FDA ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳ ಹದ್ದಿನ ಕಣ್ಣು; ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ
ಪರೀಕ್ಷೆ ನಡೆಯುವವರೆಗೆ ಎಸಿಪಿ ವೇಣುಗೋಪಾಲ್ ನೇತೃತ್ವದ ವಿಶೇಷ ತಂಡ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೇ ಸಿಬ್ಬಂದಿ ಫೋನ್ ಕಾಲ್ಸ್ ಮತ್ತು ಕಾರ್ಯ ಚಟುವಟಿಕೆ ಮೇಲೂ ನಿಗಾ ವಹಿಸುತ್ತಿದ್ದಾರೆ.
ಬೆಂಗಳೂರು: ಪರೀಕ್ಷೆಗೂ ಮುನ್ನ ಎಫ್ಡಿಎ ಕೀ ಆನ್ಸರ್ ಸೋರಿಕೆಯಾದ ಹಿನ್ನೆಲೆ ಫೆಬ್ರವರಿ 28ರಂದು ನಡೆಯುವ ಎಫ್ಡಿಎ ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳು ತೀವ್ರ ನಿಗಾವಹಿಸುತ್ತಿದ್ದಾರೆ.
ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡುವ ವೇಳೆಯಿಂದ ಹಿಡಿದು ಪರೀಕ್ಷೆ ನಡೆಯುವವರೆಗೆ ಎಸಿಪಿ ವೇಣುಗೋಪಾಲ್ ನೇತೃತ್ವದ ವಿಶೇಷ ತಂಡ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೇ ಸಿಬ್ಬಂದಿ ಫೋನ್ ಕಾಲ್ಸ್ ಮತ್ತು ಕಾರ್ಯ ಚಟುವಟಿಕೆ ಮೇಲೂ ನಿಗಾ ವಹಿಸುತ್ತಿದ್ದಾರೆ.
ಜನವರಿ 24 ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆ ಹಿಂದಿನ ದಿನ (ಜನವರಿ 23) ಪತ್ರಿಕೆ ಸೊರಿಕೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್ಸಿ ಸಿಬ್ಬಂದಿ ಸೇರಿ ಹಲವು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 28ರಂದು ಎಫ್ಡಿಎ ಪರೀಕ್ಷೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿದ್ದು, ಕಳೆದ ಬಾರಿಯಾದ ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ ವಹಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ಸಿಸಿಬಿ ಪೊಲೀಸರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.