ಗದಗ: ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಸದ್ಭವ ಕನ್‌ಸ್ಟ್ರಕ್ಷನ್ ಸಂಸ್ಥೆ ವಿರುದ್ಧ ಮಣ್ಣು ಲೂಟಿ ಆರೋಪ ಕೇಳಿ ಬಂದಿದೆ. ಈ ಕಂಪನಿ ಗದಗ-ಹೊನ್ನಳ್ಳಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿದೆ. ಸರ್ಕಾರದಿಂದ ಮಣ್ಣು ಗಣಿಗಾರಿಕೆಗೆ ಅನುಮತಿ ಪಡೆದಿದ್ದು ಒಂದು ಕಡೆ. ಆದ್ರೆ ಲೂಟಿ ಮಾಡುತ್ತಿರುವುದು ಹಲವು ಕಡೆ ಎಂಬ ಆರೋಪ ಈ ಕಂಪನಿ ಮೇಲಿದೆ.
ಶಿರಹಟ್ಟಿಯ ಛಬ್ಬಿ ರಸ್ತೆ, ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ, ಕಡಕೋಳ ಗ್ರಾಮದ ಗುಡ್ಡ ಸೇರಿ ಹಲವೆಡೆ ಡಿಸಿ, ಎಸಿ ಹೆಸರು ಹೇಳಿಕೊಂಡು ಸದ್ಭವ ಕನ್‌ಸ್ಟ್ರಕ್ಷನ್ ಕಂಪನಿ ಅಧಿಕಾರಿಗಳು ಮಣ್ಣು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಗಣಿ ಇಲಾಖೆಗೆ ಜನರು ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇನ್ನು ಸದ್ಭವ ಕಂಪನಿ ಕೃಷಿ ಜಮೀನು ಪರಿವರ್ತನೆ ಮಾಡದೇ ಕ್ರಷರ್ ಘಟಕ ಮಾಡಿದೆಯಂತೆ. ಹೀಗಾಗಿ ಕಂಪನಿ ಅಂಧಾ ದರ್ಬಾರ್ಗೆ ಬ್ರೇಕ್ ಹಾಕಬೇಕು. ಕಂಪನಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗೇಣಿಗೆ ಭೂಮಿ ಕೊಟ್ಟು ಸುಮ್ಮನಿರುವ ಅಧಿಕಾರಿಗಳು; ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ನಷ್ಟ
Published On - 8:49 am, Sun, 10 January 21