ಉಸ್ತುವಾರಿ ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲಿ ನಿರ್ಲಕ್ಷ್ಯ, ಸೋಂಕಿತರಿಗೆ ಸಿಗ್ತಿಲ್ಲ ಚಿಕಿತ್ಸೆ

ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚತೆಯಿಲ್ಲ, ಸೂಕ್ತ ಬೆಡ್ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಉಸ್ತುವಾರಿ ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲಿ ನಿರ್ಲಕ್ಷ್ಯ, ಸೋಂಕಿತರಿಗೆ ಸಿಗ್ತಿಲ್ಲ ಚಿಕಿತ್ಸೆ
ಆಸ್ಪತ್ರೆಯ ಶೌಚಾಲಯಗಳಲ್ಲೂ ಅಸ್ವಚ್ಚತೆ
Ayesha Banu

|

Apr 30, 2021 | 4:04 PM

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಮಾಧುಸ್ವಾಮಿ ಸ್ವಕ್ಷೇತ್ರದಲ್ಲಿ ಸೋಂಕಿತರ ನೋವನ್ನು ಕೇಳೋರೆ ಇಲ್ಲ. ಏಕೆಂದರೆ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚತೆಯಿಲ್ಲ, ಸೂಕ್ತ ಬೆಡ್ ಇಲ್ಲದೇ ಪರದಾಡುತ್ತಿದ್ದೇವೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರಿಯಾಗಿ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ, ಆಕ್ಸಿಜನ್ ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನರ್ಸ್ಗಳನ್ನ ಕಳಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಯಾರು ನಮ್ಮನ್ನು ನೋಡುತ್ತಿಲ್ಲ. ಪ್ರತಿದಿನ ರೌಂಡ್ಸ್ ಮಾಡಬೇಕಿದ್ದ ವೈದ್ಯರು ಪತ್ತೆಯಿಲ್ಲ ಎಂದು ಸೋಂಕಿತರು ಕಣ್ಣೀರು ಹಾಕಿದ್ದಾರೆ.

ಇನ್ನು ಆಸ್ಪತ್ರೆಯ ಶೌಚಾಲಯಗಳಲ್ಲೂ ಸ್ವಚ್ಚತೆ ಮರೆಯಾಗಿದೆ. ಕಳೆದ ಮೂರು ದಿನಗಳ ಹಿಂದೆ ಕೊವಿಡ್ ಚಿಕಿತ್ಸೆಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮರನಡುಪಾಳ್ಯ ಗ್ರಾಮದ ದಂಪತಿಗಳು ಆಸ್ಪತ್ರೆಗೆ ದಾಖಲಾಗಿದ್ದು ಈ ವರೆಗೂ ದಂಪತಿಗೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ. ಅಲ್ಲದೆ ಕೆಲ ಸೋಂಕಿತರಿಗೆ ಗಂಭೀರ ಪರಿಸ್ಥಿತಿ ಇದ್ದು ರೆಮ್ ಡಿಸಿವಿಆರ್ ಲಸಿಕೆಯೂ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ 60 ಸೋಂಕಿತರಿಗೆ ಎರಡೇ ಶೌಚಾಲಯಗಳಿವೆ. ಈ ಬಗ್ಗೆ ಡಿಹೆಚ್ ಓ. ಡಾ ನಾಗೇಂದ್ರಪ್ಪರಿಗೆ ಕರೆ ಮಾಡಿದ್ರೆ, ನಮಗೆ ಕರೆ ಮಾಡಬೇಡಿ ಮಾಜಿ ಸಿಎಂ ಕುಮಾರಸ್ವಾಮಿಗೆ ಕರೆ ಮಾಡಿ ಎಂದು ಉದ್ದಟತನದಿಂದ ವರ್ತಿಸಿದ್ದಾರೆ.

ಇದನ್ನೂ ಓದಿ: ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಸಿಗದ ಬೆಡ್: 28 ವರ್ಷದ ಯುವಕ ಸಾವು

 ಬಂಡವಾಳ ಯೋಜನೆಗಳ ವೆಚ್ಚಕ್ಕಾಗಿ ಕೇಂದ್ರದಿಂದ ಹೆಚ್ಚುವರಿಯಾಗಿ 15,000 ಕೋಟಿ ರೂ. ಬಿಡುಗಡೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada