ಮಳೆ ಪೀಡಿತ ಬೆಂಗಳೂರಿನಲ್ಲಿ ‘ಫ್ರೆಷ್ ಕ್ಯಾಚ್ ಆನ್ ರೋಡ್ ಪ್ರೋಗ್ರಾಮ್!’ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಂಭ್ರಮ

| Updated By: ಸಾಧು ಶ್ರೀನಾಥ್​

Updated on: Aug 31, 2022 | 3:14 PM

ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ಸ್ವಯಂಸೇವಕರನ್ನು ಸೇವೆಗೆ ಸಜ್ಜುಗೊಳಿಸಲಾಗಿದೆ. ಮಳೆಯಿಂದಾಗಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ವಾಹನಗಳು ನಿಂತಿದ್ದು, ಪಾದಚಾರಿಗಳು ನಡೆದಾಡಲು ಪರದಾಡಿದರು.

ಮಳೆ ಪೀಡಿತ ಬೆಂಗಳೂರಿನಲ್ಲಿ ‘ಫ್ರೆಷ್ ಕ್ಯಾಚ್ ಆನ್ ರೋಡ್ ಪ್ರೋಗ್ರಾಮ್!’ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಂಭ್ರಮ
ಮಳೆ ಪೀಡಿತ ಬೆಂಗಳೂರಿನಲ್ಲಿ ‘ಫ್ರೆಷ್ ಕ್ಯಾಚ್ ಆನ್ ರೋಡ್ ಪ್ರೋಗ್ರಾಮ್!’ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಂಭ್ರಮ
Follow us on

ಕರ್ನಾಟಕದಲ್ಲಿ ಜೂನ್ 1 ರಿಂದೀಚೆಗೆ 820 ಮಿ.ಮೀ. ಮಳೆಯಾಗಿದ್ದು, 27 ಜಿಲ್ಲೆಗಳು ಮತ್ತು 187 ಹಳ್ಳಿಗಳ ಮೇಲೆ ನೇರ ಪರಿಣಾಮ ಬೀರಿದ್ದು, 29,967 ಜನರು ಸಂತ್ರಸ್ತರರಾಗಿದ್ದಾರೆ.

ನಿನ್ನೆ ಮಂಗಳವಾರ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದು, ಸಿಕ್ಕಿಬಿದ್ದ ನಾಗರಿಕರನ್ನು ಸ್ಥಳಾಂತರಿಸಲು ಅಗ್ನಿಶಾಮಕ ದಳದವರು ದೋಣಿಗಳನ್ನು ಬಳಸಿದ್ದಾರೆ. ಈ ಬಿಕ್ಕಟ್ಟು ಕೆಲವು ಸಖೇದಾಶ್ಚರ್ಯಗಳನ್ನೂ ಸೃಷ್ಟಿಸಿದೆ. ಟ್ವಿಟರ್ ಬಳಕೆದಾರರು ಜಲಾವೃತವಾಗಿರುವ ರಸ್ತೆಗಳಿಂದ ಹಿಡಿದ ಮೀನನ್ನು ರಸ್ತೆಯ ಮಧ್ಯದಲ್ಲಿ ಕ್ಯಾಮೆರಾ ಎದುರು ಹಿಡಿದು ಫೋಟೋಗಳನ್ನು ತೆಗೆಯುತ್ತಿದ್ದಾರೆ. ಮತ್ತು ಅದನ್ನು ಪ್ರಾಂಪ್ಟ್​ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಮೀನುಗಾರಿಕೆಗೆ ಸಮುದ್ರಕ್ಕೆ ಹೋಗುವ ಅಗತ್ಯವಿಲ್ಲ ಎಂದೂ ಜನರು ಉಚಿತ ಸಲಹೆ ನೀಡುತ್ತಿದ್ದಾರೆ. ಏಕೆಂದರೆ “ತಾಜಾ ಫಿಶ್ ಕ್ಯಾಚ್” (fresh catch) ಲಭ್ಯವಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ಸರ್ಕಾರವು ಜೂನ್‌ ತಿಂಗಳಿಂದೀಚೆಗೆ 7,647.13 ಕೋಟಿ ರೂಪಾಯಿಗಳಷ್ಟು ಮಳೆ-ಸಂಬಂಧಿತ ನಷ್ಟವನ್ನು ಅಂದಾಜಿಸಿದೆ.

“ಬೆಂಗಳೂರಿಗೆ ಬನ್ನಿ. ನಡುರಸ್ತೆಯಲ್ಲಿಯೇ ಈಗ ತಾಜಾ ಫಿಶ್ ಕ್ಯಾಚ್ ಸಿಗುತ್ತದೆ!” ಎಂದು ಸಮೀರ್ ಮೋಹನ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ ನದಿಯಲ್ಲಿ ದೊರೆಯುವ ಕ್ಯಾಟ್ ಫಿಶ್ (ಸ್ಥಳೀಯವಾಗಿ ಸಿಂಘರಾ ಎಂದು ಕರೆಯಲಾಗುತ್ತದೆ) ಹೋಲುವ ಮೀನನ್ನು ಹಿಡಿದಿದ್ದಾರೆ. ಅದನ್ನು ಇನ್ನೊಬ್ಬರು ಮೊಬೈಲ್ ಫೋನ್‌ನಲ್ಲಿ ಫೋಟೋ ಕ್ಲಿಕ್ ಮಾಡುತ್ತಿದ್ದಾರೆ.

ಈ ಫೋಟೋ ನೋಡಿ ಇತರ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ. “ಬೆಂಗಳೂರು -ನಿಮ್ಮ ಗ್ರಾಹಕರನ್ನು ಬೇರೆಯದ್ದೇ (ಸಮುದ್ರ) ಮಟ್ಟಕ್ಕೆ ಕೊಂಡೊಯ್ಯುತ್ತಿದೆ’ ಎಂದು ಒಬ್ಬ ಟ್ವೀಟ್​ ದಾರರು ಹೇಳಿದ್ದಾರೆ. “ರಸ್ತೆ ದಾಟಲು ಇದು ಅಪೇಕ್ಷಣೀಯವೇ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಕೆಲವು ಬಳಕೆದಾರರು ನಿರ್ದಿಷ್ಟ ಸ್ಥಳದ ಬಗ್ಗೆಯೂ ಚರ್ಚಿಸಿದ್ದಾರೆ. ಇದು ಬೆಳ್ಳಂದೂರು ಪ್ರದೇಶದಲ್ಲಿರುವ ಇಕೋಸ್ಪೇಸ್ ಬಳಿ ಇದೆ ಎಂದು ತೋರುತ್ತದೆ ಎಂದಿದ್ದಾರೆ.

ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ಸ್ವಯಂಸೇವಕರನ್ನು ಸೇವೆಗೆ ಸಜ್ಜುಗೊಳಿಸಲಾಗಿದೆ. ಮಳೆಯಿಂದಾಗಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Bengaluru-Mysuru highway) ಜಲಾವೃತಗೊಂಡಿದ್ದ ರಸ್ತೆಯಲ್ಲಿ ವಾಹನಗಳು ನಿಂತಿದ್ದು, ಪಾದಚಾರಿಗಳು ನಡೆದಾಡಲು ಪರದಾಡಿದರು.

ಜೂನ್ 1 ರಿಂದ, ಕರ್ನಾಟಕದಲ್ಲಿ 820 ಮಿ.ಮೀ. ಮಳೆ ಬಿದ್ದಿದೆ. ಇದು 27 ಜಿಲ್ಲೆಗಳು ಮತ್ತು 187 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ಇದು 29,967 ಜನರ ಮೇಲೆ ಪರಿಣಾಮ ಬೀರುತ್ತದೆ. ರಾಮನಗರ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳ 20 ಹಳ್ಳಿಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ತೊಂಬತ್ತು ಮಿಮೀ ಮಳೆ ದಾಖಲಾಗಿದೆ ಮತ್ತು 3,000 ಜನರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (National Disaster Response Fund- ಎನ್‌ಡಿಆರ್‌ಎಫ್ NDRF) ಮಾನದಂಡಗಳ ಪ್ರಕಾರ 1,012.5 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಅಂತರ ಸಚಿವಾಲಯದ ತಂಡವನ್ನು ನಿಯೋಜಿಸಲು ಸರ್ಕಾರವು ಕೇಂದ್ರವನ್ನು ಕೇಳಲಿದೆ ಎಂದು ಕರ್ನಾಟಕದ ಕಂದಾಯ ಸಚಿವ ಆರ್ ಅಶೋಕ ಅವರು ಪಿಟಿಐಗೆ ತಿಳಿಸಿದ್ದಾರೆ.