ಮಲಗಿದ್ದ ವ್ಯಕ್ತಿಯ ಮೈ ಮೇಲೆ ಹರಿದ ಕಾಳಿಂಗ ಸರ್ಪ.. ಮುಂದೇನಾಯ್ತು?
ಮಲಗಿದ್ದ ವ್ಯಕ್ತಿಯ ಮೈಮೇಲೆ ಕಾಳಿಂಗ ಸರ್ಪ ಹರಿದು ಹೋದ ಅಪರೂಪದ ಭಯಾನಕ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು: ಮಲಗಿದ್ದ ವ್ಯಕ್ತಿಯ ಮೈಮೇಲೆ ಕಾಳಿಂಗ ಸರ್ಪ ಹರಿದು ಹೋಗಿದ್ದು ಹಾವನ್ನು ಸೆರೆ ಹಿಡಿದಿರುವ ಅಪರೂಪದ ಭಯಾನಕ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಾಗ ಎಂಬುವವರು ಮಲಗಿದ್ದ ವೇಳೆ ಕಿಂಗ್ ಕೋಬ್ರಾ ಅವರ ಬಳಿ ಬಂದು ಬುಸುಗುಟ್ಟಿದೆ. ಬಳಿಕ ಅವರ ಹೆಗಲನ್ನು ಸ್ಪರ್ಶಿಸಿದೆ. ಏನೂ ತಣ್ಣನೆಯ ಅನುಭವವಾದಂತಾಗಿ ನಾಗ ಎಂಬುವವರು ನಿದ್ದೆಯಿಂದ ಎದ್ದಿದ್ದಾರೆ. ಬಳಿಕ ಕಪ್ಪು ಕಾಳಿಂಗ ಹಾವನ್ನು ಕಂಡು ಕೂಗಾಡಿದ್ದಾರೆ. ತಕ್ಷಣ ನಿದ್ದೆಯಿಂದ ಜಾಗೃತರಾದ ಮನೆ ಮಂದಿ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದು ಸ್ನೇಕ್ ಅರ್ಜುನ್ ಎಂಬುವರನ್ನು ಮನೆಗೆ ಕರಿಸಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ.
ಅಡಿಕೆ ಗೇಣಿ ಮನೆಯಲ್ಲಿ ಸೇರಿಕೊಂಡು ಆತಂಕ ಸೃಷ್ಟಿಸಿದ ಹಾವು ಇನ್ನು ಇದೇ ರೀತಿಯ ಮತ್ತೊಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹಾವೊಂದು ಅಡಿಕೆ ಗೇಣಿ ಮನೆಯಲ್ಲಿ ಸೇರಿಕೊಂಡು ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ವಿರೇಶ್ ಎಂಬುವವರ ಅಡಿಕೆ ಸಂಗ್ರಹದ ಸ್ಥಳದಲ್ಲಿ ಹಾವೊಂದು ಸೇರಿಕೊಂಡು ಹೊರ ಬಾರದೆ ರೈತನ ಕುಟುಂಬಕ್ಕೆ ಆತಂಕ ಸೃಷ್ಟಿಸಿತ್ತು. ಬಳಿಕ ಸ್ನೇಕ್ ಸುರೇಶ್ ಎಂಬುವವರು ಹಾವು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಉರಗ ಸಂರಕ್ಷಣೆಯನ್ನೇ ಕಾಯಕವಾಗಿಸಿಕೊಂಡ ಸ್ನೇಕ್ ಹರೀಶ್.. ‘ಹಾವು ಹಿಡಿಯುವುದು ಕಲೆ’ ಎನ್ನುತ್ತಾರೆ!