ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ಟ್ರಾಕ್ಟರ್ ಹತ್ತಿಸಿ ತಾಯಿ-ತಂಗಿಯ ಹತ್ಯೆಗೈದ ಆರೋಪಿ ಬಂಧನ
ತವರು ಮನೆಯ ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ತಂಗಿ ಹಾಗೂ ತಾಯಿಯ ಮೇಲೆ ಟ್ರಾಕ್ಟರ್ ಹತ್ತಿಸಿ ಯಕ್ಕೆಗುಂದಿ ಗ್ರಾಮದಲ್ಲಿ ಕೊಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ: ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕೆ ತಂಗಿ ಹಾಗೂ ತಾಯಿಯ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಿದ ಘಟನೆ ಹರಿಹರ ತಾಲೂಕಿನ ಯಕ್ಕೆಗುಂದಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಭರಮಗೌಡ(43) ಎಂದು ತಿಳಿದು ಬಂದಿದೆ.
ಭರಮ ಗೌಡನ ತಾಯಿ ಸರೋಜಮ್ಮ(64) ಮತ್ತು ತಂಗಿ ಜ್ಯೋತಿ(41) ಮೃತ ದುರ್ದೈವಿಗಳು. ತವರು ಮನೆಯ ಆಸ್ತಿಯಲ್ಲಿ ತಂಗಿ ಜ್ಯೋತಿ ಪಾಲು ಕೇಳಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆತ್ತ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ ಆರೋಪಿ ಭರಮಗೌಡ ತಲೆ ಮರೆಸಿಕೊಂಡಿದ್ದಾನೆ. ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Published On - 9:40 am, Sun, 10 January 21