
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಪತ್ತಿನ ಮರುಹಂಚಿಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ. ಕಾಂಗ್ರೆಸ್ಸಿನ ಕಟ್ಟಾಳು (ಈಗಿಲ್ಲ), ಇಂದಿರಾ ಗಾಂಧಿಯ (Indira Gandhi) ಅನುಯಾಯಿ ಸ್ಯಾಮ್ ಪಿತ್ರೋಡಾ (sam pitroda) ಎಂಬ ಟೆಕ್ನಾಲಜಿ ಮೇಧಾವಿ ಈ ಚರ್ಚೆಯನ್ನು ಹುಟ್ಟುಹಾಕಿದ್ದು ಎಂಬುದು ಗಮನಾರ್ಹ. ಅಂದಿನ ಪ್ರಧಾನ ಮಂತ್ರಿ ಮತ್ತು ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರು “ಆದಾಯ (income) ಮತ್ತು ಸಂಪತ್ತಿನ (wealth) ವಿಷಯದಲ್ಲಿ ಸಮಾನತೆಯನ್ನು ಸಾಧಿಸಲು ತೆರಿಗೆ ಎಂಬ ಅಸ್ತ್ರವನ್ನು ಝಳಪಿಸಿದ್ದರು. 1970 ರ ದಶಕದ ಆರಂಭದಲ್ಲಿ ಅವರ ಸರ್ಕಾರವು ಆದಾಯ ತೆರಿಗೆ ದರಗಳನ್ನು 97.5% ಕ್ಕೆ ಏರಿಸಿತ್ತು. ಹಾಗೆ ನೋಡಿದರೆ ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದಿದ್ದು 1991 ರ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ಸುಧಾರಣೆಗಳ ನಂತರ. ಆದರೆ ಅದಕ್ಕೂ ಮುನ್ನ ಸರ್ಕಾರದ ಸಮಾಜವಾದಿ ಧೋರಣೆಗಳಿಂದಾಗಿ ದೇಶದ ಆರ್ಥಿಕತೆಯು 1980 ರ ದಶಕದವರೆಗೆ ತೀವ್ರವಾಗಿ ಹದಗೆಟ್ಟಿತ್ತು ಎಂಬುದು ದಾಖಲಾರ್ಹವಾಗಿದೆ. ಅದೊಮ್ಮೆ ಇಂದಿರಾ ಗಾಂಧಿಯವರು ‘ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಸಮಾನತೆ ಸಾಧಿಸಲು’ ತೆರಿಗೆಯನ್ನು ಪ್ರಮುಖ ಸಾಧನ ಎಂದು ಎಣಿಸಿದ್ದರು. 1970 ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವು ನೇರ ತೆರಿಗೆ ದರವನ್ನು 93.5% ಕ್ಕೆ ಹೆಚ್ಚಿಸಿತು. ಅದು 1973-74 ರ ವೇಳೆಗೆ 97.5% ಕ್ಕೆ ಏರಿತ್ತು. ಜಾಗತಿಕ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತಿದ್ದ ಸರ್ಕಾರದ ಇಂತಹ ನಡೆ ಆಗ ತೀವ್ರ ಟೀಕೆಗೆ ಗುರಿಯಾಗಿತ್ತು. ತೆರಿಗೆ ಜಾಲದ ವ್ಯಾಪ್ತಿಯನ್ನು ವಿಸ್ತರಿಸುವ ಬದಲು ಕಡಿಮೆ ಸಂಖ್ಯೆಯ ನಿರ್ದಿಷ್ಟ ವರ್ಗದ ಜನರ ಮೇಲೆಯೇ ಹೆಚ್ಚು ತೆರಿಗೆ ವಿಧಿಸುವ ಪ್ರಧಾನಿ ಇಂದಿರಾ...