‘ಮಿಕ್ಸೋಪತಿ’ ವಿರುದ್ಧ ತಿರುಗಿಬಿದ್ದ IMA ರಾಜ್ಯ ಘಟಕ: ಫೆ.1ರಿಂದ ಉಪವಾಸ ಸತ್ಯಾಗ್ರಹಕ್ಕೆ ವೈದ್ಯರ ತೀರ್ಮಾನ

|

Updated on: Jan 31, 2021 | 7:44 PM

ಕೇಂದ್ರದ ‘ಮಿಕ್ಸೋಪತಿ’ ನೀತಿ ವಿರುದ್ಧ IMA ರಾಜ್ಯ ಘಟಕ ತಿರುಗಿಬಿದ್ದಿದೆ. ಹಾಗಾಗಿ, ಫೆ.1ರಿಂದ 14ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

‘ಮಿಕ್ಸೋಪತಿ’ ವಿರುದ್ಧ ತಿರುಗಿಬಿದ್ದ IMA ರಾಜ್ಯ ಘಟಕ: ಫೆ.1ರಿಂದ ಉಪವಾಸ ಸತ್ಯಾಗ್ರಹಕ್ಕೆ ವೈದ್ಯರ ತೀರ್ಮಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೇಂದ್ರದ ‘ಮಿಕ್ಸೋಪತಿ’ ನೀತಿ ವಿರುದ್ಧ IMA ರಾಜ್ಯ ಘಟಕ ತಿರುಗಿಬಿದ್ದಿದೆ. ಹಾಗಾಗಿ, ಫೆ.1ರಿಂದ 14ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸರಣಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭಾರತೀಯ ವೈದ್ಯಕೀಯ ಮಂಡಳಿಯ ರಾಜ್ಯ ಘಟಕ ಮಾಹಿತಿ ನೀಡಿದೆ. ಪಿ.ಜಿ ಆಯುರ್ವೇದದಲ್ಲಿ ಹೊಸದಾಗಿ 2 ಕೋರ್ಸ್​ ಸೇರ್ಪಡೆ ಮಾಡಲಾಗಿದೆ. ಆಯುರ್ವೇದದಲ್ಲಿ ಶಲ್ಯ ತಂತ್ರ ಹಾಗೂ ಶಾಲ್ಯಕ ತಂತ್ರ ಎಂಬ ಎರಡು ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ, ಆಧುನಿಕ ಶಸ್ತ್ರಚಿಕಿತ್ಸೆ ಮಾಡುವುದನ್ನು ಹೇಳಿಕೊಡಲಾಗುತ್ತದೆ. ಆದರೆ, MBBS ಓದದೆ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯಕಾರಿ ಎಂದು ಅಲೋಪತಿ ವೈದ್ಯರು ವಾದ ಮಾಡಿದ್ದಾರೆ.

ಈ ಕುರಿತು, ಡಿ.11ರಂದು ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ರಾಜ್ಯದ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ನಡೆಸಿದ್ದರು. ಇದೀಗ ಸರಣಿ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ IMA ವೈದ್ಯರು ತಮ್ಮ ಕಚೇರಿಯಲ್ಲಿ ನಾಳೆಯಿಂದ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ತಿಳಿಸಿದೆ.

ಫೆಬ್ರವರಿ 14ರವರೆಗೆ ವೈದ್ಯರ ಸರಣಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಆದರೆ, ಒಪಿಡಿ ಸೇವೆ ಇರಲಿದೆ, ಸೇವೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ ರಾಜ್ಯ ಘಟಕ ಮಾಹಿತಿ ನೀಡಿದೆ.

ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ