ಟಾಯ್ಲೆಟ್ ಬಳಸದಿದ್ರೆ.. ಕಟ್, ಕಟ್! ರೇಷನ್, ವಿದ್ಯುತ್ ಕಟ್: CS ವಿಜಯ ಭಾಸ್ಕರ್

|

Updated on: Dec 21, 2019 | 3:09 PM

ಯಾದಗಿರಿ: ಶೌಚಾಲಯ ಬಳಸದ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಫುಲ್ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ. ಬಹಿರ್ದೆಸೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಶೌಚಾಲಯ ಬಳಕೆ ಬಗ್ಗೆ ಅವರು ಪಾಠ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿ ನಡೆದಿದೆ. ಶೌಚಾಲಯ ಇದ್ದರೂ ಬಳಸದ ಗ್ರಾಮಸ್ಥರು.. ಶೌಚಾಲಯ ಬಳಸದಿದ್ರೆ ರೇಷನ್ ಕಾರ್ಡ್, ವಿದ್ಯುತ್ ಕಟ್ ಮಾಡುವುದಾಗಿ ಸಿಎಸ್​ ವಿಜಯ ಭಾಸ್ಕರ್ ವಾರ್ನಿಂಗ್ ಮಾಡಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಪ್ರೊತ್ಸಾಹ ಧನ ಮರುಪಾವತಿ ಮಾಡಿಸುವಂತೆ […]

ಟಾಯ್ಲೆಟ್ ಬಳಸದಿದ್ರೆ.. ಕಟ್, ಕಟ್! ರೇಷನ್, ವಿದ್ಯುತ್ ಕಟ್: CS ವಿಜಯ ಭಾಸ್ಕರ್
Follow us on

ಯಾದಗಿರಿ: ಶೌಚಾಲಯ ಬಳಸದ ಸಾರ್ವಜನಿಕರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಫುಲ್ ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ. ಬಹಿರ್ದೆಸೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಶೌಚಾಲಯ ಬಳಕೆ ಬಗ್ಗೆ ಅವರು ಪಾಠ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿ ನಡೆದಿದೆ.

ಶೌಚಾಲಯ ಇದ್ದರೂ ಬಳಸದ ಗ್ರಾಮಸ್ಥರು..
ಶೌಚಾಲಯ ಬಳಸದಿದ್ರೆ ರೇಷನ್ ಕಾರ್ಡ್, ವಿದ್ಯುತ್ ಕಟ್ ಮಾಡುವುದಾಗಿ ಸಿಎಸ್​ ವಿಜಯ ಭಾಸ್ಕರ್ ವಾರ್ನಿಂಗ್ ಮಾಡಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಪ್ರೊತ್ಸಾಹ ಧನ ಮರುಪಾವತಿ ಮಾಡಿಸುವಂತೆ ಗ್ರಾಮಸ್ಥರಿಗೆ ಬುದ್ಧಿವಾದ ಹೇಳುತ್ತಾ ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಮತ್ತು ಡಿಸಿ ಎಂ ಕೂರ್ಮರಾವ್ ಅವರುಗಳಿಗೆ ಸೂಚನೆ ನೀಡಿದ್ದಾರೆ.

Published On - 2:59 pm, Sat, 21 December 19