Karnataka Breaking Kannada News Highlights: ಚಿಕ್ಕಬಳ್ಳಾಪುರದ ಆದಿಯೋಗಿ ವಿಗ್ರಹದ ಮೇಲೆ ಲೇಸರ್ ಶೋನಲ್ಲಿ ಮೂಡಿದ ರಾಷ್ಟ್ರಧ್ವಜ

| Updated By: Rakesh Nayak Manchi

Updated on: Aug 15, 2023 | 10:50 PM

Independence Day Parade 2023 Live Updates: ದೇಶಾದ್ಯಂತ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ, ಜಿಲ್ಲಾಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿದೆ. ಇದರೊಂದಿಗೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

Karnataka Breaking Kannada News Highlights: ಚಿಕ್ಕಬಳ್ಳಾಪುರದ ಆದಿಯೋಗಿ ವಿಗ್ರಹದ ಮೇಲೆ ಲೇಸರ್ ಶೋನಲ್ಲಿ ಮೂಡಿದ ರಾಷ್ಟ್ರಧ್ವಜ
ಚಿಕ್ಕಬಳ್ಳಾಪುರದ 112 ಅಡಿ ಎತ್ತರದ ಆದಿಯೋಗಿ ವಿಗ್ರಹದ ಮೇಲೆ ಲೇಸರ್ ಶೋನಲ್ಲಿ ಮೂಡಿದ ರಾಷ್ಟ್ರಧ್ವಜ

ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿ 1947 ಆಗಸ್ಟ್​ 15 ರಂದು ಭಾರತಕ್ಕೆ ಸ್ವಾತಂತ್ರ್ಯ (Independence Day)ದೊರೆಯಿತು. ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ಜೀವನ ಮತ್ತು ಜೀವ ಮುಡಿಪಾಗಿಟ್ಟಿದ್ದರು. ಅವರ ತ್ಯಾಗ, ಸೇವೆಯ ಪ್ರತಿರೂಪವೇ ಸ್ವಾತಂತ್ರ್ಯ. ದೇಶಾದ್ಯಂತ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ. ಇನ್ನು ರಾಜ್ಯದಲ್ಲಿ ಬೆಂಗಳೂರಿನ ಮಾಣಿಕ್​ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜ ಆರೋಹಣ ಮಾಡಿದ್ದಾರೆ. ಹಾಗೇ ದೇಶದ ಎಲ್ಲ ಶಾಲೆ, ಕಾಲೇಜು, ಸರ್ಕಾರಿ ಮತ್ತು ಬಹುತೇಕ ಖಾಸಗಿ ಕಚೇರಿಗಳ ಎದುರು ಧ್ವಜಾರೋಹಣ ಮಾಡಲಾಗುತ್ತದೆ.

LIVE NEWS & UPDATES

The liveblog has ended.
  • 15 Aug 2023 10:49 PM (IST)

    Karnataka Breaking News Live: ಬಾಲಕನ ಮೃತದೇಹ ಹೊರತೆಗೆದ ಅಗ್ನಿಶಾಮಕ ದಳ

    ಗದಗ: ಹೊಂಡದಲ್ಲಿ ದನ ತೊಳೆಯಲು ಹೋಗಿ ಇಬ್ಬರು ನೀರುಪಾಲು ಪ್ರಕರಣ ಸಂಬಂಧ ಸಂತೋಷ್ ಎಂಬಾತನ ಮೃತದೇಹ ಪತ್ತೆಯಾಗಿದ್ದು, ಅದನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಮೊಹಮ್ಮದ್ ಅಮನ್ (12) ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.

  • 15 Aug 2023 10:46 PM (IST)

    Karnataka Breaking News Live: ಶಿವಾಜಿ ಪುತ್ಥಳಿ ತೆರವಿಗೆ ಮುಂದಾದ ಬಾಗಲಕೋಟೆ ನಗರಸಭೆ

    ಸ್ಥಳಕ್ಕೆ ಜಮಾಯಿಸಿದ ಹಿಂದು ಹಾಗೂ ಬಿಜೆಪಿ ಮುಖಂಡರು, ಕಾರ್ತಕರ್ತರು

    ಬಾಗಲಕೋಟೆ ಕಾಂಚನ ಪಾರ್ಕ್ ಬಳಿ ಮೊನ್ನೆ ರಾತ್ರಿ ರಾತ್ರೋರಾತ್ರಿ ನಿರ್ಮಾಣವಾದ ಶಿವಾಜಿ ಪುತ್ಥಳಿಯನ್ನು ತೆರುವ ಮಾಡಲು ನಗರಸಭೆ ಮುಂದಾಗಿದೆ. ಈ ವಿಚಾರ ತಿಳಿದ ಹಿಂದೂ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಪುತ್ಥಳಿ ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಸ್ಥಳಕ್ಕೆ ಬಾಗಲಕೋಟೆ ನಗರಠಾಣೆ ಹಾಗೂ ನವನಗರ ಪೊಲೀಸರು ಭೇಟಿ ನೀಡಿದ್ದಾರೆ. ಪುತ್ಥಳಿ ತೆರವುಗೊಳಿಸಿದರೆ ಪರಿಸ್ಥಿತಿ ಗಂಭೀರ ಆಗುತ್ತದೆ. ನಾವು ಈ ಬಗ್ಗೆ ನಾಳೆ ಡಿಸಿ, ಎಸ್​ಪಿ ಅವರನ್ನು ಭೇಟಿಯಾಗುತ್ತೇವೆ. ಮುಂದೆ ಇದಕ್ಕಿಂತ ಎತ್ತರದ ಹದಿನೆಂಟು ಅಡಿ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತೇವೆ. ಇದು ಯಾವುದೇ ವಿವಾದಿತ ಸ್ಥಳ ಅಲ್ಲ. ಶಿವಾಜಿ ಕೇವಲ ಮರಾಠಾ ಸಮಾಜಕ್ಕೆ ಸೀಮಿತವಲ್ಲ. ಇಡೀ ಹಿಂದೂ ಸಮಾಜಕ್ಕೆ ಸೀಮಿತ. ಸ್ಥಳಾಂತರ ‌ಮಾಡೋಕೆ ಮುಂದಾದರೆ ಇಡೀ ಹಿಂದೂ ಸಮಾಜ ಪ್ರತಿಭಟನೆ ಮಾಡುತ್ತದೆ ಎಂದು ಬಿಜೆಪಿ ಪಕ್ಷದ ಮಾಜಿ ಎಂ​ಎಲ್​ಸಿ ನಾರಾಯಣಸಾ ಬಾಂಡಗೆ ಎಚ್ಚರಿಕೆ ನೀಡಿದರು. ಸದ್ಯ ಪೊಲೀಸರು ಎಲ್ಲರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದ್ದಾರೆ. ಆದರೆ, ಕೆಲವು ಮರಾಠ ಮುಖಂಡರು ಪೊಲೀಸರ ಜೊತೆ ಸ್ಥಳದಲ್ಲೇ ಮೊಕ್ಕಾಮ್ ಹೂಡಿದ್ದಾರೆ.

  • 15 Aug 2023 10:09 PM (IST)

    Karnataka Breaking News Live: ಚಿಕ್ಕಬಳ್ಳಾಪುರದ ಆದಿಯೋಗಿ ವಿಗ್ರಹದ ಮೇಲೆ ಲೇಸರ್ ಶೋನಲ್ಲಿ ಮೂಡಿದ ರಾಷ್ಟ್ರಧ್ವಜ

    ಚಿಕ್ಕಬಳ್ಳಾಫುರ : 112 ಅಡಿಗಳ ಆದಿಯೋಗಿ ವಿಗ್ರಹದ ಮೇಲೆ ಲೇಸರ್ ಶೋನಲ್ಲಿ ರಾಷ್ಟ್ರಧ್ವಜದ ಚಿತ್ರಣ ಮೂಡಿದೆ. ಇದನ್ನು ಕಂಡು ಜನರು ಪುಳಕಿತರಾದರು. ಅವಲಗುರ್ಕಿ ಬಳಿ ಈಶಾ ಪೌಂಡೇಷನ್ ಸ್ಥಾಪಿಸಿದ ಆದಿಯೋಗಿ ಪ್ರತಿಮೆ ಇದಾಗಿದೆ. ಇಂದು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಪ್ರತಿಮೆ ಕಂಗೊಳಿಸುವಂತೆ ಮಾಡಲಾಗಿದೆ.

  • 15 Aug 2023 07:56 PM (IST)

    Karnataka Breaking News Live: ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಇದ್ದರೆ ಅದು ಸಿ.ಟಿ.ರವಿ ಎಂದ ಸಚಿನ್ ಮಿಗಾ

    ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಇದ್ದರೆ ಅದು ಸಿ.ಟಿ.ರವಿ ಎಂದು ಹೇಳುವ ಮೂಲಕ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಉಗ್ರ ಶಾರಿಕ್​ಗಿಂತ ಸಿ.ಟಿ.ರವಿ ಒಂದು ಕೈಮೇಲು. ರಾಜಕೀಯದಲ್ಲಿ ಸಿ.ಟಿ.ರವಿ ಹಲವರನ್ನು ಬಲಿ ಕೊಟ್ಟಿದ್ದಾರೆ. ಘೋರಿ, ದರ್ಗಾಗಳನ್ನು ಸಂಚಿನಲ್ಲಿ ಧ್ವಂಸ ಮಾಡಿಸಿದ್ದರೆ ಅದು ಸಿ.ಟಿ.ರವಿ. ಮಹೇಂದ್ರ ಕುಮಾರ್ ಬಳಸಿಕೊಂಡು ದರ್ಗಾ, ದೇಗುಲ ದ್ವಂಸ ಮಾಡಿದ್ದರು. ಮಾಜಿ ಶಾಸಕ ಸಿ.ಟಿ.ರವಿ ಪದೇ ಪದೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದರು. ಈಗ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಜನ ಸಿ.ಟಿ.ರವಿರನ್ನು ಮನೆಗೆ ಕಳುಹಿಸಿದ್ದಾರೆ. ಉಗ್ರ ಸಿ.ಟಿ.ರವಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯ ಮಾಡುತ್ತೇನೆ ಎಂದರು.

  • 15 Aug 2023 07:54 PM (IST)

    Karnataka Breaking News Live: ರಾಜ್ಯಪಾಲರಿಂದ ಚಹಾಕೂಟ ಆಯೋಜನೆ

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ

    77ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಚಹಾಕೂಟ ಏರ್ಪಡಿಸಿದ್ದಾರೆ. ಈ ಚಹಾಕೂಟದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ.

  • 15 Aug 2023 07:01 PM (IST)

    Karnataka Breaking News Live: ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

    ಮಡಿಕೇರಿ: ಹಲವು ತಿಂಗಳಿನಿಂದ ಉಪಟಳ ನೀಡುತ್ತಿದ್ದ 16 ವರ್ಷದ ಗಂಡು ಕಾಡಾನೆ ಮಡಿಕೇರಿ ತಾಲೂಕಿನ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಸೆರೆಯಾಗಿದೆ. ಹಲವು ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆಯ 150 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದಿದ್ದಾರೆ.

  • 15 Aug 2023 05:10 PM (IST)

    Independence Day 2023 Live: ಗಾಳಿಯಲ್ಲಿಗುಂಡು ಹಾರಿಸುವ ರೀತಿ ಯತ್ನಾಳ್ ಮಾತಾಡುತ್ತಾರೆ: ದರ್ಶನಾಪುರ

    ಆರು ತಿಂಗಳಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಇರಲ್ಲ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಯತ್ನಾಳ್ ಯಾವಾಗಲೂ ಗಾಳಿಯಲ್ಲಿಗುಂಡು ಹಾರಿಸುವ ರೀತಿ ಮಾತಾಡ್ತಾರೆ. ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಅಧಿಕಾರವಧಿ ಪೂರೈಸಲಿದೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಕೆಲಸ ಮಾಡ್ತಾರೆ. 6 ತಿಂಗಳ ಬಳಿಕ ಚುನಾವಣೆ ಇದ್ಯಾ? ಇವರು ಹೇಗೆ ಸರ್ಕಾರ ರಚಿಸುತ್ತಾರೆ? ಈ ಹಿಂದೆ ಬಿಜೆಪಿ ಅಧಿಕಾರವಧಿಯಲ್ಲಿ ಸಾಕಷ್ಟು ಹಣ ಲೂಟಿ ಮಾಡಿದ್ದಾರೆ. ಹೀಗಾಗಿಯೇ ಶಾಸಕರನ್ನು ಖರೀದಿಸುತ್ತೇವೆ ಎಂದು ಹೇಳುತ್ತಿಬರಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿನಾ ಅಂತ ನಾನು ಕೇಳುತ್ತೇನೆ. ಬಿಜೆಪಿ ಸರ್ಕಾರ ಬರುತ್ತೆ ಎನ್ನಲು ಜನರು ಆಶೀರ್ವಾದ ಮಾಡಿದ್ದಾರಾ? ರಾಜ್ಯದ ಜನರು ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಎಂದರು.

  • 15 Aug 2023 05:08 PM (IST)

    Independence Day 2023 Live: ಕುಡಿದ ಮತ್ತಿನಲ್ಲಿ ಯುವತಿಯ ಮೇಲೆ ಬೈಕ್​ ಹರಿಸಿದ ಸವಾರ

    ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಯುವತಿಯ ಮೇಲೆ ಬೈಕ್​ ಹರಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ರಂಗನಾಥ ಕಾಲೇಜು ಬಳಿ ನಡೆದಿದೆ. ಸ್ವಾತಂತ್ರ್ಯೋತ್ಸವ ಆಚರಿಸಿದ ನಂತರ ಯುವತಿಯರು ಮನೆಗೆ ತೆರಳುತ್ತಿದ್ದಾಗ ಯುವತಿ ಮೇಲೆ ಬೈಕ್ ಚಾಲಯಿಸಿದ್ದಾನೆ. ಕೂಡಲೇ ಸ್ಥಳೀಯರು ಬೈಕ್ ಸವಾರನನ್ನು ಹಿಡಿದು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಆಗಮಿಸಿದ ಶಿರಾ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.

  • 15 Aug 2023 04:00 PM (IST)

    Independence Day 2023 Live: ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ: ಸಚಿವ ಮುನಿಯಪ್ಪ

    ಈ ತಿಂಗಳು ಕೂಡ ಹೆಚ್ಚುವರಿ 5 ಕೆಜಿ ಬದಲು ಹಣ ನೀಡುತ್ತೇವೆ ಎಂದು ದೇವನಹಳ್ಳಿಯಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಸೆಪ್ಟೆಂಬರ್​ ತಿಂಗಳಿನಲ್ಲೂ ಕೂಡ ಹೆಚ್ಚುವರಿ ಅಕ್ಕಿ ಸಿಗುವುದು ಅನುಮಾನ. ಆದಷ್ಟು ಬೇಗ ಹೆಚ್ಚುವರಿ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ ಎಂದರು.

  • 15 Aug 2023 01:46 PM (IST)

    Independence Day Live: ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ

    ಬಾಗಲಕೋಟೆ: ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಅಪರೂಪದ ಘಟನೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

  • 15 Aug 2023 12:49 PM (IST)

    Independence Day Live: ಸಿಎಂ ಸಿದ್ದರಾಮಯ್ಯ ಅವರೇ ನಿಮಗೂ 77 ವರ್ಷ ಆಗುತ್ತಿದೆ: ಡಿಕೆ ಶಿವಕುಮಾರ್​

    ಬೆಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ಆಚರಣೆ ಮಾಡುತ್ತಿದ್ದೇವೆ. ಹಾಗೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಮಾಡುತ್ತಿದ್ದೇವೆ. ಗಣರಾಜ್ಯದ ದಿನ ಅವರ ಹುತಾತ್ಮ ದಿನ ಆಚರಣೆ ಮಾಡುತ್ತೇವೆ. 77ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿದ್ದೇವೆ.  ನಿಮಗು 77 ವರ್ಷ ಆಗುತ್ತಿದೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್​, ಸಿಎಂ ಸಿದ್ದರಾಮಯ್ಯ ಅವರಿಗೆ ವಯಸ್ಸಿನ ನೆನಪು ಮಾಡಿಸಿದರು.  ನಾವೆಲ್ಲಾ ಸೇರಿ ಬಲಿಷ್ಠವಾದ ಭಾರತ ನಿರ್ಮಾಣ ಮಾಡಬೇಕು. ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣ ಮಾಡಬೇಕು. ಬ್ರೀಟಿಷರನ್ನು ತೊಲಗಿಸಿದ ಹಾಗೆ ಕೋಮುವಾದಿಗಳನ್ನು ಸೋಲಿಸಬೇಕಿದೆ. ಕರ್ನಾಟಕ ರಾಜ್ಯದಿಂದ ಬುನಾದಿ ಶುರುವಾಗಿದೆ. ನಾವೆಲ್ಲಾ ಸೇರಿ ಹೋರಾಟ ಮಾಡೋಣ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಮ್ಮೆಲ್ಲ ವಿಚಾರಗಳಿಗೆ ಬದ್ದವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದರು.

  • 15 Aug 2023 12:19 PM (IST)

    Independence Day Live: ಸಚಿವೆಯಾಗಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್​

    ಉಡುಪಿ: ಲಕ್ಷ್ಮಿ ಹೆಬ್ಬಾಳ್ಕರ್​ ಸಚಿವರಾಗಿ ಇದೇ ಮೊದಲ ಬಾರಿಗೆ ಧ್ವಜಾರೋಹರಣ ನೆರವೇರಿಸಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.

  • 15 Aug 2023 12:03 PM (IST)

    Independence Day Live: ಹಾವೇರಿ ಜಿಲ್ಲೆ ಅಭಿವೃದ್ಧಿಗೆ 3 ಗುರಿಗಳನ್ನು ಇಕೊಂಡಿದ್ದೇವೆ: ಶಿವಾನಂದ ಪಾಟೀಲ್

    ಹಾವೇರಿ:  ಈ ದಿವಸ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನೃತ್ಯದ ಮೂಲಕ ಜನ ಸಾಮನ್ಯರ ಮನಸ್ಸು ಮುಟ್ಟುವ ಕೆಲಸ ಮಾಡಿದ ಮಕ್ಕಳಿಗೆ, ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾವೇರಿ ಜಿಲ್ಲೆಗೆ ಮೂರು ಗುರಿಗಳನ್ನಿಟ್ಟುಕೊಂಡಿದ್ದೇವೆ. ಹಾವೇರಿ ಮೆಡಿಕಲ್ ಕಾಲೇಜು ಶೀಘ್ರದಲ್ಲೇ ಆರಂಭವಾಗುತ್ತದೆ. ಮತ್ತೆ 25 ಕೋಟಿ ರೂ. ಹಣ ಸಿಎಂ ಬಿಡುಗಡೆ ಮಡಿದ್ದಾರೆ. ಕುಡಿಯುವ ನೀರಿನ ಸುವ್ಯವಸ್ಥೆ ಮಾಡುತ್ತಿದ್ದೇವೆ. ನೀರಾವರಿ ಇಲಾಖೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಈ ಮೂರು ಕೆಲಸಗಳನ್ನು ಆದಷ್ಟು ಬೇಗ ಮಾಡಿ‌ ಮುಗಿಸುತ್ತೇವೆ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.

  • 15 Aug 2023 11:40 AM (IST)

    Independence Day Live: ಶ್ರೀಘ್ರದಲ್ಲೇ ನೀರಾವರಿ ಯೋಜನೆ ಪೂರ್ಣ; ಎಂಬಿ ಪಾಟೀಲ್​

    ವಿಜಯಪುರ: ನಾಡಿನ‌ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು.  ಅನೇಕ ಮಹನಿಯರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೂ ನಮನ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರೆಂಟಿಗಳಲ್ಲಿ ಈಗಾಗಲೇ‌ ನಾಲ್ಕು ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಜಾರಿಗೆ ಬಂದಿವೆ. ಕೇಂದ್ರ ಸರ್ಕಾರದ ಅಸಹಕಾರ ನೀತಿಯಿಂದ 10 ಕೆಜಿ ಅಕ್ಕಿ ಕೊಡಲು ಆಗದೆ ಇದ್ದಿದ್ದರಿಂದ 5ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ
    ಇದಕ್ಕಾಗಿ ವಿಜಯಪುರ ಜಿಲ್ಲೆಯಲ್ಲೇ 20ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿನ ವಿಮಾನ ನಿಲ್ದಾಣ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿದೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು  ಎಂದು ಸಚಿವ ಎಂಬಿ ಪಾಟೀಲ್​ ಹೇಳಿದರು.

  • 15 Aug 2023 11:21 AM (IST)

    Independence Day Live: ರಾಜಭವನದಲ್ಲಿ ಧ್ವಜಾರೋಹಣ ನೇರವೇರಿಸಿದ ರಾಜ್ಯಪಾಲರು

    ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ ಧ್ವಜಾರೋಹಣ ನೇರವೇರಿಸಿದರು. ಇದಕ್ಕೂ ಮುಂಚೆ ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
    ಮುಖ್ಯ ಭದ್ರತಾ ಅಧಿಕಾರಿ ಎಸಿಪಿ ನಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡದಿಂದ ರಾಜ್ಯಪಾಲರಿಗೆ ಗೌರವ ರಕ್ಷೆ ನೀಡಿದರು.

  • 15 Aug 2023 11:13 AM (IST)

    Independence Day Live: ಗಡಿನಾಡಿನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

    ಆನೇಕಲ್:  ಗಡಿನಾಡಿನಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ  ಆಚರಿಸಲಾಯಿತು. ಆನೇಕಲ್ ಪಟ್ಟಣದ ಎಎಸ್ಬಿ ಕ್ರೀಡಾಂಗಣದಲ್ಲಿ ತಹಶಿಲ್ದಾರ್ ಶಶಿಧರ್ ಮಾಡ್ಯಾಳ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಶಾಸಕ ಬಿ ಶಿವಣ್ಣ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಪಥ ಸಂಚಲನದ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು.

  • 15 Aug 2023 10:53 AM (IST)

    Independence Day Live: ಕನ್ನಡ ಭಾಷೆಯಲ್ಲೇ ಕವಾಯತು ಆಜ್ಞೆ

    ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಚಾಮರಾಜನಗರ ಪೊಲೀಸರು ಕನ್ನಡ ಭಾಷೆಯಲ್ಲೇ ಕವಾಯತು ಆಜ್ಞೆ ನೀಡಿದ್ದಾರೆ.  ಕವಾಯತು ಸಂದರ್ಭದಲ್ಲಿ ಪೊಲೀಸರಿಂದ ಕನ್ನಡ ಬಳಕೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

  • 15 Aug 2023 10:37 AM (IST)

    Independence Day Live: ವಿಜಯಪುರದಲ್ಲಿ ಎಂಬಿ ಪಾಟೀಲ್​ ಧ್ವಜಾರೋಹಣ

    ವಿಜಯಪುರ: 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ವಿಜಯಪುರ ನಗರದ ಡಾ ಬಿ ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಂಬಿ ಪಾಟೀಲ್‌ ಧ್ವಜಾರೋಹಣ ನೆರವೇರಿಸಿದರು.

  • 15 Aug 2023 10:30 AM (IST)

    Independence Day Live: ಮೊದಲ ಬಾರಿಗೆ ಉಸ್ತುವಾರಿ ಸಚಿವ ನಾಗೇಂದ್ರ ಧ್ವಜಾರೋಹಣ

    ಬಳ್ಳಾರಿ: 77 ಸ್ವಾತಂತ್ರ್ಯೋತ್ಸವ ಹಿನ್ನೆಲೆ ಬಳ್ಳಾರಿಯ ವಿಮ್ಸ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಉಸ್ತುವಾರಿ ಸಚಿವ ನಾಗೇಂದ್ರ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್, ಎನ್ ಸಿ ಸಿ ಸೇರಿದಂತೆ ವಿವಿಧ ತುಕಡಿಗಳ ಪರಿವೀಕ್ಷಣೆ ಮಾಡಿದರು. ಬಳಿಕ 20 ಹೆಚ್ಚು ವಿವಿಧ ತುಕಡಿಗಳಿಂದ ಸಚಿವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

  • 15 Aug 2023 10:12 AM (IST)

    Independence Day Live: 600‌ ಅಡಿ ಎತ್ತರದ ಮೇಲೆ 60‌ ಅಡಿ ತ್ರಿವರ್ಣ ಧ್ವಜ ಹಾರಿಸಿದ ಯುವಕರು

    ರಾಮನಗರ: ಜಿಲ್ಲೆಯ ಬೆಟ್ಟದ ಮೇಲೆ ಯುವಕರು 600‌ ಅಡಿ ಎತ್ತರದ ಮೇಲೆ 60‌ ಅಡಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 60‌ ಅಡಿ ಅಗಲದ ತ್ರಿವರ್ಣ ಬಾವುಟ ಹಾರಿಸಿ ಯುವಕರು ದೇಶಭಕ್ತಿ ಮೆರೆದಿದ್ದಾರೆ.  ಈ ಯುವಕರ ತಂಡ ಪ್ರತಿ ವರ್ಷ ಧ್ವಜದ ಎತ್ತರವನ್ನು ಐದು ಅಡಿ ಎತ್ತರ ಹೆಚ್ಚಿಸಿಕೊಂಡು ಹೋಗುತ್ತಿದೆ.

  • 15 Aug 2023 09:43 AM (IST)

    Independence Day Live: ಕೆಲವೇ ದೊಡ್ಡ ಬಂಡವಾಳಿಗರ ಬಳಿ ಸಂಪತ್ತು ಶೇಖರಣೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೂಯ್ದರು. ಆದರೆ ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಸಂಪತ್ತು ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ, ಅಭಿವೃದ್ಧಿ ಸಾಧ್ಯವೆ? ಕುವೆಂಪು ಅವರು ತಮ್ಮದೊಂದು ಪದ್ಯದಲ್ಲಿ ಕವಿ ಕುವೆಂಪು ಅವರು ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂದೆ?” ಎಂದು ಪ್ರಶ್ನಿಸಿದ್ದಾರೆ. ಇದನ್ನೆಲ್ಲ ಮನಗಂಡೆ. ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ.
    ಅದಕ್ಕಾಗಿಯೇ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ‘5 ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದರು.

  • 15 Aug 2023 09:40 AM (IST)

    Independence Day Live: ನಮ್ಮಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತು ಹೊಂದಿದ್ದಾರೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ ಸ್ವಾತಂತ್ರ್ಯಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ ಎಂದು ಭಾವಿಸಿ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು ಸ್ವಾತಂತ್ರ್ಯವೇನೂ ಲಭಿಸಿತು. ಆದರೆ, ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಇಂದು ನಮ್ಮಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ, ಯಜಮಾನಿಕೆ ಹೊಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

  • 15 Aug 2023 09:35 AM (IST)

    Independence Day Live: ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಕೃಷಿ, ತೋಟಗಾರಿಕೆ ಉತ್ತೇಜನಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುವುದು. ಕೌಶಲ್ಯಾಭಿವೃದ್ಧಿ ಯೋಜನೆ ಮೂಲಕ ಯುವಕರಿಗೆ ತರಬೇತಿ ನೀಡಲಾಗುವುದು. ಕೈಗಾರಿಕೆ ಕ್ಷೇತ್ರದಲ್ಲಿ ಮತ್ತಷ್ಟು ಉತ್ತೇಜನ ನೀಡಲಾಗುತ್ತೆ. ಮೈಸೂರು, ಮಂಗಳೂರು, ಧಾರವಾಡ-ಹುಬ್ಬಳ್ಳಿ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಗಳ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕೈಗಾರಿಕಾ ವಲಯಗಳ ನಡುವೆ ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಲಾಗುವುದು. ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗಿದೆ.

  • 15 Aug 2023 09:33 AM (IST)

    Independence Day Live: ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ರಸ್ತೆ, ಬಂದರು, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅಂತರಾಜ್ಯ ರಸ್ತೆಗಳನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ, ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

  • 15 Aug 2023 09:30 AM (IST)

    Independence Day Live: ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ

    ಬೆಂಗಳೂರು: ಕರ್ನಾಟಕದಲ್ಲಿ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  • 15 Aug 2023 09:28 AM (IST)

    Independence Day Live: ನಮ್ಮ ಮೆಟ್ರೋ 69 ಕಿಮೀ ಕಾರ್ಯಾಚರಣೆ; 6.1 ಲಕ್ಷ ಜನರು ಸಂಚಾರ

    ಬೆಂಗಳೂರು: ನಮ್ಮ ಮೆಟ್ರೋ 69 ಕಿಮೀ ಕಾರ್ಯಾಚರಣೆ ನಡೆಸುತ್ತಿದೆ. ಇದರಿಂದ ಪ್ರತಿದಿನ 6.1 ಲಕ್ಷ ಜನರು ಸಂಚರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆಟ್ರೋ ಕಾಮಗಾರಿ ವಿಸ್ತರಣೆಯಾಗಲಿದೆ.

  • 15 Aug 2023 09:25 AM (IST)

    Independence Day Live: ಬಡ ಡಯಾಲಿಸಿಸ್​ ರೋಗಿಗಳಿಗೆ ಉಚಿತ ​ಚಿಕಿತ್ಸೆ

    ಬೆಂಗಳೂರು: ಸರ್ಕಾರಿ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಮೊಟ್ಟೆ ಕೊಡಲು ನೀರ್ಧರಿಸಿದ್ದೇವೆ. ಬಡ ಡಯಾಲಿಸಿಸ್​ ರೋಗಿಗಳಿಗೆ ಉಚಿತವಾಗಿ ​ಚಿಕಿತ್ಸೆ ನೀಡಲಾಗುತ್ತದೆ. ನಗರ ಪ್ರದೇಶದ ಬಡವರು, ಶ್ರಮಿಕರಿಗಾಗಿ ಇಂದಿರಾ ಕ್ಯಾಂಟಿನ್​ ತೆರೆಯಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ. ​ 

  • 15 Aug 2023 09:19 AM (IST)

    Independence Day Live: ಆ.27ರಂದು ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ; ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಭಾರತ ಇಂದು ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡಿದೆ. ಅಭಿವೃದ್ಧಿ ದೃಷ್ಟಿಯಿಂದ ಗ್ಯಾರಂಟಿಗಳು ಜಾರಿ ಮಾಡಿದ್ದೇವೆ. ಆ.27ರಂದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಖಾತೆಗೆ 2000 ಸಾವಿರ ಹಣ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  • 15 Aug 2023 09:17 AM (IST)

    Independence Day Live: ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು: ಸಿಎಂ ಸಿದ್ದರಾಯ್ಯ

    ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಮಾಣಿಕ್​ ಷಾ ಪರೇಡ್​​ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವ ಶುಭಾಶಯಗಳು. ಅನೇಕ ಮಹನೀಯರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

  • 15 Aug 2023 09:01 AM (IST)

    Independence Day Live: ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗುಡುಗಿದ ಪ್ರಧಾನಿ ಮೋದಿ

    ನವದೆಹಲಿ: ಭಾರತ ಇಂದು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕಕ್ಕೆ ನಾವು ಸರ್ಕಾರದ ಹೆಚ್ಚು ಆದ್ಯತೆ ನೀಡುತ್ತೇವೆ. ಭಾರತದ ಅಭಿವೃದ್ಧಿಗಾಗಿ ದೇಶದ ಜನರ ಆಶೀರ್ವಾದ ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಕುಟುಂಬವಾದಿಗಳು ದೇಶದ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದರು ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

  • 15 Aug 2023 08:57 AM (IST)

    Independence Day Live: ಕುಟುಂಬವಾದಿ ರಾಜಕೀಯ ದೇಶದ ಪ್ರತಿಭಾವಂತರ ವೈರಿಗಳು

    ನವದೆಹಲಿ: ಕುಟುಂಬವಾದಿ ರಾಜಕೀಯ ದೇಶದ ಪ್ರತಿಭಾವಂತರ ವೈರಿಗಳು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಅದನ್ನು ನಿರ್ಮೂಲನೆ ಮಾಡಬೇಕು. ಭ್ರಷ್ಟಾಚಾರವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 08:44 AM (IST)

    Independence Day Live: ಭಾರತ ಇಂದು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ

    ನವದೆಹಲಿ: ಭಾರತ ವಿಶ್ವದ ಅತಿ ಹೆಚ್ಚು ಮಹಿಳಾ ಪೈಲಟ್​ಗಳನ್ನು ಹೊಂದಿದೆ. ಭಾರತ ಇಂದು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ.

  • 15 Aug 2023 08:35 AM (IST)

    Independence Day Live: ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಾಗಿ ಯುವತಿಯರೇ ಮುಂದಿದ್ದಾರೆ

    ನವದೆಹಲಿ: ದೇಶದಲ್ಲಿ ವೈದ್ಯಕೀಯ, ಇಂಜನೀಯರಿಂಗ್​​, ಟೆಕ್ನಾಲಾಜಿ, ವಿಜ್ಞಾನ ವಿಷಯಗಳನ್ನು ಹೆಚ್ಚಾಗಿ ಯುವತಿಯರೇ ಕಲಿಯುತ್ತಿದ್ದಾರ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 08:33 AM (IST)

    Independence Day Live: ಭಾರತ ಪ್ರಜಾಪ್ರಭುತ್ವದ ತವರು ಮನೆ

    ನವದೆಹಲಿ: ಭಾರತ ಪ್ರಜಾಪ್ರಭುತ್ವದ ತವರು ಮನೆ. ಭಾರತ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ ಪ್ರಮುಖ ರಾಷ್ಟ್ರವಾಗಿದೆ

  • 15 Aug 2023 08:32 AM (IST)

    Independence Day Live: 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ

    ನವದೆಹಲಿ: ನುಸುಳುಕೋರರಿಂದ ದೇಶದ ಗಡಿ ಇಂದು ಬಹಳಷ್ಟು ಸುರಕ್ಷಿತವಾಗಿದೆ. ದೇಶದಲ್ಲಿ ಭಯೋತ್ಪಾದಕರ ದಾಳಿಗಳನ್ನು ತಡೆಯಲಾಗಿದೆ. 2014ರ ಮೊದಲು ಪಟಾಕಿ ರೀತಿ ದಾಳಿಗಳನ್ನು ಮಾಡುತ್ತಿದ್ದರು. ನಮ್ಮ ಸರ್ಕಾರ ಮೂರು ಸೇನಾಪಡೆಯನ್ನು ಬಲಪಡಿಸಿದೆ. ಇದು ಆತ್ಮವಿಶ್ವಾಸದೊಂದಿಗೆ ತುಂಬಿರುವ ನವ ಭಾರತ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಲಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 15 Aug 2023 08:30 AM (IST)

    Independence Day Live: 2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ

    ನವದೆಹಲಿ: ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗುವುದು ಅಗತ್ಯವಿದೆ. ದೇಶದ ಎಲ್ಲ ಜನರು “ಭಾರತದ ಏಕತೆ” ಮಂತ್ರ ಜಪಿಸುತ್ತಾ ಹಜ್ಜೆ ಹಾಕಬೇಕಿದೆ. 2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 15 Aug 2023 08:27 AM (IST)

    Independence Day Live: ದೇಶದಲ್ಲಿ ಪರಿವರ್ತನೆಯ ವಾತಾವರಣ ನಿರ್ಮಾಣ ಮಾಡಿದ್ದೇವೆ

    ನವದೆಹಲಿ: ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೇನೆಯಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಸುರಕ್ಷತೆ, ಶಾಂತಿ ಮತ್ತು ಪ್ರಗತಿಯ ದೇಶವಾಗಿದೆ. ಪರಿವರ್ತನೆಯ ವಾತಾವರಣ ನಿರ್ಮಾಣ ಮಾಡಿದ್ದೇವೆ.

  • 15 Aug 2023 08:23 AM (IST)

    Independence Day Live: ಶ್ವಕರ್ಮ ಜಯಂತಿ ದಿನ ವಿಶ್ವಕರ್ಮ ಯೋಜನೆ ಜಾರಿಗೊಳಿಸುತ್ತೇವೆ

    ನವದೆಹಲಿ: ವಿಶ್ವಕರ್ಮ ಜಯಂತಿ ದಿನ ವಿಶ್ವಕರ್ಮ ಯೋಜನೆ ಜಾರಿಗೊಳಿಸುತ್ತೇವೆ. ಉತ್ತಮ ನಿರ್ಧಾರಗಳಿಂದ ದೇಶ ಇಂದು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ನಮ್ಮ ಸರ್ಕಾರ ಬಡವರಿಗೆ ಸಮರ್ಪಿಸಲಾಗಿದೆ. ಆಯುಷ್ಮಾನ್ ಯೋಜನೆಯಿಂದ ದೇಶದ ಬಡವರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 08:20 AM (IST)

    Independence Day Live: ದೇಶದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ

    ನವದೆಹಲಿ: 2014ರಲ್ಲಿ ದೇಶದ ಜನರು ಒಂದು ಬಲಿಷ್ಟವಾದ ಸರ್ಕಾರ ರಚಿಸಿದ್ದೀರಿ. ದೇಶದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರತ್ಯೇಕ ಸಹಕಾರ ಇಲಾಖೆಯನ್ನು ಸ್ಥಾಪಿಸಿದ್ದೇವೆ. ರಾಷ್ಟ್ರ ಮೊದಲು ಎಂಬುವುದು ಸಮ್ಮ ಸರ್ಕಾರದ ಮೂಲ ಮಂತ್ರ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 08:18 AM (IST)

    Independence Day Live: ಗ್ಯಾರೆಂಟಿ ವಿಶ್ವಾಸ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ಮುಂಬವರುವ ದಿನಗಳಲ್ಲಿ ಪ್ರಧಾನಿ ಮೋದಿಯವರ ಗ್ಯಾರೆಂಟಿ ಜಗತ್ತಿನ ಅತಿದೊಡ್ಡ ಮೂರು ಆರ್ಥಿಕ ದೇಶಗಳಲ್ಲಿ ಭಾರತ ಒಂದಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 08:15 AM (IST)

    Independence Day Live: ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ

    ನವದೆಹಲಿ: ಭಾರತ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೇತೃತ್ವ ವಹಿಸಲಿದೆ. ಕಳೆದ ವರ್ಷ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗಿಯಾಗಿದ್ದೆ. ಭಾರತ ಅಭಿವೃದ್ಧಿ ಬಗ್ಗೆ ಹಲವು ರಾಷ್ಟ್ರಗಳ ನಾಯಕರು ಶ್ಲಾಘಿಸಿದರು. ನಾನು ಹೇಳಿದೆ ದೊಡ್ಡ ನಗರಗಳ ಜೊತೆ ಸಣ್ಣ ನಗರಗಳು ಬೆಳೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಸಣ್ಣ ಸಣ್ಣ ನಗರಗಳು ಬೆಳೆಯುತ್ತಿವೆ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ದೇಶವಾಗಿದೆ. ಇದರಿಂದ ನಮ್ಮ ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವಶಕ್ತಿಗೆ ಬಲ ನೀಡಲಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು

  • 15 Aug 2023 08:11 AM (IST)

    Independence Day Live: ಮುನ್ನುಗ್ಗುತ್ತಿರುವ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

    ನವದೆಹಲಿ: ಭಾರತದ ವೈವಿಧ್ಯತೆಯನ್ನು ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಮುನ್ನುಗ್ಗುತ್ತಿರುವ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರತ್ಯೇಕ ಸಹಕಾರ ಇಲಾಖೆಯನ್ನು ಸ್ಥಾಪಿಸಿದ್ದೇವೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 15 Aug 2023 08:06 AM (IST)

    Independence Day Live: ನನ್ನ ಸರ್ಕಾರದ ಒಂದೇ ಘೋಷಣೆ ರಾಷ್ಟ್ರ ಪ್ರಥಮ

    ನವದೆಹಲಿ: ನನ್ನ ಸರ್ಕಾರದ ಒಂದೇ ಘೋಷಣೆ ರಾಷ್ಟ್ರ ಪ್ರಥಮ. 2014ರಲ್ಲಿ ದೇಶವನ್ನು ಭಲಿಷ್ಠ ಮಾಡಿದಿರಿ. ದೇಶದ ಅಭಿವೃದ್ಧಿಗೆ ನಿಮ್ಮ ಆಶಿರ್ವಾದ ನೀಡಿದ್ದೀರಿ. ಯುವ ಶಕ್ತಿಗಾಗಿ ಹೊಸ ವೇಗಬೇಕಿದೆ. ನಾವು ಜಲಶಕ್ತಿ ಮಂತ್ರಾಲಯ ಜಾರಿಗೆ ತಂದೆವು. ಇದರ ಮೂಲಕ ದೇಶದ ಪ್ರತಿಯೊಂದು ಮನೆಗೂ ನೀರು ಸರಬರಾಜು ಮಾಡುವ ಸಂಕಲ್ಪವಿದೆ

  • 15 Aug 2023 08:02 AM (IST)

    Independence Day Live: ಕಠಿಣ ಸಂದರ್ಭದಲ್ಲೂ ಭಾರತ ಆರ್ಥಿಕತೆ ಸ್ಥಾನ ಕಾಯ್ದುಕೊಂಡಿದೆ

    ನವದೆಹಲಿ: ಕೊರೊನಾ ಸಂದರ್ಭದಲ್ಲೂ ನಮ್ಮ ಸಾಮರ್ಥ್ಯವನ್ನು ತೋರಿಸಿದ್ದೇವೆ. ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆ ಇನ್ನೂ ಚೇತರಿಕೆ ಕಂಡಿಲ್ಲ. ಕಠಿಣ ಸಂದರ್ಭದಲ್ಲೂ ಭಾರತ ಆರ್ಥಿಕತೆ ಸ್ಥಾನ ಕಾಯ್ದುಕೊಂಡಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು. 

  • 15 Aug 2023 08:00 AM (IST)

    Independence Day Live: ಬದಲಾಗುತ್ತಿರುವ ದೇಶ ನಿಮ್ಮ ಸಾಮರ್ಥ್ಯದ ಪ್ರತೀಕವಾಗಿದೆ

    ನವದೆಹಲಿ: ಕಳೆದ ಒಂದು ವರ್ಷದಿಂದ ದೇಶದಲ್ಲಿ ಜಿ20 ಸಂಭ್ರಮಾಚರಣೆ ಮನೆ ಮಾಡಿದೆ. ಈ ಸಭೆಯಿಂದ ದೇಶದ ಗೌರವ ಇನ್ನೂ ಹೆಚ್ಚಿದೆ. ಜಗತ್ತಿನ ವಿವಿಧ ದೇಶಗಳು ಭಾರತಕ್ಕೆ ಗೌರವಿಸುತ್ತಿವೆ. ಕೊರೊನಾ ನಂತರ ದೇಶ ಸಾಕಷ್ಟು ಬದಲಾಗುತ್ತಿದೆ. ಬದಲಾಗುತ್ತಿರುವ ದೇಶ ನಿಮ್ಮ ಸಾಮರ್ಥ್ಯದ ಪ್ರತೀಕವಾಗಿದೆ.

  • 15 Aug 2023 07:57 AM (IST)

    Independence Day Live: ದೇಶದ ಯುವಕರ ಶಕ್ತಿ ಮೇಲೆ ನನಗೆ ಅಗಾಧ ವಿಶ್ವಾಸವಿದೆ

    ನವದೆಹಲಿ: ದೇಶದ ತಂತ್ರಜ್ಞಾನದ ನೈಪುಣ್ಯತೆಯ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ. ಯುವಕರ ಶಕ್ತಿಯಲ್ಲಿ ಬಹಳಷ್ಟು ಸಾಮರ್ಥ್ಯ ಇದೆ. ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯನ್ನು ಕಂಡಿದೆ. ವಿಶ್ವದಲ್ಲಿ ಭಾರತದ ಪ್ರತಿ ಹೆಜ್ಜೆ ಕೂಡ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ದೇಶದ ಯುವಕರ ಶಕ್ತಿ ಮೇಲೆ ನನಗೆ ಅಗಾಧ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 15 Aug 2023 07:55 AM (IST)

    Independence Day Live: ದೇಶದ ರೈತರಿಗೆ, ಶ್ರಮಿಕ ವರ್ಗದವರಿಗೆ ಅಭಿನಂದನೆ

    ನವದೆಹಲಿ: ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾತೆ, ಸಹೋದರರಿಗೆ, ರೈತರಿಗೆ, ಶ್ರಮಿಕ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

  • 15 Aug 2023 07:52 AM (IST)

    Independence Day Live: ಯುವ ಶಕ್ತಿ ಮೇಲೆ ನನಗೆ ಭರವಸೆ, ಯುವ ಶಕ್ತಿಯಲ್ಲಿ ಸಾಮರ್ಥ್ಯವಿದೆ

    ನವದೆಹಲಿ: ಯುವ ಶಕ್ತಿ ಮೇಲೆ ನನಗೆ ಬರವಸೆ ಇದೆ. ಯುವ ಶಕ್ತಿಯಲ್ಲಿ ಸಾಮರ್ಥ್ಯವಿದೆ. ಜಗತ್ತಿನ ಮೂರು ಸ್ಟಾರ್ಟಪ್​​ನಲ್ಲಿ​  ನಮ್ಮ ಯುವಕರು ಇದ್ದಾರೆ. ಭವಿಷ್ಯದ ದಿನಗಳಲ್ಲಿ ಭಾರತದ ಟೆಕ್ನಾಲಜಿಯಲ್ಲಿ ನಂಬರ್​ 1 ಆಗಲಿದೆ. ಜಗತ್ತಿನ ವಿವಿಧ ದೇಶಗಳು ಮಾತನಾಡುತ್ತಿವೆ ಭಾರತ ಜಗತ್ತಿನಲ್ಲಿ ಕಮಾಲ್​ ಮಾಡಿವೆ

  • 15 Aug 2023 07:49 AM (IST)

    Independence Day Live: ಪ್ರಜಾಪ್ರಭುತ್ವ, ವಿವಿಧತೆಯಲ್ಲ ಏಕತೆ, ಜನಸಂಖ್ಯೆ ನಮಗೆ ವರದಾನ

    ನವದೆಹಲಿ: ನಮ್ಮಲ್ಲಿ ವಿವಧತೆಯಲ್ಲಿ ಏಕತೆ ಇದೆ. ನಮ್ಮಲ್ಲಿ ಪ್ರಜಾಪ್ರಭುತ್ವ ಇದೆ. ನಮ್ಮಲ್ಲಿ ಜನಸಂಖ್ಯೆ ಇದೆ. ಇದು ದೇಶದ ಉತ್ತಮ ಭವಿಷ್ಯಕ್ಕೆ ವರದಾನವಾಗಿ. ಭವಿಷ್ಯದ ಸಾವಿರ ವರ್ಷಗಳ ಸಮೃದ್ಧವಾಗಿಸುv ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 07:46 AM (IST)

    Independence Day Live: ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ಶ್ರಮಿಸಬೇಕು

    ದೇಶದ ಮುಂದೆ ಮತ್ತೊಂದು ಅವಕಾಶ ಬಂದಿದೆ. ಅಮೃತಕಾಲದಲ್ಲಿ ನಾವು ಇದ್ದೇವೆ. ಅಮೃತಕಾಲದ ಮೊದಲ ವರ್ಷದಲ್ಲಿದ್ದೇವೆ. ಈ ಸಮಯದಲ್ಲಿ ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ನಾವು ಮುಂದೆ ಬಂದರೇ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದು.

  • 15 Aug 2023 07:43 AM (IST)

    Independence Day Live: ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು

    ನವದೆಹಲಿ: ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು. ದೇಶದ ನಾರಿ, ಯುವ, ರೈತ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದರು. ಅನೇಕ ಮಹಾಪುರಷರು ದೇಶದ ಸ್ವಾತಂತ್ರ್ಯಕ್ಕಾಗಿ, ಗುಲಾಮದಿಂದ ಹೊರಬಹರುಲು ಶ್ರಮಿಸಿದರು ಎಂದು ಪ್ರಧಾನಿ ಮೋದಿ ಹೇಳಿದರು.

  • 15 Aug 2023 07:41 AM (IST)

    Independence Day Live: ದೇಶ ಮಣಿಪುರದ ಜನರ ಜೊತೆ ಇರುತ್ತದೆ

    ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರದಿಂದ ಅನೇಕರು ಮೃತಪಟ್ಟಿದ್ದಾರೆ
    ದೇಶ ಮಣಿಪುರದ ಜನರ ಜೊತೆ ಇರುತ್ತದೆ. ಮಣಿಪುರದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. 

  • 15 Aug 2023 07:40 AM (IST)

    Independence Day Live: ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ: ಪ್ರಧಾನಿ ಮೋದಿ

    ನವದೆಹಲಿ: ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳುವಳಿ. ಭಗತ್​ಸಿಂಗ್​, ಸುಖದೇವ ಅವರ ತ್ಯಾಗ, ತಪಸ್ಸು, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರಿಗೆ ನಮ್ಮ ನಮನ

     

  • 15 Aug 2023 07:34 AM (IST)

    Independence Day Live: ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

    ನವದೆಹಲಿ: ನವದೇಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ.

  • 15 Aug 2023 07:30 AM (IST)

    Independence Day Celebration Live: ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆ ಮೇಲೆ 10ನೇ ಬಾರಿ ಧ್ವಜಾರೋಹಣ ನೆರವೇರಿಸಿದರು.

  • 15 Aug 2023 07:22 AM (IST)

    Independence Day Celebration Live: ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರ ಆಗಮನ

    ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಕೆಂಪುಕೋಟೆಗೆ ಸಿಡಿಎಸ್​, ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಆಗಮಸಿದ್ದಾರೆ.

  • 15 Aug 2023 07:20 AM (IST)

    Independence Day Celebration Live: ಕೆಂಪುಕೋಟೆಯ ಲಾಹೋರ್ ಗೇಟ್‌ಗೆ  ಆಗಮಿಸಿ ಪ್ರಧಾನಿ ಮೋದಿ

    ನವದೇಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯ ಲಾಹೋರ್ ಗೇಟ್‌ಗೆ  ಆಗಮಿಸಿದ್ದಾರೆ. ರಕ್ಷಣಾ ಸಚಿವರು, ರಕ್ಷಣಾ ಕಾರ್ಯದರ್ಶಿ ಸ್ವಾಗತಿಸಿದರು.

  • 15 Aug 2023 07:11 AM (IST)

    Independence Day Celebration Live: ಗಾಂಧೀಜಿ ಸಮಾಧಿ ಸ್ಥಳ ರಾಜಘಾಟ್​ಗೆ ಪ್ರಧಾನಿ ಮೋದಿ ಭೇಟಿ

    ನವದೆಹಲಿ: 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ನೆರವೇರಿಸಲಿದ್ದು, ಇದಕ್ಕೂ ಮುನ್ನ ಮಹಾತ್ಮಾ ಗಾಂಧೀಜಿ ಸಮಾಧಿ ಸ್ಥಳ ರಾಜಘಾಟ್​ಗೆ ಭೇಟಿ ನೀಡಿ ದರ್ಶನ ಪಡೆದರು.

  • 15 Aug 2023 07:04 AM (IST)

    Independence Day Celebration Live: ಬೆಂಗಳೂರಿನ ಮಾಣಿಕ್​ ಶಾ ಪರೇಡ್​ ಮೈದಾನದಲ್ಲಿ ಸಿಎಂ ಧ್ವಜಾರೋಹಣ

    ಬೆಂಗಳೂರು: ರಾಜ್ಯಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಮನೆಮಾಡಿದೆ. ಬೆಂಗಳೂರಿನ ಮಾಣೆಕ್​ ಶಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಕಲ ಸಿದ್ದತೆಯಾಗಿದ್ದು, ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ತೆರೆದ ಜೀಪ್​ನಲ್ಲಿ ಪರೇಡ್​ ಪರಿವೀಕ್ಷಣೆ, ಗೌರವ ರಕ್ಷೆ ಸ್ವೀಕಾರ ಮಾಡಲಿದ್ದಾರೆ. ಬಳಿಕ ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ  ಭಾಷಣ ಮಾಡಲಿದ್ದಾರೆ.

  • 15 Aug 2023 06:48 AM (IST)

    Independence Day Celebration  Live: ದೇಶದ 1800 ವಿಶೇಷ ಅತಿಥಿಗಳಿಗೆ ಆಹ್ವಾನ

    ನವದೆಹಲಿ: ಕೆಂಪುಕೋಟೆಯ 77ನೇ ಸ್ವಾತಂತ್ರ್ಯ ದಿನಾಚರಣೆಗೆ 31 ಜನ ಕನ್ನಡಿಗರು ಸೇರಿದಂತೆ ದೇಶದ 1800 ವಿಶೇಷ ಅತಿಥಿಗಳಿಗೆ ಆಹ್ವಾನಿಸಲಾಗಿದೆ.

  • 15 Aug 2023 06:46 AM (IST)

    Independence Day Celebration  Live: ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯಿಂದ ಧ್ವಜಾರೋಹಣ

    ದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಂದು ದೆಹಲಿಯ ಕೆಂಪುಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 7.33ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾರೆ. ರಾಷ್ಟ್ರೀಯ ಗೌರವ ಸಲ್ಲಿಕೆ, ಬ್ಯಾಂಡ್ ಮೂಲಕ ರಾಷ್ಟ್ರಗೀತೆ, ಗೌರವ ವಂದನೆ ನೆರವೇರುತ್ತದೆ.

Published On - 6:41 am, Tue, 15 August 23

Follow us on