ಸೈನಿಕ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಧಿಕಾರಿಗಳ ಎಡವಟ್ಟು: ಅಭ್ಯರ್ಥಿಗಳಿಗೆ ನೀಡಿದ ಪ್ರಶ್ನೆಪತ್ರಿಕೆ, OMR ಶೀಟ್ ಅದಲು ಬದಲು

ಸೈನಿಕ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಧಿಕಾರಿಗಳು ಪ್ರಶ್ನೆಪತ್ರಿಕೆ ಹಾಗೂ OMR ಶೀಟ್ ನೀಡುವಾಗ ಎಡವಟ್ಟು ಮಾಡಿರುವ ಘಟನೆ ನಗರದ ಬಾಪೂಜಿ ಪರೀಕ್ಷಾ ಕೇಂದ್ರದಲ್ಲಿ ವರದಿಯಾಗಿದೆ.

ಸೈನಿಕ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಧಿಕಾರಿಗಳ ಎಡವಟ್ಟು: ಅಭ್ಯರ್ಥಿಗಳಿಗೆ ನೀಡಿದ ಪ್ರಶ್ನೆಪತ್ರಿಕೆ, OMR ಶೀಟ್ ಅದಲು ಬದಲು
ಸೈನಿಕ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಧಿಕಾರಿಗಳ ಎಡವಟ್ಟು

Updated on: Feb 07, 2021 | 4:49 PM

ಚಿತ್ರದುರ್ಗ: ಸೈನಿಕ ಶಾಲೆ ಪ್ರವೇಶ ಪರೀಕ್ಷೆ ವೇಳೆ ಅಧಿಕಾರಿಗಳು ಪ್ರಶ್ನೆಪತ್ರಿಕೆ ಹಾಗೂ OMR ಶೀಟ್ ನೀಡುವಾಗ ಎಡವಟ್ಟು ಮಾಡಿರುವ ಘಟನೆ ನಗರದ ಬಾಪೂಜಿ ಪರೀಕ್ಷಾ ಕೇಂದ್ರದಲ್ಲಿ ವರದಿಯಾಗಿದೆ.

ಪರೀಕ್ಷಾ ಅಧಿಕಾರಿಗಳು ಅಭ್ಯರ್ಥಿಗಳಿಗೆ ಆಂಗ್ಲ ಭಾಷೆಯ ಬದಲು ಕನ್ನಡ ಭಾಷೆ ಪತ್ರಿಕೆ ನೀಡಿ ಮತ್ತು ಕನ್ನಡ ಬದಲು ಆಂಗ್ಲ ಭಾಷೆ ಪತ್ರಿಕೆ ಹಾಗೂ OMR ಶೀಟ್ ನೀಡಿರುವ ಘಟನೆ ನಡೆದಿದೆ. ಹಾಗಾಗಿ, ಪರೀಕ್ಷಾ ಕೇಂದ್ರದ ಮುಖ್ಯಸ್ಥರ ವಿರುದ್ಧ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇದೀಗ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಲಾಗುವ ಭೀತಿ ಎದುರಾಗಿದೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ ಕೇಂದ್ರದ ಬಳಿ ಧರಣಿ ನಡೆಸಿದರು.

KGF: BEML ಕಾರ್ಖಾನೆಯಲ್ಲಿ ವಿದ್ಯುತ್ ಹರಿದು ದಿನಗೂಲಿ ನೌಕರ ಸಾವು