಬೇಕು. ರೌಡಿ ಅಂದರೆ ಹಫ್ತಾ ವಸೂಲಿ, ರೇಪ್ ಮಾಡುವ ಸಂಚು, ಕೊಲೆ ಮಾಡುವುದು ಇದನ್ನು ಮಾಡುವುದಕ್ಕೆ ರೌಡಿಶೀಟರ್​ಗಳು ಅಂತಾರೆ. 150 ಜನರ ಪಟ್ಟಿಯನ್ನು ಕೊಟ್ಟು ರೌಡಿಶೀಟ್​ನಿಂದ ತೆಗೆಯುವುದಕ್ಕೆ ಗೃಹ ಸಚಿವರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಗೃಹಸಚಿವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಲಕ್ಷ್ಮಣ್ ಅವರು ಆರೋಪಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:09 pm, Tue, 6 December 22