ಬೀದರ್ ನಗರಸಭೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್​ನ 7 ಸದಸ್ಯರಿಗೆ ಗೆಲುವು

|

Updated on: Apr 30, 2021 | 3:38 PM

ಮತಗಟ್ಟೆಯ ಬಳಿಯೇ ನಿಯಮ ಉಲ್ಲಘಿಸಿ ನೂರಾರು ಜನ ಜಮಾವಣೆಯಾಗಿದ್ದರು. ಜನಜಂಗುಳಿ ಸೇರದಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ‌ ಆದೇಶ ಮಾಡಿದ್ದರೂ ನೂರಾರು ಜನರು ಜಮಾಯಿಸಿದ್ದರು.

ಬೀದರ್ ನಗರಸಭೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್​ನ 7 ಸದಸ್ಯರಿಗೆ ಗೆಲುವು
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಬೀದರ್: ಬೀದರ್ ನಗರ‌ಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್​ 15 ಸ್ಥಾನ, ಬಿಜೆಪಿ 8, ಜೆಡಿಎಸ್ 7, ಆಮ್​ಆದ್ಮಿ ಪಕ್ಷ 1 ಮತ್ತು ಎಂಐಎಂ ಪಕ್ಷದ ಇಬ್ಬರು ಸದಸ್ಯರು ಗೆಲುವು ಸಾಧಿಸಿದ್ದಾರೆ. ಈ ಮುನ್ನವೇ ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರಸಭೆಯ 2 ವಾರ್ಡ್​ಗಳಿಗೆ ಚುನಾವಣೆ ನಡೆದಿರಲಿಲ್ಲ.

ಬೀದರ್ ನಗರದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿಯೇ ಕೊವಿಡ್ ನಿಯಮ ಉಲ್ಲಂಘನೆಯಾಗಿದ್ದು ಕಂಡುಬಂತು. ಮತಗಟ್ಟೆಯ ಬಳಿಯೇ ನಿಯಮ ಉಲ್ಲಘಿಸಿ ನೂರಾರು ಜನ ಜಮಾವಣೆಯಾಗಿದ್ದರು. ಜನಜಂಗುಳಿ ಸೇರದಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ‌ ಆದೇಶ ಮಾಡಿದ್ದರೂ ನೂರಾರು ಜನರು ಜಮಾಯಿಸಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ರಾಜ್ಯದ ಜನತೆ ಕಾಂಗ್ರೆಸ್ ‌ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸ್ಥಳಿಯ ಸಂಸ್ಥೆಯ ಹತ್ತು ಕಡೆ ಕಾಂಗ್ರೆಸ್ ಗೆಲುವು ‌ಸಾಧಿಸಿದೆ. ಹತ್ತು ಸ್ಥಳೀಯ ಸಂಸ್ಥೆಗಳಲ್ಲಿ ಏಳು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮಡಿಕೇರಿಯಲ್ಲಿ ಮಾತ್ರ ನಾವು ಸೋತಿದ್ದೇವೆ. ಎರಡು ಜೆಡಿಎಸ್ ಗೆದ್ದಿದೆ, ಒಂದೆಡೆ ಬಿಜೆಪಿ ಗೆದ್ದಿದೆ. ಹೀಗಾಗಿ ಕಾಂಗ್ರೆಸ್​ಗೆ ಬಹುಮತ ಬಂದಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೆವು. ಈಗ ಸ್ಥಳೀಯ ಸಂಸ್ಥೆಯಲ್ಲಿ ನಾವು ಗೆದ್ದಿದ್ದೇವೆ. ಇದು ರಾಜ್ಯದ ಒಟ್ಟಾರೆ‌ ಫಲಿತಾಂಶವಾಗಿದ್ದು, ರಾಜ್ಯದಲ್ಲಿ ಬದಲಾವಣೆಯಾಗಬೇಕು ಅಂತ ಜನ ಬಯಸಿದ್ದಾರೆ ಎಂದರು. ಇದೇ ವೇಳೆ ಚುನಾವಣೆಯಲ್ಲಿ ದುಡಿದ ಎಲ್ಲ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಧನ್ಯವಾದ ತಿಳಿಸಿದರು.

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

(In Bidar Municipality Elections 2021 Congress won 15 seats BJP 8 and JDS 7 seats )

Published On - 3:36 pm, Fri, 30 April 21