ನಿಜವಾಯ್ತು ಮೈಲಾರಲಿಂಗನ ಕಾರ್ಣಿಕ; ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂದು ಮೊದಲೇ ಹೇಳಿದ್ದ ಮೈಲಾರದಜ್ಜ

|

Updated on: May 18, 2023 | 1:22 PM

ಚುನಾವಣೆಗೂ ಮುನ್ನ ಅಂದರೆ ಎರಡು ತಿಂಗಳ ಹಿಂದೆ ಗೊರವಯ್ಯ ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ. ಹೌದು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗುತ್ತಾರೆಂದು ಹೇಳಲಾಗಿತ್ತು.

ನಿಜವಾಯ್ತು ಮೈಲಾರಲಿಂಗನ ಕಾರ್ಣಿಕ; ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂದು ಮೊದಲೇ ಹೇಳಿದ್ದ ಮೈಲಾರದಜ್ಜ
ಮೈಲಾರಲಿಂಗೇಶ್ವರ ಕಾರ್ಣಿಕ
Follow us on

ಹಾವೇರಿ: ಮೇ.10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣಾ ಮತದಾನದ ಫಲಿತಾಂಶ (Karnataka Assembly Elections 2023 Result) ಮೇ.13 ರಂದು ಹೊರಬಿದ್ದಿತ್ತು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್​ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಮಧ್ಯೆ ಚುನಾವಣೆಗೂ ಮುನ್ನ ಅಂದರೆ ಎರಡು ತಿಂಗಳ ಹಿಂದೆ ಗೊರವಯ್ಯ ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ. ಹೌದು ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah ) ಆಯ್ಕೆಯಾಗುತ್ತಾರೆಂದು ಹೇಳಲಾಗಿತ್ತು. ಇಂದು(ಮೇ.18) ಕಾಂಗ್ರೆಸ್​ ಹೈಕಮಾಂಡ್​ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನ ಆಯ್ಕೆ ಮಾಡಲಾಗಿದೆ. ಜೊತೆಗೆ ಮೇ.20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

“ಅಂಬಲಿ ಹಳಿಸಿತು ಕಂಬಳಿ ಬಿಸಿತಲೆ ಪರಾಕ್​” ಎಂದು ಕಾರ್ಣಿಕ ನುಡಿದಿದ್ದ ಗೊರವಯ್ಯ

ಇಂದು ಮುಖ್ಯಮಂತ್ರಿ ಹೆಸರು ಅಧಿಕೃತ ಆಗುತ್ತಿರುವ ಬೆನ್ನಲ್ಲೆ ಈ ವರ್ಷದ ಕಾರ್ಣಿಕ ಸತ್ಯವಾಯಿತೆಂದ ಮೈಲಾರ ಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪ ಓಡೆಯರ ‘ಮೈಲಾರ ಕಾರ್ಣಿಕ ಕೊಟ್ಯಾಂತರ ಭಕ್ತರ ನಂಬಿಕೆಯ ದೈವವಾಣಿ, ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಎರಡು ತಿಂಗಳು ಹಿಂದೆ ಕಾರ್ಣಿಕ ಹೇಳಲಾಗಿತ್ತು. ಸುಮಾರು ಸಾವಿರಾರು ವರ್ಷಗಳ ಕಾರ್ಣಿಕ ಪರಂಪರೆ ಸತ್ಯವಾಗಿದೆ. ಮೈಲಾರ ಲಿಂಗೇಶ್ವರನ‌ ದೈವ ವಾಣಿಯಂತೆ ಹಾಲು ಮತ ಸಮಾಜದವರು ಸಿಎಂ ಆಗಿದ್ದಾರೆ ಎಂದರು.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆ: ಅಚ್ಚರಿಯ ಭವಿಷ್ಯ ನುಡಿದ ಮಣ್ಣಿನ ಬೊಂಬೆ; ಹಾಗಾದ್ರೆ ಏನದು? ಇಲ್ಲಿದೆ ನೋಡಿ

ಕಾರ್ಣಿಕದ ಅರ್ಥ ವಿವರಿಸಿದ್ದ ಧರ್ಮದರ್ಶಿಗಳು

“ಅಂಬಲಿ ಹಳಿಸಿತು ಕಂಬಳಿ ಬಿಸಿತಲೆ ಪರಾಕ್​” ಎಂದು ಈ ವರ್ಷ ಕಾರ್ಣಿ ನುಡಿಯಲಾಗಿತ್ತು. ಅಂಬಲಿ ಹಳಿಸಿತು ಎಂದರೆ ಸದ್ಯ ಇರುವ ಸರ್ಕಾರದ ಬಗ್ಗೆ ಜನ ಬೆಸತ್ತಿದ್ದಾರೆ. ಕಂಬಲಿ ಬಿಸಿತಲೆ ಎಂದರೆ ಕುರುಬ ಸಮಾಜದ ನಾಯಕ ರಾಜ್ಯದ ಸಿಎಂ ಆಗಲಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್​ಗೆ ಕೂಡ ಸಿಎಂ ಆಗುವ ಯೋಗ ಇದೆ. ಆದ್ರೆ, ಅವರು ಸ್ವಲ್ಪ ತಾಳ್ಮೆಯಿಂದ ಇದ್ರೆ ಒಳ್ಳೆಯದು ಎಂದರ್ಥವನ್ನ ಈ ಹಿಂದೆ ಹೇಳಲಾಗಿತ್ತು. ಜೊತೆಗ ಈ ಹಿಂದೆ ಇಂದಿರಾ ಗಾಂಧಿ ಹತ್ಯೆ ಆಗುವ ಮುಂಚೆಯೂ ಕಾರ್ಣಿಕ ನುಡಿಯಲಾಗಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆದ ಸಂದರ್ಭದಲ್ಲೂ ಕಾರ್ಣಿಕ ಸತ್ಯವಾಗಿತ್ತು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ