ತಾಲಿಬಾನ್ ಆಡಳಿತದಲ್ಲಿ ಮಕ್ಕಳು ನಲುಗುವುದು ಬೇಡ: ಬ್ರಿಟಿಷ್ ಸೈನಿಕರತ್ತ ಮಕ್ಕಳನ್ನು ಎಸೆದ ಮಹಿಳೆಯರು

ವಿಮಾನ ಹತ್ತಲು ಅವಕಾಶ ಸಿಗುವುದಿಲ್ಲ ಎಂದು ಖಚಿತವಾದಾಗ ಮಹಿಳೆಯರು ತಮ್ಮ ಮಕ್ಕಳನ್ನು ಬ್ರಿಟಿಷ್ ಮತ್ತು ಅಮೆರಿಕ ಯೋಧರತ್ತ ಎಸೆದು ವಾಪಸ್ ಹೋಗುತ್ತಿದ್ದಾರೆ.

ತಾಲಿಬಾನ್ ಆಡಳಿತದಲ್ಲಿ ಮಕ್ಕಳು ನಲುಗುವುದು ಬೇಡ: ಬ್ರಿಟಿಷ್ ಸೈನಿಕರತ್ತ ಮಕ್ಕಳನ್ನು ಎಸೆದ ಮಹಿಳೆಯರು
ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಅಫ್ಘಾನ್ ಮಕ್ಕಳನ್ನು ಎತ್ತಿಕೊಂಡಿರುವ ಬ್ರಿಟನ್ ಸೈನಿಕರು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 19, 2021 | 4:50 PM

ಕಾಬೂಲ್: ವಿದೇಶಗಳಿಗೆ ತೆರಳಿ ಆಶ್ರಯ ಪಡೆದುಕೊಳ್ಳುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯರು ವಿಮಾನ ಹತ್ತಲು ಅವಕಾಶ ಸಿಗುವುದಿಲ್ಲ ಎಂದು ಖಚಿತವಾದಾಗ ಮಕ್ಕಳನ್ನು ಬ್ರಿಟಿಷ್ ಮತ್ತು ಅಮೆರಿಕ ಯೋಧರತ್ತ ಎಸೆದು ವಾಪಸ್ ಹೋಗುತ್ತಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬ್ರಿಟನ್ ರಾಜಧಾನಿ ಲಂಡನ್​ನಲ್ಲಿ ರಕ್ಷಣಾ ಇಲಾಖೆಯ ಉನ್ನತ ವಲಯದ ಮನಕಲಕುವಂತೆ ಮಾಡಿದೆ.

ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ. ಹುಟ್ಟಿಬೆಳೆದ ದೇಶದಲ್ಲಿ ಬಾಳುವುದು ಬೇಡ, ಬೇರೆಲ್ಲಾದರೂ ಆಶ್ರಯ ಪಡೆಯೋಣ ಎಂಬ ನಿರ್ಧಾರಕ್ಕೆ ಅಲ್ಲಿನ ಜನರು, ಮುಖ್ಯವಾಗಿ ಮಹಿಳೆಯರು ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದು, ವಿವಿಧ ದೇಶಗಳಿಗೆ ತೆರಳಲು ಯತ್ನಿಸುತ್ತಿರುವ ಈ ಕುಟುಂಬಗಳಲ್ಲಿ ಹಲವರಿಗೆ ದಾಖಲೆಗಳ ಕೊರತೆ ಕಾರಣ ಪಾಶ್ಚಿಮಾತ್ಯ ದೇಶಗಳಿಗೆ ತೆರಳಲು ಅವಕಾಶ ಸಿಗುತ್ತಿಲ್ಲ. ಇಂಥವರು ವಾಪಸ್ ಮನೆಗಳಿಗೆ ಹೋಗುವ ಮೊದಲು ಮಕ್ಕಳನ್ನು ಅಲ್ಲಿಯೇ ಇರುವ ಸೈನಿಕರಿಗೆ ಕೊಟ್ಟು, ಚೆನ್ನಾಗಿ ಬೆಳೆಸುವಂತೆ ಹೇಳುತ್ತಿದ್ದಾರೆ.

ಪಾಲಕರಿಲ್ಲದ ಪುಟ್ಟ ಮಕ್ಕಳನ್ನು ಸ್ವೀಕರಿಸುವುದಿಲ್ಲ ಎಂದು ಯೋಧರು ವಾಪಸ್ ಕೊಟ್ಟರೆ, ಅಲ್ಲಿನ ಮುಳ್ಳುತಂತಿ ಬೇಲಿಯಿಂದಾಚೆಗೆ ಮಕ್ಕಳನ್ನು ಕಳಿಸಲು ಯತ್ನಿಸುತ್ತಿದ್ದಾರೆ. ಕೆಲವರು ಎಸೆಯುತ್ತಿದ್ದಾರೆ. ಈ ಪ್ರಯತ್ನದಲ್ಲಿ ಎಷ್ಟೋ ಮಕ್ಕಳು ಮುಳ್ಳುತಂತಿಗೆ ಸಿಲುಕಿ, ಚರ್ಮ ಹರಿದುಕೊಂಡಿದ್ದಾರೆ. ಅಳು ಕೇಳಲಾಗದ ಬ್ರಿಟಿಷ್ ಯೋಧರು ಮಕ್ಕಳನ್ನು ಸಂತೈಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದಿದ್ದಾರೆ.

ಈಗ ಇಂಥ ಮಕ್ಕಳನ್ನು ಬ್ರಿಟನ್​ಗೆ ಕರೆದೊಯ್ಯುವುದು ಹೇಗೆಂಬ ಪ್ರಶ್ನೆ ಅಲ್ಲಿನ ಆಡಳಿತವನ್ನು ಬಾಧಿಸುತ್ತಿದೆ. ರಾಯಿಟರ್ಸ್​ ಸುದ್ದಿಸಂಸ್ಥೆಯು ಬಿಡುಗಡೆ ಮಾಡಿದ್ದ ವಿಡಿಯೊ ತುಣುಕಿನಲ್ಲಿ ಅಫ್ಘಾನ್ ಕುಟುಂಬವೊಂದರ ದಾಖಲೆಗಳನ್ನು ಪರಿಶೀಲಿಸುವ ಬ್ರಿಟಿಷ್ ಯೋಧರು, ಆ ಕುಟುಂಬದ ಮಕ್ಕಳನ್ನು ಎತ್ತಿಕೊಂಡು ವಿಮಾನ ನಿಲ್ದಾಣ ಪ್ರವೇಶಿಸಲು ಅವಕಾಶ ಕೊಡುತ್ತಾರೆ. ಆ ಮಗುವಿನ ಪರಿಸ್ಥಿತಿ ಮುಂದೆ ಏನಾಯ್ತು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಬ್ರಿಟನ್​ನ ರಕ್ಷಣಾ ವಿಭಾಗದ ಮುಖ್ಯಸ್ಥ ಬೆನ್ ವಾಲೆಸ್, ‘ಈ ಮಗುವಿನ ಪೋಷಕರಿಗೆ ಬ್ರಿಟನ್​ನಲ್ಲಿ ನೆಲೆ ಕಲ್ಪಿಸಲು ಅಫ್ಘಾನಿಸ್ತಾನದಲ್ಲಿರುವ ಬ್ರಿಟನ್ ಅಧಿಕಾರಿಗಳು ಒಪ್ಪಿಕೊಂಡಿರಬೇಕು. ಹೀಗಾಗಿಯೇ ಆ ಮಗುವನ್ನು ನಮ್ಮ ಸೈನಿಕರು ಸ್ವೀಕರಿಸಿರಬಹುದು. ಪೋಷಕರಿಲ್ಲದ ಮಕ್ಕಳನ್ನು ಬ್ರಿಟನ್​ಗೆ ಕರೆತಂದು ಸಾಕಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಅಫ್ಘಾನಿಸ್ತಾನದ ಸಾವಿರಾರು ಜನರು ದೇಶಬಿಟ್ಟು ಹೋಗಲು ಹಾತೊರೆಯುತ್ತಿದ್ದಾರೆ. ಭದ್ರತೆಗೆ ನಿಯೋಜನೆಗೊಂಡಿರುವ ಸೈನಿಕರು ಪರಿಸ್ಥಿತಿ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ನಿಶ್ಯಸ್ತ್ರ ಜನರ ಕಣ್ಣೀರು ಸೈನಿಕರಿಗೆ ತುಂಬಾ ಕಷ್ಟದ ವಿಚಾರ ಎಂದು ಬ್ರಿಟನ್​ನ ಮತ್ತೋರ್ವ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.

(Afghanistan Women in Kabul Airport Throw Babies at Wired Compound Asks Britain Soldiers to take)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಟ್ಟರ್ ಷರಿಯಾ ಕಾನೂನು ಜಾರಿ ಸಾಧ್ಯತೆ, ಮನೆಯಿಂದ ಹೊರ ಬರಲು ಹೆದರುತ್ತಿರುವ ಮಹಿಳೆಯರು

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಶಸ್ತ್ರ ಹಿಡಿದಿದ್ದ ಅಫ್ಘಾನಿಸ್ತಾನದ ಮಹಿಳಾ ಗವರ್ನರ್ ಬಂಧನ

Published On - 3:51 pm, Thu, 19 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ