Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂಕೋರ್ಟ್

| Updated By: guruganesh bhat

Updated on: Aug 19, 2021 | 4:15 PM

Supreme Court: ಹೋಗಲು ಅನುಮತಿ ನೀಡುವುದಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿತು. ಬಳ್ಳಾರಿಯಲ್ಲಿ ಅಕ್ರಮ ಗಣಿ ಪ್ರಕರಣದ 47 ಸಾಕ್ಷಿಗಳಿದ್ದಾರೆ. 47 ಮಂದಿಯೂ ಬಳ್ಳಾರಿಯ ಸ್ಥಳೀಯ ವ್ಯಕ್ತಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ ಎಂದು ಸಿಬಿಐ ವಾದಿಸಿತು.

Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂಕೋರ್ಟ್
ಸಾಂಕೇತಿಕ ಚಿತ್ರ
Follow us on

ಬಳ್ಳಾರಿಗೆ ತೆರಳಲು 8 ವಾರಗಳ ಕಾಲ ಅನುಮತಿ ನೀಡುವಂತೆ ಜಾಮೀನು ಅರ್ಜಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದೆ. ಬಳ್ಳಾರಿಗೆ ಭೇಟಿ ನೀಡಿದ ಪ್ರತಿಸಲವೂ ಎಸ್‌ಪಿಗೆ ಮಾಹಿತಿ ನೀಡಬೇಕು ಎಂದು ಕೋರ್ಟ್ (Supreme Court)​ ಷರತ್ತು ವಿಧಿಸಿದೆ. ಜನಾರ್ದನ ರೆಡ್ಡಿ ಜಾಮೀನು ಷರತ್ತಿನಲ್ಲಿಯೂ ಸುಪ್ರೀಂಕೋರ್ಟ್ ಮಾರ್ಪಾಟು ಮಾಡಿದ್ದು, ಜಾಮೀನು ಷರತ್ತು ಸಡಿಲಿಕೆ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ಆದರೆ ಜಾಮೀನಿನ ಷರತ್ತಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂದು ಸಿಬಿಐ ಪ್ರತಿಪಾದಿಸಿತ್ತು. ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ಕೊಟ್ಟಾಗ ಕಡಪ, ಅನಂತಪುರ ಜಿಲ್ಲಾ ಎಸ್ಪಿಗಳಿಗೂ ಮಾಹಿತಿ ನೀಡಬೇಕು ಎಂದು ತಿಳಿಸಿದ ಸುಪ್ರೀಂಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಲು ನಿರ್ದೇಶನ ನೀಡಿತು.

ಬಳ್ಳಾರಿಗೆ ಹೋಗಲು ಅನುಮತಿ ನೀಡುವುದಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿತು. ಬಳ್ಳಾರಿಯಲ್ಲಿ ಅಕ್ರಮ ಗಣಿ ಪ್ರಕರಣದ 47 ಸಾಕ್ಷಿಗಳಿದ್ದಾರೆ. 47 ಮಂದಿಯೂ ಬಳ್ಳಾರಿಯ ಸ್ಥಳೀಯ ವ್ಯಕ್ತಿಗಳು. ಆರೋಪಿಯು ಬೇರೆಯವರ ಜಾಗದಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ. ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರೆ ಪ್ರಕರಣ ಬಿದ್ದುಹೋಗುವ ಸಾಧ್ಯತೆಯಿದೆ. ಸ್ಥಳೀಯ ಸಾಕ್ಷಿಗಳ ಪೈಕಿ ಓರ್ವ ವ್ಯಕ್ತಿ ಜನಾರ್ದನ ರೆಡ್ಡಿ ಬೆದರಿಕೆ ಹಾಕಿದ್ದಾರೆಂದು ಪತ್ರ ಬರೆದಿದ್ದಾರೆ ಎಂದು ಸಿಬಿಐ ಪರ ಅಡಿಷನಲ್ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.

ಆದರೆ ಸಿಬಿಐ ಪರ ವಾದ ಮುಂದುವರೆಸಿದ ಮಾಧವಿ ದಿವಾನ್, ‘ಮಾಜಿ ಸಚಿವ ಜನಾರ್ದನ ರೆಡ್ಡಿ ನ್ಯಾಯಾಧೀಶರಿಗೇ ಲಂಚ ನೀಡಿದ್ದಾರೆ. ಇಂಥ ಜನಾರ್ದನ ರೆಡ್ಡಿಯನ್ನು ಹೇಗೆ ನಂಬಲು ಸಾಧ್ಯ? ಎಂದು ಪ್ರಶ್ನಿಸಿದರು. ಅವರು ಸಾಕ್ಷಿಗಳಿಗೆ ಲಂಚ ನೀಡಿ ಉಲ್ಟಾ ಸಾಕ್ಷಿ ಹೇಳುವಂತೆ ಮಾಡುತ್ತಾರೆ. ಇದು ಕೇಸ್ ಮೇಲೆ ಬಹಳ ಪರಿಣಾಮ ಬೀರುತ್ತದೆ. ನ್ಯಾಯಾಧೀಶರುಗಳನ್ನೇ ಸ್ವತಂತ್ರವಾಗಿ ಇರಲು ಬಿಟ್ಟಿಲ್ಲ. ಇನ್ನು ಸಾಕ್ಷಿಗಳನ್ನೂ ಮುಕ್ತವಾಗಿ ಸಾಕ್ಷಿ ಹೇಳಲು ಬಿಡಲ್ಲ. ಇದು ಈ ಪ್ರಕರಣದ ಪ್ರಮುಖ ಅಂಶವಾಗಿದೆ. ಜಾಮೀನು ಷರತ್ತು ಮಾರ್ಪಡಿಸುವ ವಿಶ್ವಾಸ ಮೂಡಿಸಿಲ್ಲ. ಈಗಾಗಲೇ ಎಲ್ಲಾ ಪೂರಕ, ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೋರ್ಟ್ ವಿಚಾರಣೆ ಅವರ ಕಡೆಯಿಂದಲೇ ವಿಳಂಬವಾಗಿದೆ. ಇದರ ಅನುಕೂಲ ಪಡೆಯಲು ಜನಾರ್ಧನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿ ಬಳ್ಳಾರಿಗೆ ತೆರಳಲು 8 ವಾರಗಳ ಅವಧಿ ನೀಡದಂತೆ ಕೇಳಿಕೊಂಡರು.

ಇದನ್ನೂ ಓದಿ: 

ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು

ತಾಲಿಬಾನ್ ಆಡಳಿತದಲ್ಲಿ ಮಕ್ಕಳು ನಲುಗುವುದು ಬೇಡ: ಬ್ರಿಟಿಷ್ ಸೈನಿಕರತ್ತ ಮಕ್ಕಳನ್ನು ಎಸೆದ ಮಹಿಳೆಯರು

(Janardhan Reddy Gets conditional permission from Supreme Court to travel Ballari)

Published On - 4:04 pm, Thu, 19 August 21