AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವುದಿಲ್ಲ; ತಾಲಿಬಾನ್ ನಾಯಕ ಹೇಳಿದ್ದೇನು?

Taliban: ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಬ್ದುಲ್ ಘನಿ ಬರದಾರ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಆದರೆ ಹಾಶಿಮಿ,  ಹೈಬತುಲ್ಲಾ ಅಖುಂಡಜಾದ ಮೂವರು ಸಹಚರರಲ್ಲಿ ಯಾರಾದರೂ ಅಧ್ಯಕ್ಷರ ಪಾತ್ರವನ್ನು ವಹಿಸಬಹುದು ಎಂದು ಹೇಳಿದರು

ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಡಳಿತ ಇರುವುದಿಲ್ಲ; ತಾಲಿಬಾನ್ ನಾಯಕ ಹೇಳಿದ್ದೇನು?
ತಾಲಿಬಾನ್ ಹೋರಾಟಗಾರರು
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Aug 19, 2021 | 2:50 PM

Share

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಅಧಿಕಾರ ನಡೆಸಬೇಕು ಎಂಬುದರ ಬಗ್ಗೆ ತಾಲಿಬಾನ್ ತಂಡ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಾಲಿಬಾನ್‌ನ ಹಿರಿಯ ಸದಸ್ಯ ವಹೀದುಲ್ಲಾ ಹಾಶಿಮಿ ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಈ ಗುಂಪು ತನ್ನ ಹಿಂದಿನ ಆಡಳಿತದಂತೆಯೇ ಆಡಳಿತವನ್ನು ಯೋಜಿಸುತ್ತಿರುವುದರಿಂದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯು ಇರುವುದಿಲ್ಲ. ಯಾಕೆಂದರೆ ಅದು ದೇಶದಲ್ಲಿ ಯಾವುದೇ ನೆಲೆಯನ್ನು ಹೊಂದಿಲ್ಲ ಎಂದು ಸದಸ್ಯರು ವಿವರಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ನಾವು ಯಾವ ರೀತಿಯ ರಾಜಕೀಯ ವ್ಯವಸ್ಥೆಯನ್ನು ಅನ್ವಯಿಸಬೇಕು ಎಂಬುದನ್ನು ನಾವು ಚರ್ಚಿಸುವುದಿಲ್ಲ ಏಕೆಂದರೆ ಅದು ಸ್ಪಷ್ಟವಾಗಿದೆ. ಇದು ಶರಿಯಾ ಕಾನೂನು, ಅಷ್ಟೇ” ಎಂದು ಹಾಶಿಮಿ ಹೇಳಿದ್ದಾರೆ.

ದೇಶದ ಮೇಲ್ವಿಚಾರಣೆ ನೋಡಿಕೊಳ್ಳಲಿದೆ ಕೌನ್ಸಿಲ್ ಹಾಶಿಮಿ ಪ್ರಕಾರ ಒಂದು ಕೌನ್ಸಿಲ್ ದೇಶದ ದಿನನಿತ್ಯದ ಚಟುವಟಿಕೆಯ ಮೇಲ್ವಿಚಾರಣೆ ಮಾಡುತ್ತದೆ. ತಾಲಿಬಾನ್‌ನ ಅತ್ಯುನ್ನತ ನಾಯಕ ಹೈಬತುಲ್ಲಾ ಅಖುಂಡಜಾದ ಒಟ್ಟಾರೆ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. 1996 ರಿಂದ 2001 ರವರೆಗೆ ತಾಲಿಬಾನ್‌ಗಳು ಅಫ್ಘಾನಿಸ್ತಾನವನ್ನು ಹೇಗೆ ಆಳಿದರು ಎಂಬಂತೆಯೇ ಇದು ಇರಲಿದೆ. ಆ ಸಮಯದಲ್ಲಿ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ನೆರಳಿನಲ್ಲಿ ಹಿನ್ನೆಲೆಯಲ್ಲಿ ನಿಂತು ದೈನಂದಿನ ಆಡಳಿತವು ಕೌನ್ಸಿಲ್ ನ ಜವಾಬ್ದಾರಿ ಆಗಿತ್ತು.

ಯಾರಾಗಲಿದ್ದಾರೆ ಅಧ್ಯಕ್ಷ? ಗುಂಪಿನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಬ್ದುಲ್ ಘನಿ ಬರದಾರ್ ಅವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಆದರೆ ಹಾಶಿಮಿ,  ಹೈಬತುಲ್ಲಾ ಅಖುಂಡಜಾದ ಮೂವರು ಸಹಚರರಲ್ಲಿ ಯಾರಾದರೂ ಅಧ್ಯಕ್ಷರ ಪಾತ್ರವನ್ನು ವಹಿಸಬಹುದು ಎಂದು ಹೇಳಿದರು. ಬರದಾರ್ ಹೊರತಾಗಿ, ಇತರ ಆಕಾಂಕ್ಷಿಗಳು ಅಂದರೆ ತಾಲಿಬಾನ್ ಅನ್ನು ಸ್ಥಾಪಿಸಿದ ಮುಲ್ಲಾ ಒಮರ್ ಅವರ ಮಗ ಮೌಲವಿ ಯಾಕೂಬ್ ಮತ್ತು ಪ್ರಬಲ ಉಗ್ರ ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿ.

ತಾಲಿಬಾನ್‌ಗಳಿಗೆ ಪೈಲಟ್‌ಗಳಿಲ್ಲ ತಾಲಿಬಾನ್ ತಂಡವು ಪೈಲಟ್‌ಗಳನ್ನು ಹೊಂದಿಲ್ಲದ ಕಾರಣ ಅಫ್ಘಾನ್ ಸರ್ಕಾರದಲ್ಲಿ ಕೆಲಸ ಮಾಡಿದ ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ವಿದೇಶಿ ಪಡೆಗಳು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ವಶಪಡಿಸಿಕೊಂಡಿದ್ದು ಅವರಲ್ಲಿ ಪೈಲಟ್ ಗಳಿಲ್ಲ ಹಾಗಾಗಿ ತಾಲಿಬಾನ್ ಪಡೆಗೆ ಸೇರಲು ಅನೇಕ ಪೈಲಟ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ. “ನಮ್ಮ ಪಡೆಗೆ ಸೇರಲು, ಅವರ ಸಹೋದರರನ್ನು ನಮ್ಮಲ್ಲಿಗೆ ಕರೆತರಲು ಕೇಳಿದ್ದೇವೆ. ನಾವು ಅವರಲ್ಲಿ ಹಲವರಿಗೆ ಕರೆ ಮಾಡಿದೆವು. ಅವರಿಗೆ ಕರೆ ಮಾಡಲು ಮತ್ತು ಅವರ ಕೆಲಸಕ್ಕೆ ಆಹ್ವಾನಿಸಲು (ಇತರರ) ಸಂಖ್ಯೆಗಳನ್ನು ಹುಡುಕುತ್ತಿದ್ದೇವೆ” ಎಂದು ಹಾಶಿಮಿ ಹೇಳಿದರು.

ಹೊಸ ರಾಷ್ಟ್ರೀಯ ಶಕ್ತಿ ವಾಯುಪಡೆಯ ಹೊರತಾಗಿ ತಾಲಿಬಾನ್ ತಮ್ಮ ಸದಸ್ಯರು ಮತ್ತು ಅಫ್ಘಾನ್ ಸೈನಿಕರನ್ನು ಒಳಗೊಂಡಂತೆ ಹೊಸ ರಾಷ್ಟ್ರೀಯ ಪಡೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ. ಅವರಲ್ಲಿ ಹೆಚ್ಚಿನವರು ಟರ್ಕಿ ಮತ್ತು ಜರ್ಮನಿ ಮತ್ತು ಇಂಗ್ಲೆಂಡ್‌ನಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಆದ್ದರಿಂದ ನಾವು ಅವರ ಸ್ಥಾನಕ್ಕೆ ಮರಳಲು ಅವರೊಂದಿಗೆ ಮಾತನಾಡುತ್ತೇವೆ. ಖಂಡಿತವಾಗಿಯೂ ನಾವು ಸೈನ್ಯದಲ್ಲಿ ಕೆಲವು ಸುಧಾರಣೆಗಳನ್ನು ಹೊಂದಲು ಕೆಲವು ಬದಲಾವಣೆಗಳನ್ನು ಹೊಂದಿರುತ್ತೇವೆ, ಆದರೆ ಇನ್ನೂ ನಮಗೆ ಅವರ ಅಗತ್ಯವಿದೆ ಮತ್ತು ನಮ್ಮನ್ನು ಸೇರಲು ಅವರನ್ನು ಕರೆಸಿಕೊಳ್ಳುತ್ತದೆ ಹಾಶಿಮಿ ರಾಯಿಟರ್ಸ್‌ಗೆ ಹೇಳಿದರು.

ಇದನ್ನೂ ಓದಿ:ಅಫ್ಘಾನಿಸ್ತಾನದ 4 ಕಮಾಂಡರ್​ಗಳನ್ನು ಜನರೆದುರೇ ನೇಣಿಗೇರಿಸಿದ ತಾಲಿಬಾನ್; ಇದೇನಾ ಶಾಂತಿ ಸ್ಥಾಪನೆ?

ಇದನ್ನೂ ಓದಿ:ತಾಲಿಬಾನ್ ಬರುತ್ತಿದೆ, ಸಹಾಯ ಮಾಡಿ ಎಂದು ಕಣ್ಣೀರಿಟ್ಟು ಅಮೆರಿಕ ಸೇನೆಯಲ್ಲಿ ವಿನಂತಿಸಿದ ಅಫ್ಘಾನಿಸ್ತಾನದ ಮಹಿಳೆಯರು

(There will be no democratic system at Afghanistan says Taliban leader Waheedullah Hashimi)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್